Site icon Vistara News

ಬೈಕ್-ಟ್ರಕ್ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸವಾರರ ದುರ್ಮರಣ

ದುರ್ಮರಣ

ಬೆಳಗಾವಿ: ಜಿಲ್ಲೆಯ ‌ರಾಮದುರ್ಗ ತಾಲೂಕಿನ ‌ಹಲಗತ್ತಿ ಗ್ರಾಮದ ಬಳಿ ಬೈಕ್-ಟ್ರಕ್ ಮುಖಾಮುಖಿ ಡಿಕ್ಕಿಯಾಗಿ ‌ಇಬ್ಬರು ಬೈಕ್‌ ಸವಾರರು ಮೃತಪಟ್ಟಿದ್ದಾರೆ.

ಹಣಮಾಪುರದ ಅರ್ಜುನ ಬಂಡಿವಡ್ಡರ (40), ಓಬಳಾಪುರದ ಸುವರ್ಣ ಹೊಳೆನ್ನವರ (28) ಮೃತ‌ರು. ಮುದಕವಿಯಿಂದ ಹಲಗತ್ತಿ ಕಡೆಗೆ ಬರುತ್ತಿದ್ದ ಬೈಕ್, ಹಲಗತ್ತಿಯಿಂದ ಮದಕವಿ ಕಡೆಗೆ ಹೊರಟಿದ್ದ ಟ್ರಕ್ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ‌ರಾಮದುರ್ಗ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ | Road Accident | ಸ್ಕೂಟರ್‌ಗೆ ಕೆಎಸ್‌ಆರ್‌ಟಿಸಿ ಡಿಕ್ಕಿ; ಸ್ಥಳದಲ್ಲೇ ಸವಾರ ಸಾವು, ಮತ್ತೊಬ್ಬ ಗಂಭೀರ

Exit mobile version