ಬೆಳಗಾವಿ: ಮುಂಗಾರು ತಡವಾಗಿರುವುದರಿಂದ ಉತ್ತರ ಕರ್ನಾಟಕ ನೀರಿಗಾಗಿ ಪರಿತಪಿಸುತ್ತಿದೆ. ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸಂಬರಗಿ ಗ್ರಾಮದವರು ಮಳೆ ಬರಲಿ ಎಂದು ಕತ್ತೆಗಳಿಗೆ ಮದುವೆ (donkey marriage) ಮಾಡಿಸಿದ್ದು, ವೈರಲ್ (Viral news) ಆಗಿದೆ.
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ಮಳೆಯಾಗದೇ ಕುಡಿಯುವ ನೀರಿಗೆ ಹಾಹಾಕಾರ ಎದ್ದಿದೆ. ಬರಗಾಲದ ಆತಂಕವೂ ಮೂಡಿದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಸಂಬರಗಿ ಗ್ರಾಮದಲ್ಲಿ ವರುಣನ ಆಗಮನಕ್ಕೆ ಪ್ರಾರ್ಥಿಸಿ ಶಾಸ್ತ್ರೋಕ್ತವಾಗಿ ಕತ್ತೆಗಳಿಗೆ ಮದುವೆ ಮಾಡಿಸಲಾಯಿತು.
ಕತ್ತೆಗಳಿಗೆ ಮದುವೆ ಮಾಡಿಸಿದರೆ ಮಳೆ ಬರುತ್ತೆ ಎಂಬ ನಂಬಿಕೆ ಈ ಭಾಗದ ರೈತಾಪಿ ಜನರಲ್ಲಿದೆ. ಈ ಹಿಂದೆ ಹೀಗೆ ಮಾಡಿ ಮಳೆ ಆಗಮಿಸಿದ ನಿದರ್ಶನಗಳನ್ನು ಜನ ನೆನೆಯುತ್ತಾರೆ. ಈ ಹಿನ್ನೆಲೆಯಲ್ಲಿ, ಕತ್ತೆಗಳಿಗೆ ಮದುವೆ ಮಾಡಿಸಿ ದೇವರಲ್ಲಿ ಪ್ರಾರ್ಥನೆ ಜನ ಮಾಡಿದ್ದಾರೆ. ಕತ್ತೆಗಳಿಗೆ ಬಿಳಿ ಪಂಚೆ, ಸೀರೆ ತೊಡಿಸಿ ತಿಲಕವಿಟ್ಟು ತಾಳಿ ಕಟ್ಟಿಸಿ ವಾದ್ಯಮೇಳದೊಂದಿಗೆ ಮದುವೆ ಗ್ರಾಮಸ್ಥರು ಮಾಡಿದರು. ಕತ್ತೆಗಳು ನಾಚಿಕೊಂಡು ನಿಂತಿದ್ದವು!
ಇದನ್ನೂ ಓದಿ: Maneka Gandhi: ಕತ್ತೆ ಹಾಲಿನ ಸಾಬೂನು ಬಳಸಿದರೆ ಸ್ತ್ರೀಯರ ಸೌಂದರ್ಯವರ್ಧನೆ; ಮನೇಕಾ ಗಾಂಧಿ ಹೇಳಿಕೆ