ಚಿಕ್ಕೋಡಿ: ತುಂಬಿ ಹರಿವ ಹಳ್ಳದಲ್ಲಿ ಶಾಲಾ ಬಸ್ (School bus) ಚಲಾಯಿಸಿ ಮಕ್ಕಳ ಜೀವದ ಜೊತೆಗೆ ಚಾಲಕ ಚೆಲ್ಲಾಟ ನಡೆಸಿದ ಘಟನೆ ಬೆಳಗಾವಿ (Belagavi news) ಜಿಲ್ಲೆಯ ಹುಕ್ಕೇರಿ ತಾಲೂಕಿನ ಎಲಿಮುನ್ನೋಳಿ ಗ್ರಾಮದಲ್ಲಿ (Viral News) ನಡೆದಿದೆ.
ಎಲಿಮುನ್ನೋಳಿ ಗ್ರಾಮದ ಬೀರೇಶ್ವರ ಶಿಕ್ಷಣ ಸಂಸ್ಥೆಯ ಶಾಲಾ ವಾಹನ 20ಕ್ಕೂ ಹೆಚ್ಚು ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿತ್ತು. ಭಾರಿ ಮಳೆಗೆ ಹಳ್ಳದಿಂದ ರಸ್ತೆಗೆ ನೀರು ನುಗ್ಗಿದ್ದು, ಅಪಾಯ ಮಟ್ಟ ಮೀರಿ ಹರಿಯುತ್ತಿರುವ ನೀರಿನಲ್ಲಿ ಚಾಲಕ ಅತಿಯಾದ ಆತ್ಮವಿಶ್ವಾಸದಿಂದ ಬಸ್ ಚಲಾಯಿಸಲು ಮುಂದಾಗಿದ್ದಾನೆ. ಅರ್ಧ ದಾರಿಯಲ್ಲಿ ಗುಂಡಿಯಲ್ಲಿ ಬಸ್ ಅರ್ಧ ಮಗುಚಿಕೊಂಡಿದೆ. ಮಕ್ಕಳನ್ನು ಪಾರು ಮಾಡಲಾಗಿದೆ.
ಭಾರಿ ಅನಾಹುತಕ್ಕೆ ಕಾರಣವಾಗಬಹುದಾಗಿದ್ದ ಚಾಲಕನ ಉಡಾಫೆ ಚಾಲನೆಯನ್ನು ಗ್ರಾಮಸ್ಥರು ಖಂಡಿಸಿ ಆತನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ನಿನ್ನೆ ಹುಕ್ಕೇರಿ ತಾಲೂಕಿನ ವಿವಿಧೆಡೆ ಭಾರಿ ಮಳೆ ಸುರಿದಿದ್ದು, ಹಳ್ಳಗಳು ತುಂಬಿಕೊಂಡಿವೆ. ಭಾರಿ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ.
ಇದನ್ನೂ ಓದಿ: Weather Update: ಭಾರತದಲ್ಲಿ ಮುಗೀತು ಮಳೆಗಾಲ! ಎಷ್ಟು ಮಳೆ ಕೊರತೆ, ಬರಗಾಲ ಪಕ್ಕಾ?