ಬಳ್ಳಾರಿ: ಬಳ್ಳಾರಿಯ ಶ್ರೀ ಗುರು ಪುಷ್ಕರ ಸೇವಾ ಸಮಿತಿಯ ವತಿಯಿಂದ ಬಳ್ಳಾರಿ ನಗರದಲ್ಲಿ ಉಚಿತ ಮೊಣಕಾಲಿನ ಕೀಲು ನೋವು ಚಿಕಿತ್ಸಾ ಶಿಬಿರವನ್ನು (Ballari News) ಹಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: Golden Star Ganesh: ಗಣೇಶ್ಗೆ ಶುರುವಾಗಿದೆ ಗೋಲ್ಡನ್ ಟೈಮ್: ಫ್ಯಾನ್ಸ್ ಶೋ ಹೌಸ್ ಫುಲ್!
ತಾರಾನಾಥ ಸರ್ಕಾರಿ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ ಈ ಶಿಬಿರದಲ್ಲಿ ಮೊಣಕಾಲಿನ ಕೀಲು ನೋವು ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ನಡೆಯಿತು.
ಶಿಬಿರದಲ್ಲಿ 350ಕ್ಕೂ ಹೆಚ್ಚು ರೋಗಿಗಳಿಗೆ ತಪಾಸಣೆ ನಡೆಸಲಾಯಿತು.
ಇದನ್ನೂ ಓದಿ: Gold Rate Today: ಚಿನ್ನದ ಬೆಲೆಯಲ್ಲಿ ತುಸು ಇಳಿಕೆ; ಇಂದಿನ ಬೆಲೆ ಚೆಕ್ ಮಾಡಿ
ಈ ಸಂದರ್ಭದಲ್ಲಿ ತಾರಾನಾಥ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ರಾಜಶೇಖರ ಗಿಣಗೇರ, ಡಾ.ಕೊಟ್ರೇಶ್, ಡಾ. ತಮೀಮ್, ಡಾ. ರಾಮಲಿಂಗ ಹೂಗಾರ, ಡಾ.ತಾಟ್ಲೆ, ಡಾ. ಲಲಿತಾ, ಡಾ. ಸುಷ್ಮಿತಾ ಹಾಗೂ ಎಸ್.ಎಸ್. ಕೇವಲ್ಚಂದ್ ವಿನಾಕಿಯಾ, ಶ್ರೀ ಗುರು ಪುಷ್ಕರ ಸೇವಾ ಸಮಿತಿಯ ಅಧ್ಯಕ್ಷ ಅಶೋಕ್ ಭಂಡಾರಿ, ದೀಪೇಶ್ ಪರಾಖ್ ಮತ್ತು ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.