Site icon Vistara News

Ballari News: ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ಲಾರಿ ವಶ; ಆರೋಪಿಯ ಬಂಧನ

illegally transported ration rice seized

ಸಿರುಗುಪ್ಪ: ಅಕ್ರಮವಾಗಿ ಪಡಿತರ ಅಕ್ಕಿ ಸಾಗಿಸುತ್ತಿದ್ದ ವೇಳೆ ಸಿರಿಗೇರಿ ಠಾಣಾ ಪೊಲೀಸರು (Sirigeri Police Station) ದಾಳಿ ನಡೆಸಿ, ಲಾರಿ (Lorry) ಸಮೇತ ಆರೋಪಿಯನ್ನು ಬಂಧಿಸಿರುವ ಘಟನೆ ತಾಲೂಕಿನ ಶಾನವಾಸಪುರದ ಬಳಿ ಜರುಗಿದೆ.

ಲಾರಿ ಚಾಲಕ ನಾಗೇಂದ್ರ ಬಂಧಿತ ಆರೋಪಿ. ದಾಳಿಯಲ್ಲಿ 6.45 ಲಕ್ಷ ರೂ. ಮೌಲ್ಯದ 1145 ಪಡಿತರ ಅಕ್ಕಿ ಚೀಲಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತನಿಖೆ ನಡೆಸಿದ ವೇಳೆ ಹೊಳಗುಂದ ಗ್ರಾಮ ನಿವಾಸಿ ಕಾಶಿಗೌಡ ಎಂಬುವರರಿಗೆ ಸೇರಿದ ಮಾಲು ಎಂದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Drowned in Canal : ಕಾಲುವೆಯಲ್ಲಿ ಈಜಲು ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ನೀರುಪಾಲು

ಆಹಾರ ನಿರೀಕ್ಷಕ ಜಿ. ಮಹಾರುದ್ರಗೌಡ ನೀಡಿದ ದೂರಿನ ಮೇರೆಗೆ ಸಿರುಗುಪ್ಪ ಉಪ ವಿಭಾಗ ಡಿವೈಎಸ್ಪಿ ಎಸ್. ಒಡೆಯರ್, ತೆಕ್ಕಲಕೋಟೆ ಸಿಪಿಐ ಸುಂದರೇಶ್ ಮಾರ್ಗದರ್ಶನದಲ್ಲಿ ಸಿರಿಗೇರಿ ಠಾಣೆ ಪಿಎಸ್ಐ ಶ್ರೀನಿವಾಸಲು, ಸಿಬ್ಬಂದಿ ಶಿವರಾಯಪ್ಪ, ಹುಲಿಕುಂಟೆಪ್ಪ, ರಾಮಕೃಷ್ಣ, ಚಂದ್ರಶೇಖರ, ಪ್ರಭಾಕರ, ವಿನೋದ ಗೌಡ, ದಿವಾಕರ ಅವರು ಕಾರ್ಯಾಚರಣೆ ನಡೆಸಿದ್ದಾರೆ. ಈ ಕಾರ್ಯಕ್ಕೆ ಎಸ್ಪಿ ರಂಜಿತ್ ಬಂಡಾರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅಕ್ರಮ ಮರಳು ಸಾಗಿಸುತ್ತಿದ್ದ ಟ್ರಾಕ್ಟರ್‌ಗಳ ವಶ

ಸಿರುಗುಪ್ಪ ತಾಲೂಕಿನ ಉತ್ತನೂರು ಹಾಗೂ ಕೂರಿಗನೂರು ಗ್ರಾಮಗಳಲ್ಲಿ ಅಕ್ರಮ ಮರಳು ಸಾಗಿಸುತ್ತಿದ್ದ ಟ್ರಾಕ್ಟರ್‌ಗಳನ್ನು ಸಿರಿಗೇರಿ ಠಾಣೆಯ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ದಾಳಿಯಲ್ಲಿ 6.56 ಲಕ್ಷ ರೂ. ಮೌಲ್ಯದ ಎರಡು ಎಂಜಿನ್ ಹಾಗೂ ಮೂರು ಟ್ರಾಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಕ್ರಮ ಮರಳು ಸಾಗಿಸುತ್ತಿದ್ದ ಟ್ರಾಕ್ಟರ್‌ಗಳನ್ನು ಸಿರಿಗೇರಿ ಠಾಣೆಯ ಪೊಲೀಸರು ವಶಪಡಿಸಿಕೊಂಡಿರುವುದು.

ಇದನ್ನೂ ಓದಿ: Viral Video: ಚಲಿಸುತ್ತಿರುವ ಕಾರಿನಿಂದಲೇ ಪಟಾಕಿ ಸಿಡಿಸಿದ ಪುಂಡರು; ನೆಟ್ಟಿಗರಿಂದ ಕ್ಲಾಸ್

ಸಿರುಗುಪ್ಪ ಉಪ ವಿಭಾಗ ಡಿವೈಎಸ್ಪಿ ಎಸ್. ಒಡೆಯರ್, ತೆಕ್ಕಲಕೋಟೆ ಸಿಪಿಐ ಸುಂದರೇಶ್ ಮಾರ್ಗದರ್ಶನದಲ್ಲಿ ಸಿರಿಗೇರಿ ಠಾಣೆ ಪಿಎಸ್ಐ ಶ್ರೀನಿವಾಸಲು, ಸಿಬ್ಬಂದಿ ಶಿವರಾಯಪ್ಪ, ಹುಲಿಕುಂಟೆಪ್ಪ, ರಾಮಕೃಷ್ಣ, ಚಂದ್ರಶೇಖರ, ಪ್ರಭಾಕರ, ವಿನೋದ ಗೌಡ, ದಿವಾಕರ ಅವರು ಕಾರ್ಯಾಚರಣೆ ನಡೆಸಿದ್ದಾರೆ.

Exit mobile version