ಬಳ್ಳಾರಿ: ಅನುಮಾನಾಸ್ಪದವಾಗಿ ಆಟೋದಲ್ಲಿ ತಿರುಗಾಡುತ್ತಿದ್ದ ವೇಳೆ ಬ್ರೂಸ್‌ಪೇಟೆ ಠಾಣಾ ಪೊಲೀಸರು ಇಬ್ಬರನ್ನು ಬಂಧಿಸಿ, ಬಂಧಿತರಿಂದ 3.66 ಲಕ್ಷ ರೂ. ಮೌಲ್ಯದ ಆಟೋ (Auto), ಬ್ಯಾಟರಿಗಳು (Battery) ಹಾಗೂ 60 ಗ್ಯಾಸ್ ಸಿಲಿಂಡರ್‌ಗಳನ್ನು (Gas Cylinders) ವಶಪಡಿಸಿಕೊಂಡಿರುವ ಘಟನೆ ನಗರದ ಹೊಸ ಬಸ್ ನಿಲ್ದಾಣ ಬಳಿ ಜರುಗಿದೆ.
ನಗರದ ವಿನಾಯಕ ನಗರ ನಿವಾಸಿಗಳಾದ ಎ.ಮಧುಬಾಬು, ಎನ್. ಅನಿಲಕುಮಾರ್ ಎಂಬುವವರೇ ಬಂಧಿತ ಆರೋಪಿಗಳು. ಬಳ್ಳಾರಿ ಟೈಮ್ಸ್ ಶಾಫ್ ನಲ್ಲಿ ಒಂದು ಯುಪಿಎಸ್ ಬ್ಯಾಟರಿ ಮತ್ತು ಇನ್‌ವರ್ಟರ್‌ಗಳನ್ನು ಆರೋಪಿಗಳು ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿದುಬಂದಿದೆ.
ಹೆಚ್ಚಿನ ವಿಚಾರಣೆ ನಡೆಸಿದ ವೇಳೆ ನಗರದ ಬೇರೆ ಬೇರೆ ಕಡೆಗಳಲ್ಲಿ ನಾಲ್ಕು ಯಪಿಎಸ್ ಬ್ಯಾಟರಿ, ಎರಡು ಇನ್‌ವರ್ಟರ್, ಮೂರು ಚಿಕ್ಕ ಬ್ಯಾಟರಿ ಮತ್ತು ವಿವಿಧ ಕಂಪನಿಯ 60 ಗ್ಯಾಸ್ ಸಿಲಿಂಡರ್ ಕಳ್ಳತನ ಮಾಡಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Big Pumpkin: ಹಿತ್ತಲಿನಲ್ಲಿ ಯಾರೂ ಎತ್ತಲಾರದಂಥ 1247 ಕೆಜಿ ತೂಕದ ಕುಂಬಳಕಾಯಿ ಬೆಳೆದ ಶಿಕ್ಷಕ!
ಈ ಕುರಿತು ಬ್ರೂಸ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.