Site icon Vistara News

Ballari News: ಬಳ್ಳಾರಿಯಲ್ಲಿ 472.01 ಲೀ. ಮದ್ಯ, 26.33 ಕೆ.ಜಿ ಬೆಳ್ಳಿ, ನಗದು ವಶ

Ballari news violation of model code of conduct liquor and Silver cash seized dc information

ಬಳ್ಳಾರಿ: ಲೋಕಸಭೆ ಸಾರ್ವತ್ರಿಕ ಚುನಾವಣೆ (Lok Sabha Election) ಅಂಗವಾಗಿ ಜಿಲ್ಲೆಯಾದ್ಯಂತ ಚೆಕ್‍ಪೋಸ್ಟ್‌ಗಳಲ್ಲಿ ಬಿಗಿಭದ್ರತೆಯಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಬುಧವಾರ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿ ಅನಧಿಕೃತವಾಗಿ ಸಾಗಿಸುತ್ತಿದ್ದ 472.01 ಲೀಟರ್ (ರೂ.1,85,378 ಮೌಲ್ಯ) ಮದ್ಯ, 26.33 ಕೆ.ಜಿ. ಬೆಳ್ಳಿ (7,37,240 ಮೌಲ್ಯ) ಮತ್ತು ಸೂಕ್ತ ದಾಖಲೆಯಿಲ್ಲದ ರೂ. 3,55,500 ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ (Ballari news) ತಿಳಿಸಿದ್ದಾರೆ.

ಅದೇ ರೀತಿಯಾಗಿ 12,000 ಕೆ.ಜಿ (ರೂ. 4956500 ಮೌಲ್ಯ) ಮೈಲ್ಡ್ ಸ್ಟೀಲ್ ಸ್ಕ್ರ್ಯಾಪ್ ಮತ್ತು 2 ವಾಹನಗಳನ್ನು (ರೂ. 40 ಸಾವಿರ ಬೆಲೆ) ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ: Job Alert: ಗಮನಿಸಿ; ಜಲಮಂಡಳಿಯ ಹುದ್ದೆಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ; ಇಲ್ಲಿದೆ ಸಂಪೂರ್ಣ ವಿವರ

ಅಬಕಾರಿ ಪೊಲೀಸರಿಂದ 378.41 ಲೀಟರ್ (ರೂ. 140698 ಮೌಲ್ಯ) ಮದ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಂದ 93.60 ಲೀಟರ್ (ರೂ. 44680 ಮೌಲ್ಯ) ಮದ್ಯ ವಶಪಡಿಸಿಕೊಳ್ಳಲಾಗಿದೆ. ಈವರೆಗೆ ಒಟ್ಟು 32 ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: T20 World Cup 2024: ಟಿ20 ವಿಶ್ವಕಪ್​ ಟೂರ್ನಿಯಲ್ಲಿ ನಂದಿನಿ ಪ್ರಾಯೋಜಕತ್ವ?

ಜಿಲ್ಲೆಯಾದ್ಯಂತ ಚುನಾವಣೆಯ ಮಾದರಿ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಈಗಾಗಲೇ ವಿವಿಧ ತಂಡಗಳನ್ನು ರಚಿಸಲಾಗಿದ್ದು, ಅವುಗಳು ಕಾರ್ಯಪ್ರವೃತ್ತವಾಗಿದೆ. 16 ಫ್ಲೈಯಿಂಗ್ ಸ್ಕ್ವ್ಯಾಡ್, 24 ಎಸ್‍ಎಸ್‍ಟಿ ತಂಡ ಮತ್ತು 7 ಅಬಕಾರಿ ತಂಡ ಕಾರ್ಯ ನಿರ್ವಹಿಸುತ್ತಿವೆ ಎಂದು ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version