Job Alert: ಜಲಮಂಡಳಿಯ ಹುದ್ದೆಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ; ಇಂದೇ ಕೊನೆಯ ದಿನ - Vistara News

ಉದ್ಯೋಗ

Job Alert: ಜಲಮಂಡಳಿಯ ಹುದ್ದೆಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ; ಇಂದೇ ಕೊನೆಯ ದಿನ

Job Alert: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಖಾಲಿ ಇರುವ ಸುಮಾರು 64 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದ್ದು, ಇಂದೇ ಕೊನೆಯ ದಿನ. ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು.

VISTARANEWS.COM


on

jalamandali
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಬೆಂಗಳೂರು: ಸರ್ಕಾರಿ ಉದ್ಯೋಗ ಹೊಂದಬೇಕು ಎನ್ನುವ ಹಲವರ ಕನಸು ನನಸಾಗುವ ದಿನ ಹತ್ತಿರದಲ್ಲೇ ಇದೆ. ಯಾಕೆಂದರೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಖಾಲಿ ಇರುವ ಸುಮಾರು 64 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಈ ಹಿಂದೆ ಅರ್ಜಿ ಸಲ್ಲಿಸಲು ಮಾರ್ಚ್‌ 10 ಕಡೆಯ ದಿನ ಎಂದು ಹೇಳಲಾಗಿತ್ತು. ಇದೀಗ ಅವಧಿಯನ್ನು ಮಾರ್ಚ್‌ 21 (ಗುರುವಾರ)ರ ತನಕ ವಿಸ್ತರಿಸಲಾಗಿದೆ. ಹೀಗಾಗಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಸಹಾಯಕ ಎಂಜಿನಿಯರ್‌ (ಸಿವಿಲ್‌) ಮತ್ತು ಪ್ರಥಮ ದರ್ಜೆ ಲೆಕ್ಕ ಸಹಾಯಕರು (ಗ್ರೂಪ್‌ ಸಿ) ಹುದ್ದೆ ಇದಾಗಿದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು (Job Alert).

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಸಹಾಯಕ ಎಂಜಿನಿಯರ್‌ (ಸಿವಿಲ್‌)-50 ಮತ್ತು ಪ್ರಥಮ ದರ್ಜೆ ಲೆಕ್ಕ ಸಹಾಯಕರು (ಗ್ರೂಪ್‌ ಸಿ)- 14 ಹುದ್ದೆಗಳಿವೆ. ಸಹಾಯಕ ಎಂಜಿನಿಯರ್‌ (ಸಿವಿಲ್‌) ಹುದ್ದೆಗೆ ಅರ್ಜಿ ಸಲ್ಲಿಸುವವರು ಯಾವುದೇ ಅಂಗೀಕೃತ ಸಂಸ್ಥೆ ಅಥವಾ ವಿಶ್ವವಿದ್ಯಾನಿಲಯದಿಂದ ಬಿ.ಇ. ಅಥವಾ ಬಿ.ಟೆಕ್‌ ಪದವಿ ಪಡೆದಿರಬೇಕು. ಅದೇ ರೀತಿ ಬಿ.ಕಾಂ ಪದವಿ ಪಡೆದವರು ಪ್ರಥಮ ದರ್ಜೆ ಲೆಕ್ಕ ಸಹಾಯಕರು ಹುದ್ದೆಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಶುಲ್ಕ

ಸಾಮಾನ್ಯ / ಪ್ರವರ್ಗ 2ಎ / 2ಬಿ / 3ಎ / 3ಬಿ ವಿಭಾಗದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 750 ರೂ. ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ -1, ಮಾಜಿ ಸೈನಿಕ ಮತ್ತು ವಿಶೇಷ ಚೇತನ ಅಭ್ಯರ್ಥಿಗಳು 500 ರೂ. ಅನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕು.

ವಯೋಮಿತಿ

ಅರ್ಜಿ ಸಲ್ಲಿಸುವವರು 35 ವರ್ಷ ಮೀರಿರಬಾರದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ- 1 ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ಅನ್ವಯಯಾಗುತ್ತದೆ.

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಕರ್ನಾಟಕ ಪರೀಕ್ಷಾ ಪ್ರಧಿಕಾರ (KEA) ನಡೆಸುವ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 27,650 ರೂ.-83,900 ರೂ. ಮಾಸಿಕ ವೇತನ ದೊರೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪರೀಕ್ಷಾ ವಿಧಾನ

ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಆಫ್‌ಲೈನ್‌ ಮೂಲಕ ಒಎಂಆರ್‌ ಮಾದರಿಯಲ್ಲಿ ಪರೀಕ್ಷೆ ನಡೆಸಲಾಗುವುದು. ಸಹಾಯಕ ಎಂಜಿನಿಯರ್‌ (ಸಿವಿಲ್‌) ಹುದ್ದೆ: ತಲಾ ನೂರು ಅಂಕಗಳ ಎರಡು ಪ್ರಶ್ನೆ ಪತ್ರಿಕೆ ಇರಲಿದೆ. ಪತ್ರಿಕೆ -1ರಲ್ಲಿ ಸಾಮಾನ್ಯ ಜ್ಞಾನದ ಪ್ರಶ್ನೆಗಳಿದ್ದರೆ, ಪತ್ರಿಕೆ – 2ರಲ್ಲಿ ನಿರ್ದಿಷ್ಟ ವಿಷಯದ ಕುರಿತಾದ ಪ್ರಶ್ನೆಗಳಿರುತ್ತವೆ.
ಪ್ರಥಮ ದರ್ಜೆ ಸಹಾಯಕರು ಹುದ್ದೆ: ತಲಾ ನೂರು ಅಂಕಗಳ ಎರಡು ಪ್ರಶ್ನೆ ಪತ್ರಿಕೆ ಇರಲಿದೆ. ಪತ್ರಿಕೆ -1ರಲ್ಲಿ ಸಾಮಾನ್ಯ ಜ್ಞಾನದ ಪ್ರಶ್ನೆಗಳಿದ್ದರೆ, ಪತ್ರಿಕೆ – 2ರಲ್ಲಿ ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್‌ ಮತ್ತು ಕಂಪ್ಯೂಟರ್‌ ಜ್ಞಾನಕ್ಕೆ ಸಂಬಂಧಪಟ್ಟ ಪ್ರಶ್ನೆಗಳಿರುತ್ತವೆ.

ಪರೀಕ್ಷೆ ನಡೆಯುವ ಸ್ಥಳ

ಈ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ದಾವಣಗೆರೆ, ಧಾರವಾಡ, ಶಿವಮೊಗ್ಗ ಮತ್ತು ತುಮಕೂರು ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಪರೀಕ್ಷೆಯ ಪ್ರವೇಶ ಪತ್ರಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಪ್ರತಿಕಾ ಪ್ರಕಟಣೆ ಮತ್ತು ವೆಬ್‌ಸೈಟ್‌ ಮೂಲಕ ತಿಳಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-23460460ಕ್ಕೆ ಕರೆ ಮಾಡಿ.

ಇದನ್ನೂ ಓದಿ: Job Alert: ನವೋದಯ ವಿದ್ಯಾಲಯ ಸಮಿತಿಯಿಂದ 1,377 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

H-1B ವೀಸಾ ಶುಲ್ಕಕ್ಕೆ ಕೋರ್ಟ್ ಬ್ರೇಕ್: ಟ್ರಂಪ್ ಸರ್ಕಾರದ ಆದೇಶ ಅಸಿಂಧು, ಭಾರತೀಯರು ನಿರಾಳ

VISTARANEWS.COM


on

H-1B ವೀಸಾ ಶುಲ್ಕಕ್ಕೆ ಕೋರ್ಟ್ ಬ್ರೇಕ್

ವಾಷಿಂಗ್ಟನ್: ಅಮೆರಿಕದಲ್ಲಿ H-1B ವೀಸಾ ಹೊಂದಿರುವ ವಿದೇಶಿ ಉದ್ಯೋಗಿಗಳಿಗೆ ಹೆಚ್ಚುವರಿ ಶುಲ್ಕ ವಿಧಿಸುವ ಟ್ರಂಪ್ ಆಡಳಿತದ ನಿರ್ಧಾರಕ್ಕೆ ಕೋರ್ಟ್‌ ಬ್ರೇಕ್‌ ಹಾಕಿದೆ. ಫೆಡರಲ್ ನ್ಯಾಯಾಧೀಶ ಲಿಯೋ ಸೊರೊಕಿನ್ ಮಹತ್ವದ ತೀರ್ಪು ನೀಡಿದ್ದು, H-1Bಯ ವೀಸಾ ಅರ್ಜಿಗಳ ಮೇಲೆ ವಿಧಿಸಲಾಗಿದ್ದ ಹೆಚ್ಚುವರಿ ಶುಲ್ಕವನ್ನು ಅಸಿಂಧು ಎಂದು ಘೋಷಿಸಿದ್ದಾರೆ.

ಈ ತೀರ್ಪಿನಿಂದ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ಸಾವಿರಾರು ಭಾರತೀಯ ಐಟಿ ಉದ್ಯೋಗಿಗಳಿಗೆ ಉದ್ಯೋಗಿಗಳು ನಿರಾಳರಾಗುವಂತೆ ಮಾಡಿದೆ. ವಿದೇಶಿ ಪರಿಣತ ಉದ್ಯೋಗಿಗಳನ್ನು ಅವಲಂಬಿಸಿರುವ ಅಮೆರಿಕದ ಕಂಪನಿಗಳು ಹಾಗೂ ವಿಶ್ವವಿದ್ಯಾಲಯಗಳಿಗೂ ಇದು ಅನುಕೂಲಕರ ಬೆಳವಣಿಗೆಯಾಗಿದೆ.

ಡೊನಾಲ್ಡ್ ಟ್ರಂಪ್ ಸರ್ಕಾರ, ಸ್ಥಳೀಯ ಅಮೆರಿಕನ್ನರಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ವಲಸೆ ನೀತಿಗಳನ್ನು ಕಠಿಣಗೊಳಿಸಲಾಗಿತ್ತು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಟ್ರಂಪ್‌ ಹೊಸ H-1Bಯ ವೀಸಾ ಅರ್ಜಿಗಳಿಗೆ ಒಂದು ಲಕ್ಷ ಡಾಲರ್‌ ಶುಲ್ಕವನ್ನು ಪಾವತಿಸುವ ಘೋಷಣೆಗೆ ಸಹಿ ಹಾಕಿದ್ದರು.

ಆದರೆ ನ್ಯಾಯಾಲಯವು ಸರ್ಕಾರದ ಈ ಕ್ರಮವು ಕಾನೂನುಬದ್ಧ ಅಧಿಕಾರದ ವ್ಯಾಪ್ತಿಯನ್ನು ಮೀರಿ ಜಾರಿಗೊಳಿಸಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದು, ಶುಲ್ಕ ವಿಧಿಸುವ ನಿಯಮವನ್ನು ರದ್ದುಗೊಳಿಸಿದೆ. ಇದರಿಂದ ವಿದೇಶಿ ಪರಿಣತ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಸಂಸ್ಥೆಗಳಿಗೆ ಆರ್ಥಿಕ ಭಾರ ಕಡಿಮೆಯಾಗುವ ಸಾಧ್ಯತೆ ಇದೆ.

ಇದೇ ವೇಳೆ, ಟ್ರಂಪ್ ಆಡಳಿತದ ವಲಸೆ ನೀತಿಗೆ ಇದು ಪ್ರಮುಖ ಹಿನ್ನಡೆಯಾಗಿ ಪರಿಗಣಿಸಲಾಗುತ್ತಿದೆ. ಸರ್ಕಾರವು ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸುತ್ತಿರುವುದಾಗಿ ವರದಿಯಾಗಿದೆ.

ನ್ಯಾಯಾಲಯದ ತೀರ್ಪನ್ನು ಅಮೆರಿಕದಲ್ಲಿರುವ ಭಾರತೀಯ ಮೂಲದ ಉದ್ಯೋಗಿಗಳು ಹಾಗೂ ಉದ್ಯಮ ವಲಯ ಸ್ವಾಗತಿಸಿದ್ದು, H-1B ವೀಸಾ ವ್ಯವಸ್ಥೆಯ ಮೇಲಿನ ಅನಿಶ್ಚಿತತೆ ಕಡಿಮೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ.

Also Read: ಆಗಸ್ಟ್ 15ಕ್ಕೆ ಪಿಂಕ್ ಲೈನ್ ಮೆಟ್ರೋ ಸಂಚಾರ ಆರಂಭ? ದಕ್ಷಿಣ ಬೆಂಗಳೂರಿಗೆ ಸಂಚಾರ ದಟ್ಟಣೆಯಿಂದ ಮುಕ್ತಿ ನಿರೀಕ್ಷೆ

❇️ Follow and Like us on Social Media Platforms

🟦 Facebook : https://www.facebook.com/vistaranews
❤️ Instagram : https://www.instagram.com/vistaranews

Continue Reading

ದೇಶ

Ratan Tata : ಕಾಯಿಲೆ ಬಿದ್ದ ನಾಯಿಗಳನ್ನು ನೋಡಿಕೊಳ್ಳಲು ಇಂಗ್ಲೆಂಡ್‌ನ ರಾಯಲ್‌ ಸನ್ಮಾನವನ್ನೇ ಮಿಸ್‌ ಮಾಡಿದ್ದರು ರತನ್‌ ಟಾಟಾ!

Ratan Tata : ಕಾಯಿಲೆ ಬಿದ್ದ ನಾಯಿಗಳನ್ನು ನೋಡಿಕೊಳ್ಳಲು ಇಂಗ್ಲೆಂಡ್‌ನ ರಾಯಲ್‌ ಸನ್ಮಾನವನ್ನೇ ರತನ್‌ ಟಾಟಾ ಮಿಸ್‌ ಮಾಡಿದ್ದರು. ಬೀದಿ ನಾಯಿಗಳ ಅವರ ಕಾಳಜಿಗೆ ಇಡೀ ಲಂಡನ್‌ ಜನತೆ ತಲೆಬಾಗಿತ್ತು.

VISTARANEWS.COM


on

Ratan Tata missed england's royal honour to take care of sick dogs

ಭಾರತದ ಅತಿ ಶ್ರೇಷ್ಠ ಉದ್ಯಮಿಯಾದ ರತನ್ ಟಾಟಾ (Ratan Tata) ಅವರ ಮಾನವೀಯ ಗುಣಗಳ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ.. ತಮ್ಮ ಸಂಪತ್ತಿನ ಅರ್ಧ ಭಾಗವನ್ನು ದಾನ ಮಾಡಿದ್ದು, ಕೊರೊನಾ ಸಂಕಷ್ಟದ ಸಮಯದಲ್ಲಿ ಪ್ರಧಾನಿ ಪರಿಹಾರ ನಿಧಿಗೆ 500 ಕೋಟಿ ರೂ. ದಾನ ಮಾಡಿದ್ದು.. ಹೀಗೆ ನೂರಾರು ಉದಾಹರಣೆಗಳು ದೊರೆಯುತ್ತವೆ. ಅದಕ್ಕೆ ಇನ್ನೊಂದು ಪುರಾವೆಯು ಇಲ್ಲಿದೆ.

ರತನ್ ಟಾಟಾ ಅವರ ಜೀವಮಾನದ ಸಾಧನೆಗಳನ್ನು ಪರಿಗಣಿಸಿ 2018ರಲ್ಲಿ ಸನ್ಮಾನ ಮಾಡಲು ಇಂಗ್ಲೆಂಡಿನ ರಾಜಕುಮಾರ ಚಾರ್ಲ್ಸ್ ಅವರು ಇಂಗ್ಲೆಂಡಿಗೆ ಆಮಂತ್ರಿಸಿದ್ದರು. ಅದು ರಾಯಲ್ ಮನೆತನದ ಬಕಿಂಗ್ ಹ್ಯಾಮ್ ಅರಮನೆಯಲ್ಲಿ ಏರ್ಪಾಡಾಗಿದ್ದ ರಾಜಗೌರವದ ಸನ್ಮಾನ! ಪ್ರಿನ್ಸ್ ಚಾರ್ಲ್ಸ್ ಈ ಗೌರವದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು ನೂರಾರು ಅತಿ ಗಣ್ಯ ವ್ಯಕ್ತಿಗಳನ್ನು ಕರೆದಿದ್ದರು. ರತನ್ ಟಾಟಾ ಅವರು ಕೂಡ ಈ ಆಮಂತ್ರಣವನ್ನು ಸ್ವೀಕರಿಸಿ ಲಂಡನ್ನಿಗೆ ಹೊರಡುವ ತಯಾರಿ ಮಾಡಿದ್ದರು.

ಅವರನ್ನು ಇಂಗ್ಲೆಂಡಿನಲ್ಲಿ ಸ್ವಾಗತ ಮಾಡಿ ಅವರ ಆತಿಥ್ಯದ ವ್ಯವಸ್ಥೆಯನ್ನು ಮಾಡಲು ಚಾರ್ಲ್ಸ್ ಅವರಿಂದ ನಿಯುಕ್ತ ಆದವರು ಖ್ಯಾತ ಉದ್ಯಮಿಗಳು ಮತ್ತು ಅಂಕಣಕಾರರಾದ ಸುಹೇಲ್ ಸೇಥ ಅವರು. ಸುಹೇಲ್ ಅವರು ನಾಲ್ಕು ದಿನ ಮೊದಲೇ ಲಂಡನ್ನಿಗೆ ಹೋಗಿ ಟಾಟಾ ಅವರನ್ನು ಸ್ವಾಗತ ಮಾಡಲು ಸಿದ್ಧತೆಯನ್ನೂ ಮಾಡಿದ್ದರು.

ಒಮ್ಮೆ ಸುಹೇಲ್ ಅವರು ಯಾವುದೋ ಒಂದು ಕೆಲಸದಲ್ಲಿ ಮುಳುಗಿದ್ದಾಗ ಅವರ ಮೊಬೈಲ್ ಫೋನ್ ಒಂದೇ ಸಮನೆ ಹೊಡೆದುಕೊಳ್ಳಲು ಆರಂಭ ಆಯಿತು. ಸುಹೇಲ್ ಸ್ವಲ್ಪ ಹೊತ್ತಿನ ನಂತರ ಮೊಬೈಲ್ ನೋಡಿದಾಗ ರತನ್ ಟಾಟಾ ಅವರ ಹನ್ನೊಂದು ಮಿಸ್ ಕಾಲ್ ಇತ್ತು! ಯಾಕೆಂದು ಸುಹೇಲ್ ಗಾಬರಿ ಬಿದ್ದು ಟಾಟಾ ಅವರಿಗೆ ಮರು ಕಾಲ್ ಮಾಡಿದರು. ಕಾಲ್ ಕನೆಕ್ಟ್ ಆಯಿತು. ಅಂದು ರತನ್ ಟಾಟಾ ಅವರ ಧ್ವನಿ ನಡುಗುತ್ತಿತ್ತು.

ಅವರು ಹೇಳುತ್ತಾ ಹೋದರು. “ಸುಹೇಲ್ ಸಾರಿ. ನಿಮಗೆ ತೊಂದರೆ ಕೊಡುತ್ತಾ ಇದ್ದೇನೆ. ನಿಮಗೆ ಹೇಗೆ ಹೇಳಬೇಕೋ ಗೊತ್ತಾಗುತ್ತಿಲ್ಲ. ನನ್ನ ಎರಡು ನಾಯಿಗಳಾದ ಟ್ಯಾಂಗೋ ಮತ್ತು ಟಿಟೋಗಳ ಪೈಕಿ ಒಂದು ಇಂದು ತೀವ್ರವಾಗಿ ಅಸ್ವಸ್ಥ ಆಗಿದೆ. ನಿಮಗೆ ಗೊತ್ತು ನಾನು ಎಷ್ಟು ಅವುಗಳನ್ನು ಪ್ರೀತಿ ಮಾಡುತ್ತೇನೆ ಎಂದು. ಇಂಥಹ ಸಂಕೀರ್ಣ ಸನ್ನಿವೇಶದಲ್ಲಿ ನಾನು ನಾಯಿಗಳನ್ನು ಬಿಟ್ಟು ಲಂಡನ್‌ಗೆ ಬರಲು ಸಾಧ್ಯ ಇಲ್ಲ. ನೀವಿದನ್ನು ದಯವಿಟ್ಟು ಪ್ರಿನ್ಸ್ ಚಾರ್ಲ್ಸ್ ಅವರಿಗೆ ತುರ್ತಾಗಿ ತಿಳಿಸಬೇಕು ಮತ್ತು ನಾನು ಅವರ ಕ್ಷಮೆಯನ್ನು ಕೇಳುತ್ತಿದ್ದೇನೆ ಎಂದು ಕೂಡ ತಿಳಿಸಬೇಕು” ಎಂದರು.

ಸುಹೇಲ್ ಅವರಿಗೆ ಏನು ಉತ್ತರ ಹೇಳಬೇಕು ಎಂದು ಗೊತ್ತಾಗಲಿಲ್ಲ. ಅವರು “ರತನ್ ಜಿ. ಇದು ಸಾಮಾನ್ಯ ಕಾರ್ಯಕ್ರಮ ಅಲ್ಲ. ಇಂಗ್ಲಿಷ್ ರಾಜಮನೆತನದ ಗೌರವದ ಕಾರ್ಯಕ್ರಮ. ಸ್ವತಃ ಪ್ರಿನ್ಸ್ ಚಾರ್ಲ್ಸ್ ಮುಂದೆ ನಿಂತು ಈ ಕಾರ್ಯಕ್ರಮ ಏರ್ಪಡಿಸುತ್ತಿದ್ದಾರೆ. ನೂರಕ್ಕೂ ಹೆಚ್ಚಿನ ವಿವಿಐಪಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿದ್ದಾರೆ. ಸ್ವತಃ ಇಂಗ್ಲೆಂಡ್ ರಾಣಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿದ್ದಾರೆ. ಆದ್ದರಿಂದ ನೀವು ನಾಯಿಗಳ ಬಗ್ಗೆ ಬೇರೇನಾದರೂ ವ್ಯವಸ್ಥೆಯನ್ನು ಮಾಡಿ ಲಂಡನ್ನಿಗೆ ಹೊರಡಬೇಕು ಎಂದು ವಿನಂತಿ ಮಾಡುತ್ತೇನೆ” ಎಂದರು.

ಆದರೆ ರತನ್ ಟಾಟಾ ತಮ್ಮ ನಿರ್ಧಾರವನ್ನು ಬದಲಾಯಿಸಲು ಒಪ್ಪಲಿಲ್ಲ. “ನಿಮಗೆ ಗೊತ್ತಿದೆ ನಾನು ನನ್ನ ನಾಯಿಗಳನ್ನು ಎಷ್ಟು ಪ್ರೀತಿ ಮಾಡುತ್ತೇನೆ ಎಂದು. ದಯವಿಟ್ಟು ನನಗೆ ಒತ್ತಾಯ ಮಾಡಬೇಡಿ. ನನ್ನ ಮಾತುಗಳನ್ನು ಪ್ರಿನ್ಸ್ ಚಾರ್ಲ್ಸ್ ಅವರಿಗೆ ವಿನೀತವಾಗಿ ತಲುಪಿಸಿ” ಅಂದು ಫೋನ್ ಇಟ್ಟರು. ಸುಹೇಲ್ ಅವರಿಗೆ ಈಗ ನಿಜವಾಗಿ ಉಭಯ ಸಂಕಟ ಆರಂಭ ಆಯಿತು. ಅವರು ಮರುದಿನವೇ ಮುಂಜಾನೆ ಬಕಿಂಗ್ ಹ್ಯಾಮ್ ಅರಮನೆಗೆ ಹೋದಾಗ ಅಲ್ಲಿ ಎಲ್ಲ ಸಿದ್ಧತೆಗಳೂ ಕೊನೆಯ ಹಂತದಲ್ಲಿ ಇದ್ದವು.

ಅವರು ಸಂಕೋಚದಿಂದ ಪ್ರಿನ್ಸ್ ಚಾರ್ಲ್ಸ್ ಮುಂದೆ ಹೋಗಿ ಟಾಟಾ ಹೇಳಿದ್ದನ್ನು ಪ್ರೀತಿಯಿಂದ ಹೇಳಿದರು. ಅದೇ ಕಾರಣವನ್ನು ಕೂಡ ನಿವೇದನೆ ಮಾಡಿಕೊಂಡರು. ಒಮ್ಮೆ ಚಾರ್ಲ್ಸ್ ಹಣೆಯ ಮೇಲೆ ನೆರಿಗೆಗಳು ಕಂಡುಬಂದವು. ತಕ್ಷಣ ಅವರ ಮೊದಲ ಉದ್ಗಾರ – That’s the man!

“ರತನ್ ಅವರಿಗೆ ಬರಲು ಆಗುವುದಿಲ್ಲ ಎಂದು ನೀವು ಹೇಳಿದಾಗ ನನಗೆ ಒಮ್ಮೆ ಬೇಜಾರು ಆಯಿತು. ಆದರೆ ಅವರು ನೀಡಿದ ಕಾರಣ ನೋಡಿ ನನಗೆ ಅವರ ಬಗ್ಗೆ ತುಂಬ ಹೆಮ್ಮೆ ಅನ್ನಿಸಿತು. ನನಗೆ ಅವರ ಬಗ್ಗೆ ಇರುವ ಗೌರವ, ಪ್ರೀತಿ ಇಮ್ಮಡಿ ಆಗಿದೆ. ನೋ ಪ್ರಾಬ್ಲಂ. ಈ ಕಾರ್ಯಕ್ರಮವನ್ನು ಮುಂದಕ್ಕೆ ಹಾಕೋಣ” ಎಂದು ಚಾರ್ಲ್ಸ್ ಹೇಳಿದರು. ಕೊನೆಗೂ ರತನ್ ಟಾಟಾ ಆ ಕಾರ್ಯಕ್ರಮಕ್ಕೆ ಹೋಗಲಿಲ್ಲ ಮತ್ತು ಆ ಕಾರ್ಯಕ್ರಮವು ಮುಂದೆ ನಡೆಯಲೇ ಇಲ್ಲ!

ಟಾಟಾ ಒಮ್ಮೆ ತಮ್ಮ ಎರಡು ನಾಯಿಗಳ ಬಗ್ಗೆ ಮಾಡಿದ ಟ್ವೀಟ್ ಹೀಗಿದೆ – Tito and Tango seek nothing in return for their affection other than a little love and attention. I miss them terribly when I am away!

ಯಾರೂ ಸುಖಾಸುಮ್ಮನೆ ದೊಡ್ಡವರು ಆಗುವುದಿಲ್ಲ! ಅವೆರಡೂ ರತನ್ ಟಾಟಾ ಸಾಕಿದ ಬೀದಿ ನಾಯಿಗಳು ಆಗಿದ್ದವು!

ಟಾಟಾ ಅವರಿಗೆ ತಮ್ಮ ಜೀವನದ ಆದ್ಯತೆಗಳನ್ನು ನಿರ್ಧಾರ ಮಾಡಲು ಗೊತ್ತಿದೆ ಮತ್ತು ಅವರು ತಮ್ಮ ಆದ್ಯತೆಗಳಿಂದ ಒಂದಿಷ್ಟೂ ವಿಚಲಿತ ಆಗುವುದಿಲ್ಲ. ತಮ್ಮ ಕಂಪೆನಿಯ ಪ್ರತಿ ಉದ್ಯೋಗಿಯನ್ನೂ ಅವರು ಅದೇ ಮಾನವೀಯ ಅಂತಃಕರಣದಿಂದ ನೋಡಿಕೊಳ್ಳುತ್ತಾರೆ ಎಂದು ಅನೇಕರು ಹೇಳಿದ್ದಾರೆ. ಅಂದ ಹಾಗೆ ರತನ್ ಟಾಟಾ ಈವರೆಗೆ ಮದುವೆ ಆಗಿಲ್ಲ! ನಾನು ನಾಲ್ಕು ಬಾರಿ ಮದುವೆಯ ಹೊಸ್ತಿಲಿನ ತನಕ ಬಂದು ಭಯದಿಂದ ಹಿಂದೆ ಹೋಗಿದ್ದೆ ಎಂದವರು ತಮಾಷೆಗೆ ಹೇಳಿದ್ದಾರೆ!

Continue Reading

ದೇಶ

Ratan Tata : ರತನ್‌ ಟಾಟಾ ಕಂಪನಿ ಸೇರಿದ್ದು ಸಾಮಾನ್ಯ ಉದ್ಯೋಗಿಯಾಗಿ! ಉದ್ಯಮ ರಂಗದ ಗುರು ಆಗಿದ್ದೇಗೆ?

Ratan Tata : ತಮ್ಮ ಸಂಪತ್ತಿನ ಬಹುಪಾಲನ್ನು ಆಗಲೇ ದಾನ ಮಾಡಿರುವ ರತನ್‌ ಟಾಟಾ ಅವರು ತಮ್ಮದೇ ಕಂಪನಿಯನ್ನು ಸೇರಿದ್ದು ಒಬ್ಬ ಸಾಮಾನ್ಯ ಉದ್ಯೋಗಿಯಾಗಿ ಎನ್ನುವುದು ಅವರ ದೊಡ್ಡಸ್ತಿಕೆ.

VISTARANEWS.COM


on

Ratan Tata joined the company as an ordinary employee but Why is he the guru of the industry

ಭಾರತದ ಮಹೋನ್ನತ ಬಿಸಿನೆಸ್ ಮ್ಯಾಗ್ನೆಟ್ ರತನ್ ಟಾಟಾ ಪ್ರಧಾನಮಂತ್ರಿಗಳ ಕೊರೊನಾ ತುರ್ತು ಪರಿಹಾರ ನಿಧಿಗೆ 1500 ಕೋಟಿ ರೂಪಾಯಿ ಕೊಡುಗೆ ನೀಡಿದಾಗ ಎಲ್ಲರೂ ಮೂಗಿನ ಮೇಲೆ ಬೆರಳು ಇಟ್ಟಿದ್ದರು! (ಇದು ಎಷ್ಟೋ ರಾಷ್ಟ್ರಗಳ ವಾರ್ಷಿಕ ಬಜೆಟ್‌ಗಿಂತಲೂ ಅಧಿಕ!). ಎಷ್ಟೋ ಸಿರಿವಂತರು ಹೃದಯವಂತರು ಆಗಿರುವುದಿಲ್ಲ. ಆದರೆ ರತನ್ ಟಾಟಾ ಅದಕ್ಕೊಂದು ಅಪವಾದ. ಅವರು ತಮ್ಮ ಸಂಪತ್ತಿನ 60-65% ಭಾಗವನ್ನು ಈಗಾಗಲೇ ದಾನ ಮಾಡಿಯಾಗಿದೆ! ಬೇರೆ ಕಾರ್ಪೊರೇಟ್ ಕಂಪೆನಿಗಳು ತಮ್ಮ ಸಿ ಎಸ್ ಆರ್ ಯೋಜನೆಗಳನ್ನು ರೂಪಿಸಲು ಕೂಡ ರತನ್ ಟಾಟಾ ಮಾದರಿಯಾಗಿ ನಿಂತಿದ್ದರು.

ಟಾಟಾ ಕಂಪೆನಿಗೆ ಒಬ್ಬ ಸಾಮಾನ್ಯ ಉದ್ಯೋಗಿಯಾಗಿ ಸೇರಿದರು!

1937 ರಲ್ಲಿ ಸೂರತ್ ನಗರದಲ್ಲಿ ಜನಿಸಿದ ರತನ್ ಟಾಟಾ ವಿದೇಶಗಳಲ್ಲೇ ಹೆಚ್ಚು ಶಿಕ್ಷಣ ಪಡೆದವರು. ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಕಲಿಕೆ. 1961 ರಲ್ಲಿ ಟಾಟಾ ಕಂಪನಿಯನ್ನು ಒಬ್ಬ ಸಾಮಾನ್ಯವಾದ ಉದ್ಯೋಗಿಯಾಗಿ ಸೇರಿದ ಅವರು ತಮ್ಮ ಕಾರ್ಯಕ್ಷಮತೆ, ಶಿಸ್ತು ಮತ್ತು ದಕ್ಷತೆಯಿಂದ ಎಲ್ಲರ ಮನಗೆದ್ದರು. 1991 ರಲ್ಲಿ ಟಾಟಾ ಸಮೂಹ ಸಂಸ್ಥೆಗಳ ಭೀಷ್ಮ ಜೆ. ಆರ್. ಡಿ. ಟಾಟಾ ಅವರು ಅಧ್ಯಕ್ಷ ಹುದ್ದೆಯಿಂದ ನಿವೃತ್ತರಾಗುವಾಗ ತನ್ನ ಉತ್ತರಾಧಿಕಾರಿಯಾಗಿ ರತನ್ ಟಾಟಾ ಅವರನ್ನು ನೇಮಕ ಮಾಡಿದರು.

ಇದು ಟಾಟಾ ವಿವಿಧ ಕಂಪನಿಗಳ ಮುಖ್ಯಸ್ಥರ ಅಸಾಮಾಧಾನಕ್ಕೆ ಕಾರಣವಾಯಿತು. ಆದರೆ ರತನ್ ಟಾಟಾ ಇದಕ್ಕೆಲ್ಲ ಸೊಪ್ಪು ಹಾಕುವವರೇ ಅಲ್ಲ! ಎಲ್ಲ ಟಾಟಾ ಸಂಸ್ಥೆಗಳನ್ನು ಒಗ್ಗೂಡಿಸಿ ಟಾಟಾ ಸಮೂಹ ಸಂಸ್ಥೆಯಾಗಿ ರೂಪಿಸಿದ್ದು ಅವರ ಜಾಣ ನಡೆಯಾಗಿತ್ತು. ಹಿರಿಯ ತಲೆಗಳನ್ನು ನಿವೃತ್ತಿ ಮಾಡಿ ಹೊಸಬರಿಗೆ ಅವಕಾಶ ನೀಡಿದರು. ಹೊಸ ಆವಿಷ್ಕಾರ, ನಾವೀನ್ಯತೆ, ಜಾಗತಿಕ ದೃಷ್ಟಿಕೋನ, ಆರ್ಥಿಕ ಶಿಸ್ತು, ಪರಿಣಾಮಕಾರಿ ನಿರ್ಧಾರ, ಉತ್ತರದಾಯಿತ್ವ, ಜವಾಬ್ದಾರಿಗಳ ಹಂಚಿಕೆ ಇವುಗಳಿಗೆ ಆದ್ಯತೆ ನೀಡಿದರು. ಆರ್ಥಿಕ ಶಿಸ್ತು ಅವರಲ್ಲಿ ಎದ್ದುಕಾಣುವ ಗುಣ. ತನ್ನ ಉದ್ಯೋಗಿಗಳನ್ನು ತುಂಬಾ ಚೆನ್ನಾಗಿ ವಿಶ್ವಾಸಕ್ಕೆ ತೆಗೆದುಕೊಂಡರು. ಪರಿಣಾಮವಾಗಿ ಅವರ 21 ವರ್ಷಗಳ ಅಧಿಕಾರದ ಅವಧಿಯಲ್ಲಿ ಟಾಟಾ ಸಂಸ್ಥೆಯ ಆದಾಯವು 40 ಪಟ್ಟು ಅಧಿಕವಾಯಿತು! ಲಾಭವು 50 ಪಟ್ಟು ಅಧಿಕವಾಯಿತು! ರತನ್ ಟಾಟಾ ಅವರ ಅವಧಿಯನ್ನು ಭಾರತೀಯ ಉದ್ಯಮ ರಂಗದ ಸುವರ್ಣ ಯುಗ ಎಂದು ಕರೆಯಲಾಯಿತು.

ಟಾಟಾ ಜಗದಗಲ ಬೆಳೆಯಿತು!

ಟಾಟಾ ಸಂಸ್ಥೆಗಳು 100ಕ್ಕೂ ಅಧಿಕ ದೇಶಗಳಲ್ಲಿ ಸ್ಥಾಪನೆಯಾದವು. ಗುಂಡು ಪಿನ್‌ನಿಂದ ಆರಂಭಿಸಿ ಟ್ರಕ್‌ಗಳವರೆಗೆ, ಉಪ್ಪಿನಿಂದ ಆರಂಭಿಸಿ ವಿಮಾನದವರೆಗೆ, ಕೈ ಗಡಿಯಾರದಿಂದ ಆರಂಭಿಸಿ ಚಿನ್ನದ ಮಳಿಗೆಗಳವರೆಗೆ, ಹೋಟೆಲ್ ಉದ್ಯಮದಿಂದ ಆರಂಭ ಮಾಡಿ ನ್ಯಾನೋ ಕಾರುಗಳವರೆಗೆ ಉದ್ಯಮವನ್ನು ವಿಸ್ತಾರ ಮಾಡಿದ ಕೀರ್ತಿಯು ಅವರಿಗೆ ಸಲ್ಲುತ್ತದೆ! ನಷ್ಟದಲ್ಲಿ ಇದ್ದ ಏರ್ ಇಂಡಿಯಾ ಸಂಸ್ಥೆಯನ್ನು ವಹಿಸಿಕೊಂಡು ಭಾರಿ ಲಾಭಕ್ಕೆ ಪರಿವರ್ತನೆ ಮಾಡಿದ ಕೀರ್ತಿ ಟಾಟಾ ಅವರಿಗೆ ಸಲ್ಲುತ್ತದೆ. ಅದೇ ರೀತಿಯಲ್ಲಿ ಬೆಳೆಯುತ್ತಿರುವ ಹಲವು ಉದ್ಯಮಿಗಳಿಗೆ ಅವರು ತಮ್ಮ ಗೆಲುವಿನ ಗುಟ್ಟನ್ನು ಯಾವ ಮುಚ್ಚುಮರೆ ಮಾಡುವುದರಲ್ಲಿ ಟಾಟಾ ಇಂದು ಉದ್ಯಮರಂಗದ ಗುರು ಎಂದು ಕೂಡ ಕರೆಸಿಕೊಂಡಿದ್ದರು.

ಕೊಟ್ಟ ಮಾತಿನಂತೆ ನಡೆದುಕೊಂಡರು ರತನ್ ಟಾಟಾ

75ನೆಯ ವಯಸ್ಸಿನಲ್ಲಿ ಅವರು ತಾವು ಕೊಟ್ಟ ಮಾತಿನಂತೆ ಸೇವಾ ನಿವೃತ್ತಿಯನ್ನು ಘೋಷಿಸಿ ತನ್ನ ಉತ್ತರಾಧಿಕಾರಿಯನ್ನು ನೇಮಿಸಿದರು. ಆದರೆ ಆಡಳಿತ ಮಂಡಳಿ, ಶೇರ್ ಹೋಲ್ಡರ್ಸ್, ಸಹಯೋಗಿ ಸಂಸ್ಥೆಗಳು ಅವರ ಮೇಲೆ ಪೂರ್ತಿ ಭರವಸೆ ಇಟ್ಟು ಅವರನ್ನೇ ಟಾಟಾ ಸಂಸ್ಥೆಗಳು ಹಾಗೂ ಟ್ರಸ್ಟ್‌ಗಳ ‌ಹೆಡ್ ಆಗಿ ಮುಂದುವರಿಸಿಕೊಂಡು ಬಂದಿದ್ದರು. ಸಂಸ್ಥೆಗಳ ಲಾಭದ 51% ಗಿಂತ ಅಧಿಕ ಪಾಲನ್ನು ಅವರು ಟಾಟಾ ಸಮಾಜಸೇವಾ ಟ್ರಸ್ಟ್ ಗಳಿಗೆ ಹಂಚಿಕೆ ಮಾಡುತ್ತಿದ್ದರು. ಕೇವಲ 1% ಗಿಂತ ಕಡಿಮೆ ಲಾಭವನ್ನು ಪಡೆಯುತ್ತಿದ್ದರು. ಅವರಿಗೆ ಪದ್ಮಭೂಷಣ, ಪದ್ಮ ವಿಭೂಷಣ ಪ್ರಶಸ್ತಿಗಳು ಈಗಾಗಲೇ ದೊರೆತಿದ್ದು ಭಾರತರತ್ನ ಮಾತ್ರ ಬಾಕಿಯಿದೆ!

ನೊಂದವರ, ಬಡವರ ಬಗ್ಗೆ ಕಾಳಜಿ ಅವರಿಗೆ ರಕ್ತದಲ್ಲೇ ಬಂದಿದ್ದು ಜಗತ್ತಿನ ಅತೀ ಕಡಿಮೆ ಬೆಲೆಯ ಟಾಟಾ ನ್ಯಾನೋ ಬಡವರ ಕಾರು( ಬೆಲೆ ಕೇವಲ ಒಂದು ಲಕ್ಷ ರೂಪಾಯಿ) ರೂಪಿಸಿದ ಕೀರ್ತಿ ಅವರದ್ದು! ಬೀದಿ ನಾಯಿಗಳನ್ನು ಪೋಷಣೆ ಮಾಡುವುದರಲ್ಲಿ ಕೂಡ ಅವರು ಮಾದರಿ ಆಗಿದ್ದರು. ಒಮ್ಮೆ ತನ್ನ ಬೀದಿನಾಯಿಗಳ ಅನಾರೋಗ್ಯದ ಕಾರಣಕ್ಕೆ ಇಂಗ್ಲೆಂಡ್ ಅರಮನೆಯ ಅದ್ದೂರಿ ಸನ್ಮಾನ ನಿರಾಕರಿಸಿ ಅವರು ಭಾರೀ ಸುದ್ದಿಯಾಗಿದ್ದರು.

ರತನ್ ಟಾಟಾ ಎಲ್ಲರಂತಲ್ಲ!

ಸಂಪೂರ್ಣ ಸಸ್ಯಾಹಾರಿ ಆದ, ಮದ್ಯಪಾನದಿಂದ ಗಾವುದ ದೂರ ಇರುವ, ನಾಚಿಕೆ ಸ್ವಭಾವದ, ಹೆಚ್ಚು ಏಕಾಂತವನ್ನು ಬಯಸುವ, ಸಾಮಾಜಿಕ ಕಾರ್ಯಕ್ರಮಗಳಿಗೆ ಕಡಿಮೆ ಬರುವ, ಪ್ರಚಾರದಿಂದ ದೂರ ಇರುವ, ಪಿಯಾನೋ ನುಡಿಸುವ, ಹಳೆ ಹಿಂದಿ ಸಿನಿಮಾ ಗೀತೆಗಳನ್ನು ಗುನುಗುವ, ಸರಳವಾಗಿ ಬದುಕುತ್ತಿರುವ, ಬೀದಿ ನಾಯಿಗಳನ್ನು ಪೋಷಿಸುವ, ತುಂಬಾ ಓದುವ ಅಭ್ಯಾಸವಿರುವ ರತನ್ ಟಾಟಾ ತಮ್ಮ 86ನೇ ವಯಸ್ಸಿಗೆ ವಿದಾಯ ಹೇಳಿದ್ದಾರೆ. ಕೊರೊನಾ ಸಂದರ್ಭದಲ್ಲಿ ಬೇರೆಲ್ಲ ಕಂಪನಿಗಳು ತನ್ನ ಉದ್ಯೋಗಿಗಳಿಗೆ ವೇತನ ಕಡಿತ ಮಾಡಿದ್ದರೆ ಟಾಟಾ ಕಂಪೆನಿಯು ಪೂರ್ಣ ವೇತನ ಕೊಟ್ಟು ಮಾದರಿ ಆಗಿತ್ತು. ತನ್ನ ಜೀವನದಲ್ಲಿ 4 ಹುಡುಗಿಯರನ್ನು ಪ್ರೀತಿ ಮಾಡಿದ್ದೆ ಎಂದು ಹೇಳಿಕೊಳ್ಳುವ ಅವರಿನ್ನೂ ಮದುವೆಯಾಗದೇ ಏಕಾಂಗಿಯಾಗಿ ಜೀವಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ದೇಶ

Ratan Tata : ಕೈಗಾರಿಕೋದ್ಯಮದ ರತ್ನ ʻರತನ್‌ ಟಾಟಾʼ ಇನ್ನಿಲ್ಲ; ಖ್ಯಾತ ಉದ್ಯಮಿಯ ನಿಧನಕ್ಕೆ ಗಣ್ಯರ ಸಂತಾಪ

Ratan Tata : ಕೈಗಾರಿಕೋದ್ಯಮದ ರತ್ನ ʻರತನ್‌ ಟಾಟಾʼ ಅಸುನೀಗಿದ್ದಾರೆ. ಖ್ಯಾತ ಉದ್ಯಮಿಯ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

VISTARANEWS.COM


on

Ratan Tata

ಬೆಂಗಳೂರು: ದೇಶದ ಹೆಮ್ಮೆಯ ಉದ್ಯಮಿ, ಟಾಟಾ ಸಮೂಹದ ಮುಖ್ಯಸ್ಥರಾದ ರತನ್ ಟಾಟಾ ಅವರ ನಿಧನದ ಸುದ್ದಿ ದುಃಖವುಂಟು ಮಾಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಟಾಟಾ ಸಂಸ್ಥೆಯ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದು ಮಾತ್ರವಲ್ಲ, ಭಾರತದ ಉದ್ಯಮ ವಲಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ದ ದೂರದೃಷ್ಟಿಯ ವ್ಯಕ್ತಿ. ರತನ್ ಟಾಟಾ ಅವರು ತಮ್ಮ ಬದುಕು ಮತ್ತು ಸಾಧನೆಗಳ ಮೂಲಕ ಅಜರಾಮರ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ದೇಶದಲ್ಲಿ ಕೈಗಾರಿಕಾ ಸಂಸ್ಕೃತಿಯನ್ನು ಉನ್ನತ ಮೌಲ್ಯಗಳೊಂದಿಗೆ ಕಟ್ಟಿದ ಟಾಟಾ

ದೇಶದಲ್ಲಿ ಕೈಗಾರಿಕಾ ಸಂಸ್ಕೃತಿಯನ್ನು ಉನ್ನತ ಮೌಲ್ಯಗಳೊಂದಿಗೆ ಕಟ್ಟಿದ ಟಾಟಾ ಸಮೂಹದ ಆಧಾರಸ್ತಂಭಗಳಲ್ಲಿ ಒಬ್ಬರಾಗಿದ್ದ ರತನ್ ಟಾಟಾ ಅವರ ನಿಧನದಿಂದ ನಿರ್ವಾತ ಸೃಷ್ಟಿಯಾಗಿದೆ. ಅವರ ಭೌತಿಕ ಅನುಪಸ್ಥಿತಿಯು ಭಾರತಕ್ಕೂ ಕರ್ನಾಟಕಕ್ಕೂ ಬಹುದೊಡ್ಡ ನಷ್ಟ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ ಶೋಕ ವ್ಯಕ್ತಪಡಿಸಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ಎಂ.ಬಿ ಅಲ್ಲಿಂದಲೇ ತಮ್ಮ ಶೋಕ ಸಂದೇಶ ಕಳಿಸಿದ್ದು, ಉದ್ಯಮ ಲೋಕದ ದಿಗ್ಗಜನ‌ ಸಾವಿಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದರು.

ಜಮ್ಷೆಡ್ಜಿ ಟಾಟಾ ಮತ್ತು ಜೆ ಆರ್ ಡಿ ಟಾಟಾ ತಮ್ಮ ವೈವಿಧ್ಯಮಯ ಉದ್ಯಮಗಳ ಮೂಲಕ ಆಧುನಿಕ ಭಾರತವನ್ನು ಕಟ್ಟಿದರು. ಇವರ ಬಳಿಕ ಎರಡು ದಶಕಗಳ ಕಾಲ‌ ಟಾಟಾ ಸಮೂಹದ ಚುಕ್ಕಾಣಿ ಹಿಡಿದಿದ್ದ ರತನ್ ಟಾಟಾ ಅವರು, ತಮ್ಮ ಸಮೂಹವನ್ನು ಜಾಗತಿಕ ಸ್ತರದಲ್ಲಿ ವಿಸ್ತರಿಸಿದರು ಎಂದು ಸಚಿವ ಎಂ.ಬಿ ಪಾಟೀಲ್‌ ಸ್ಮರಿಸಿದ್ದರು.

ಟಾಟಾ ಸಮೂಹವು ಕರ್ನಾಟಕದಲ್ಲಿ ಕೂಡ ಭಾರೀ ಪ್ರಮಾಣದಲ್ಲಿ ಬಂಡವಾಳ ಹೂಡಿದ್ದು, ಅಪಾರ ಪ್ರಮಾಣದ ಉದ್ಯೋಗಗಳನ್ನು ಸೃಷ್ಟಿಸಿದೆ. ರತನ್ ಟಾಟಾ ಕೂಡ ಉದ್ಯಮಶೀಲತೆಯನ್ನು ಉನ್ನತ ಮಟ್ಟದ ಮೌಲ್ಯಗಳ ಜತೆ ಪ್ರತಿನಿಧಿಸುತ್ತಿದ್ದರು. ಅವರು ಸದಾ ದೇಶ ಮತ್ತು ಸಮಾಜದ ಹಿತವನ್ನು ಕೂಡ ಪರಿಗಣಿಸುತ್ತಿದ್ದರು. ಇದರೊಂದಿಗೆ ಅವರು ಟಾಟಾ ಪರಂಪರೆಯ ವಾರಸುದಾರರಾಗಿದ್ದರು ಎಂದು ಅವರು ಅಗಲಿದ ಉದ್ಯಮಿಯ ಗುಣಗಾನ ಮಾಡಿದ್ದಾರೆ.

ಉದ್ಯಮಿ ರತನ್ ಟಾಟಾ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸಂತಾಪ ಸೂಚಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Latest15 minutes ago

ರಾಜ್ಯಸಭೆ ಚುನಾವಣೆ: ಮಲ್ಲಿಕಾರ್ಜುನ ಖರ್ಗೆ ಸೇರಿ ನಾಲ್ವರು ಅಭ್ಯರ್ಥಿಗಳು ಅವಿರೋಧ ಆಯ್ಕೆ

ನರೇಂದ್ರ ಮೋದಿ
Latest4 hours ago

ಪ್ರಧಾನಿ ನರೇಂದ್ರ ಮೋದಿಗೆ ಕಿಚ್ಚನ ಸೆಲ್ಯೂಟ್‌ : 12 ವರ್ಷಗಳ ನರೇಂದ್ರ ಮೋದಿ ಐತಿಹಾಸಿಕ ಆಡಳಿತಕ್ಕೆ ಶ್ಲಾಘನೆ

ರಾಜ್ಯಸಭೆ ಟಿಕೆಟ್‌
ಪ್ರಮುಖ ಸುದ್ದಿ1 day ago

ರಾಜ್ಯಸಭೆ ಟಿಕೆಟ್‌ ವಿಚಾರಕ್ಕೆ ಹೆಚ್‌ಡಿಡಿ ಸ್ಪಷ್ಟನೆ : ಎನ್‌ಡಿಎ ಜತೆ ಬಾಂಧವ್ಯ ಮುಂದುವರಿಯಲಿದೆ

ನರೇಂದ್ರ ಮೋದಿ
Latest1 day ago

ನೆಹರೂ ದಾಖಲೆ ಮುರಿದ ನರೇಂದ್ರ ಮೋದಿ: ಭಾರತದ ದೀರ್ಘಾವಧಿಯ ಚುನಾಯಿತ ಪ್ರಧಾನಿಯಾಗಿ ಹೊಸ ಇತಿಹಾಸ

ಆರೆಂಜ್ ಅಲರ್ಟ್‌
Latest1 day ago

ಮುಂಗಾರು ಅಬ್ಬರ ಹೆಚ್ಚಳ: ಇಂದು 11 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್‌, 2 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಮೀನಾಕ್ಷಿ ನಟರಾಜನ್
Latest1 day ago

ರಾಜ್ಯಸಭೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್‌ಗೆ ಬಿಗ್‌ ಶಾಕ್‌ : ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕೃತ – ʻಕೈ‌‌‌‌ʼ ಶಾಸಕರ ರೆಸಾರ್ಟ್‌ ರಾಜಕೀಯ ಕ್ಯಾನ್ಸಲ್

Latest2 days ago

‘ದೇವೇಗೌಡರ ಮೇಲಿನ ಕಾಂಗ್ರೆಸ್ ಅನುಕಂಪ ಕೇವಲ ನಾಟಕ!’: ಮೈತ್ರಿ ಬಿರುಕಿನ ಯತ್ನಕ್ಕೆ HDK ತಿರುಗೇಟು

Latest2 days ago

H-1B ವೀಸಾ ಶುಲ್ಕಕ್ಕೆ ಕೋರ್ಟ್ ಬ್ರೇಕ್: ಟ್ರಂಪ್ ಸರ್ಕಾರದ ಆದೇಶ ಅಸಿಂಧು, ಭಾರತೀಯರು ನಿರಾಳ

ಪಿಂಕ್ ಲೈನ್ ಮೆಟ್ರೋ
Latest2 days ago

ಆಗಸ್ಟ್ 15ಕ್ಕೆ ಪಿಂಕ್ ಲೈನ್ ಮೆಟ್ರೋ ಸಂಚಾರ ಆರಂಭ? ದಕ್ಷಿಣ ಬೆಂಗಳೂರಿಗೆ ಸಂಚಾರ ದಟ್ಟಣೆಯಿಂದ ಮುಕ್ತಿ ನಿರೀಕ್ಷೆ

ಮುಂದಿನ ಐದು ದಿನ ಭಾರೀ ಮಳೆ
Latest2 days ago

ಮುಂದಿನ ಐದು ದಿನ ಭಾರೀ ಮಳೆಯ ಮುನ್ಸೂಚನೆ, ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

galipata neetu
ಕಿರುತೆರೆ3 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ3 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌