ಬಳ್ಳಾರಿ: ಭಾರತ್ ಜೋಡೋ ಭಾಗವಾಗಿ ಬಳ್ಳಾರಿ ಜಿಲ್ಲೆಯ ಸಂಗನಕಲ್ ನಿಂದ ರಾಹುಲ್ ಗಾಂಧಿ ಪಾದಯಾತ್ರೆ (Bharat Jodo) ಮುಂದುವರಿದಿದೆ.
ಭಾನುವಾರ ಬೆಳಗ್ಗೆ 6.20ಕ್ಕೆ ರಾಹುಲ್ ಗಾಂಧಿ ಪಾದಯಾತ್ರೆ ಆರಂಭಿಸಿದರು. ವಿವಿಧ ಕಲಾ ತಂಡಗಳೊಂದಿಗೆ, ಸ್ಥಳೀಯ ನಾಯಕರೊಂದಿಗೆ ಯಾತ್ರೆ ಮುಂದುವರಿಯಿತು.
ಸುಮಾರು 8 ಕಿ.ಮೀ ದೂರವನ್ನು ಯಾತ್ರ ಕ್ರಮಿಸಲಿದೆ. ಮೋಕದ ಪೆಟ್ರೊಲ್ ಬಂಕ್ ವರೆಗೆ ಯಾತ್ರೆ ನಡೆಯಲಿದೆ.
ಉಪವಾಸ ಮತ್ತು ವಿಶ್ರಾಂತಿಯನ್ನು ಯಾತ್ರಿಕರು ಪಡೆಯಲಿದ್ದಾರೆ. ರಾಹುಲ್ ಗಾಂಧಿ ಅವರ ಜತೆ ಶಾಸಕ ನಾಗೇಂದ್ರ ಸೇರಿದಂತೆ ಪ್ರಮುಖ ನಾಯಕರು ಭಾಗವಹಿಸಿದ್ದಾರೆ.