Site icon Vistara News

Karnataka election 2023: ಬಳ್ಳಾರಿ ವಿವಿಧೆಡೆ ಕಾಂಗ್ರೆಸ್‌ ಅಭ್ಯರ್ಥಿ ಪರ ಮುಖಂಡ ನಾರಾ ಪ್ರತಾಪ್ ರೆಡ್ಡಿ ಪ್ರಚಾರ

Karnataka election 2023 Congress candidate leader Nara Pratap Reddy is campaigning in various places in Ballari city

ಬಳ್ಳಾರಿ: ವಿಧಾನಸಭಾ ಚುನಾವಣೆ (Karnataka election 2023) ಹಿನ್ನೆಲೆಯಲ್ಲಿ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಪರ ನಗರದ ತಾಳೂರ್ ರಸ್ತೆ, ರೇಣುಕಾ ನಗರ ಹಾಗೂ ಕಾಲುವೆ ಸುತ್ತಲಿನ ಪ್ರದೇಶದಲ್ಲಿ ಬುಡಾ ಮಾಜಿ ಅಧ್ಯಕ್ಷ, ಕಾಂಗ್ರೆಸ್‌ ಮುಖಂಡ ನಾರಾ ಪ್ರತಾಪ್ ರೆಡ್ಡಿ ಬಿರುಸಿನ ಪ್ರಚಾರ ನಡೆಸಿದರು.

ಇದನ್ನೂ ಓದಿ: ಪೆನ್ನಾರ್‌ ನದಿ ನೀರು ವಿವಾದ: ನ್ಯಾಯಾಧಿಕರಣ ರಚಿಸಲು ಕೇಂದ್ರಕ್ಕೆ ಸುಪ್ರೀಂ ನಿರ್ದೇಶನ, ಕರ್ನಾಟಕಕ್ಕೆ ಹಿನ್ನಡೆ

ಈ ವೇಳೆ ಮಾತನಾಡಿದ ಕಾಂಗ್ರೆಸ್‌ ಮುಖಂಡ ನಾರಾ ಪ್ರತಾಪ್ ರೆಡ್ಡಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಪಕ್ಷಕ್ಕೆ ಮತ ನೀಡುವ ಮೂಲಕ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.

ನಗರದ ತಾಳೂರ್ ರಸ್ತೆ, ರೇಣುಕಾ ನಗರ ಹಾಗೂ ಕಾಲುವೆ ಸುತ್ತಲಿನ ಪ್ರದೇಶದಲ್ಲಿ ಕಾಂಗ್ರೆಸ್‌ ಮುಖಂಡ ನಾರಾ ಪ್ರತಾಪ್ ರೆಡ್ಡಿ ಭರ್ಜರಿ ಪ್ರಚಾರ ನಡೆಸಿದರು.

ಇದನ್ನೂ ಓದಿ: Cyclone Mocha: ಮೇ 6ಕ್ಕೆ ಏಳಲಿದೆ ವರ್ಷದ ಮೊದಲ ಚಂಡಮಾರುತ ಮೋಚಾ; ಹವಾಮಾನ ಇಲಾಖೆಯಿಂದ ಎಚ್ಚರಿಕೆ

ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

Exit mobile version