ಬಳ್ಳಾರಿ: ಸಿದ್ದರಾಮೋತ್ಸವ ನಂತರದ ಕಾಂಗ್ರೆಸ್ ಏಳಿಗೆ ಸಹಿಸದೆ ಹತಾಶರಾಗಿ ಶ್ರೀರಾಮುಲು ಅವರು ಏನೇನೋ ಮಾತನಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಹೇಳಿದರು.
ನಾಗೇಂದ್ರ ನಾನು ಬೆಳೆಸಿದ ಹುಡುಗ ಎಂಬ ಸಚಿವ ಬಿ.ಶ್ರೀರಾಮುಲು ಹೇಳಿಕೆಗೆ ಸೋಮವಾರ ಪ್ರತಿಕ್ರಿಯಿಸಿದ ಅವರು, ನಾನು ಬೀದಿ ಬದಿಯಿಂದ ಬೆಳೆದು ಬಂದ ನಾಯಕನಲ್ಲ. ಪರಸ್ಪರ ಸಹಕಾರದಿಂದ ಬೆಳೆದಿದ್ದೇನೆ, ಅವರಿಂದ ಮಾತ್ರವೇ ಬೆಳೆದಿದ್ದೇವೆ ಎಂದು ಹೇಳುವುದು ಸರಿಯಲ್ಲ. ಅವರ ತಂಗಿ ತವರು ಗೆಲುವಲ್ಲಿ ನಮ್ಮ ಸಹಕಾರ ಇಲ್ಲವೇ? ಆಗ ಇದೇ ಹುಡುಗ ಅವರಿಗೆ ಬೇಕಾಗಿದ್ದ ಎಂದು ಶ್ರೀರಾಮುಲು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
2008ರಲ್ಲಿ ಜನಾರ್ದನ ರೆಡ್ಡಿ ಅವರು ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ರಾಮುಲು ಸ್ಪರ್ಧಿಸುತ್ತಾರೆಂದು ಹೇಳಿದ್ದಕ್ಕೆ ನಾನು ಕ್ಷೇತ್ರ ಬಿಟ್ಟು, ಕೂಡ್ಲಿಗಿಗೆ ಹೋಗಿದ್ದೆ. ಈಗಲೂ ಜನಾರ್ದನ ರೆಡ್ಡಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದ ಅವರು, ರಾಜುಗೌಡ ನಂತರ ನಾನು ಟಾರ್ಗೆಟ್ ಆಗಿರಬಹುದು. ನನ್ನ ಹಿಂದೆಯೂ ವಾಲ್ಮೀಕಿ ಸಮಾಜವಿದೆ. ಶ್ರೀರಾಮುಲು ದೊಡ್ಡವರು, ಸಿಎಂ ಆಗಲಿ, ಮಂತ್ರಿಯಾಗಲಿ ಸಂತೋಷ. 2023ರ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಯಾರೇ ನಿಂತರೂ ಅಲ್ಲಿ ಸ್ಪರ್ಧಿಸುತ್ತೇನೆ ಎಂದರು.
ಇದನ್ನೂ ಓದಿ | ಪರಮೇಶ್ವರ್ ಕಾಲಿಗೆ ನಮಸ್ಕಾರ, ಸಿದ್ದರಾಮಯ್ಯಗೆ ಹ್ಯಾಂಡ್‌ಶೇಕ್: ಡಿಕೆಶಿ ನಡೆ ಕುತೂಹಲ