Site icon Vistara News

Kolur Basavana Gowda | ಬಳ್ಳಾರಿ ಮಾಜಿ ಸಂಸದ ಕೋಳೂರು ಬಸವನಗೌಡ ನಿಧನ

Kolur Basavana Gowda

ಬಳ್ಳಾರಿ: ಮಾಜಿ ಸಂಸದ ಕೋಳೂರು ಬಸವನಗೌಡ (91) ಅವರು ವಯೋ‌ಸಹಜ ಅನಾರೋಗ್ಯದಿಂದ ನಗರದ ನಿವಾಸದಲ್ಲಿ ವಯೋ‌ಸಹಜ ಕಾಯಿಲೆಯಿಂದ ಶುಕ್ರವಾರ ನಿಧನರಾದರು.

ಸೋನಿಯಾ ಗಾಂಧಿ ಅವರ ರಾಜೀನಾಮೆ ಹಿನ್ನೆಲೆಯಲ್ಲಿ ಬಳ್ಳಾರಿ ಲೋಕಾಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸಂಸದರಾಗಿ ಆಯ್ಕೆಯಾಗಿದ್ದ ಇವರು, 2000ರಿಂದ 2004ರವರೆಗೆ ಸಂಸದರಾಗಿದ್ದರು. ಬಳ್ಳಾರಿ ವಿವಿ ಸಂಘದ ಅಧ್ಯಕ್ಷರು, ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಇವರು, ವೀರಶೈವ ಸಮಾಜದ ಮುಖಂಡರಾಗಿ ಸಮಾಜ ಸೇವೆ ಮಾಡಿದ್ದಾರೆ. ಇವರಿಗೆ ಇಬ್ಬರು ಪುತ್ರರು, ಪುತ್ರಿ‌‌ ಸೇರಿ ಇದ್ದಾರೆ. ಇವರ ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ 2 ಗಂಟೆಗೆ ಬಳ್ಳಾರಿಯಲ್ಲಿ ನಡೆಯಲಿದೆ.

ಇದನ್ನೂ ಓದಿ | Man murdered | ಐದು ಅಡಿ ಜಾಗಕ್ಕಾಗಿ ಎರಡು ಕುಟುಂಬಗಳ ನಡುವೆ ಮಾರಾಮಾರಿ, ಹೆಲ್ಮೆಟ್‌ನಲ್ಲಿ ಹೊಡೆದು ವ್ಯಕ್ತಿಯ ಕೊಲೆ

Exit mobile version