Site icon Vistara News

Lok Sabha Election 2024: ಕಾಂಗ್ರೆಸ್‌ ಜಾರಿ ಮಾಡಿದ ಯೋಜನೆಗಳು ಕೋಟ್ಯಂತರ ಜನರ ಬಾಳಿಗೆ ಬೆಳಕಾಗಿವೆ: ಈ. ತುಕಾರಾಂ

Ballari Lok Sabha Constituency Congress candidate e Tukaram election campaign

ಹಗರಿಬೊಮ್ಮನಹಳ್ಳಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಈ. ತುಕಾರಾಂ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಲಬೂರಿನಲ್ಲಿ ಚುನಾವಣಾ ಪ್ರಚಾರ ಕೈಗೊಂಡು, ಮತಯಾಚನೆ (Lok Sabha Election 2024) ನಡೆಸಿದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್‌ ಅಭ್ಯರ್ಥಿ ಈ. ತುಕಾರಾಂ ದೇಶಕ್ಕೆ ಕಾಂಗ್ರೆಸ್ ಪಕ್ಷವು ನೀಡಿದ ಕೊಡುಗೆ ಅಪಾರವಾಗಿದೆ. ವಿಧವಾ ವೇತನ, ಅಂಗವಿಕಲರ ಮಸಾಶನ, ಸಂಧ್ಯಾ ಸುರಕ್ಷಾ, ಹಸಿರು ಕ್ರಾಂತಿ, ಬ್ಯಾಂಕುಗಳ ರಾಷ್ಟ್ರೀಕರಣ, ಮೀಸಲಾತಿ, ಪಂಚಾಯತ್ ರಾಜ್ ವ್ಯವಸ್ಥೆ, ಆಹಾರ ಭದ್ರತಾ ಯೋಜನೆ ಸೇರಿದಂತೆ ಇನ್ನೂ ಅನೇಕ ಯೋಜನೆಗಳು ಇಂದಿಗೂ ಕೋಟ್ಯಾಂತರ ಜನರ ಬಾಳಿಗೆ ಬೆಳಕಾಗಿವೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ: Gold Rate Today: 24 ಕ್ಯಾರಟ್‌ ಚಿನ್ನದ ಬೆಲೆಯಲ್ಲಿ ₹550 ಇಳಿಕೆ; ಇಂದು ಹೀಗಿದೆ ಬೆಲೆ ಗಮನಿಸಿ

ರಾಜ್ಯ ಕಾಂಗ್ರೆಸ್‌ ಸರ್ಕಾರ ಅನುಷ್ಠಾನಗೊಳಿಸಿದ ಗೃಹಲಕ್ಷ್ಮಿ ಯೋಜನೆ, ಅನ್ನ ಭಾಗ್ಯ ಯೋಜನೆ, ಗೃಹಜೋತಿ ಯೋಜನೆ, ಶಕ್ತಿ, ಕ್ಷೀರಭಾಗ್ಯ ಸೇರಿದಂತೆ ಇನ್ನೂ ಅನೇಕ ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಹಸ್ತದ ಗುರುತಿಗೆ ಮತ ನೀಡಿ ಎಂದು ಮನವಿ ಮಾಡಿದರು.

ದೇಶವನ್ನು ಆಳಲು ಬಿಜೆಪಿಗೆ ಯಾವುದೇ ಅರ್ಹತೆ ಇಲ್ಲ. ಬಿಜೆಪಿ ಬರೀ ಸುಳ್ಳು ಹೇಳುತ್ತಲೇ ಬಂದಿದೆ ಎಂದು ಆರೋಪಿಸಿದ ಅವರು, ಬಡವರ ಪರ ಇರುವ ಪಕ್ಷ ಕಾಂಗ್ರೆಸ್‌ ಅನ್ನು ಬೆಂಬಲಿಸಿ ಎಂದು ಮತದಾರರಲ್ಲಿ ಅವರು ಮನವಿ ಮಾಡಿದರು.

ಇದನ್ನೂ ಓದಿ: Leopard Attack: ನೂರಕ್ಕೂ ಹೆಚ್ಚು ಕುರಿಗಳ ಜತೆಯೇ ಎರಡು ಗಂಟೆ ಇದ್ದ ಚಿರತೆ!

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಕುರಿ ಶಿವಮೂರ್ತಿ, ಪತ್ರೆಶ್ ಹಿರೇಮಠ್, ದ್ವಾರಕೇಶ್, ಗೂಳಿ ಮಲ್ಲಿಕಾರ್ಜುನ, ಕೊಟ್ರೇಶ್, ದೊಡ್ಡರಾಮಣ್ಣ, ಪರಮೇಶ್ವರಯ್ಯ, ವಸಂತ ಕುಮಾರ್ ಸೇರಿದಂತೆ ಇತರೆ ಮುಖಂಡರು, ಕಾರ್ಯಕರ್ತರು ಹಾಗೂ ಇತರರು ಉಪಸ್ಥಿತರಿದ್ದರು.

Exit mobile version