ಬಳ್ಳಾರಿ: ಇತ್ತಿಚೆಗೆ ಬಳ್ಳಾರಿಯಲ್ಲಿ ಮಟ್ಕಾ ದಂಧೆ ಹೆಚ್ಚಾಗುತ್ತಿದ್ದು, ಈ ದಂಧೆಯನ್ನು ಮಾಡುತ್ತಿದ್ದ ವ್ಯಕ್ತಿಗಳನ್ನು ಪೋಲಿಸರು ಬಂಧಿಸಿದ್ದಾರೆ. ಊದಿನಕಡ್ಡಿ ರೆಹಮಾನ್, ಸಂಗನಕಲ್ಲು ಗ್ರಾಮದ ಗುರಸ್ವಾಮಿ, ಮೋಕಾ ಗ್ರಾಮದ ವೆಂಕಟೇಶಗೌಡ, ಕರೂರು ಗ್ರಾಮದ ಮಹೇಶ್ ಗೌಡ, ತೆಕ್ಕಲಕೋಟೆಯ ಚಿದಾನಂದ, ಚೆಳ್ಳಕೂಡ್ಲೂರು ಗ್ರಾಮದ ಗೌಸ್ ಬಂಧಿತರು.
ಆರೋಪಿಗಳು ಬಳ್ಳಾರಿ ಗ್ರಾಮೀಣ ಪ್ರದೇಶಗಳಾದ ಮೋಕಾ, ಸಿರಿಗೇರಿ, ತೆಕ್ಕಲಕೋಟೆ ಹಾಗೂ ಹಚ್ಚೊಳ್ಳಿಯಲ್ಲಿ ಮಟ್ಕಾ ದಂಧೆ ನಡೆಸುತ್ತಿದ್ದರು. ಬಳ್ಳಾರಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಪಾಟಿ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಪೊಲೀಸ್ ಇಲಾಖೆಯಿಂದ ಈ ದಂಧೆಕೋರರನ್ನು ಗಡಿಪಾರು ಮಾಡುವಂತೆ ಶಿಫಾರಸ್ಸು ಮಾಡಲಾಗಿದೆ. ಕಳೆದ ಎರಡು ತಿಂಗಳಲ್ಲಿ ಒಟ್ಟು 15 ಜನ ಮಟ್ಕಾ ಕಿಂಗ್ ಪಿನ್‌ಗಳನ್ನು ಬಳ್ಳಾರಿ ಜಿಲ್ಲಾಡಳಿತ ಗಡಿಪಾರು ಮಾಡಿದೆ.
ಇದನ್ನೂ ಓದಿ: Drug peddlers | ಸಿಲಿಕಾನ್ ಸಿಟಿಯಲ್ಲಿ ಡ್ರಗ್ ಪೆಡ್ಲರ್‌ಗಳ ಹಾವಳಿ : ಪೊಲೀಸರ ಮೆಗಾ ಕಾರ್ಯಾಚರಣೆ