Site icon Vistara News

MLC Election: ಈಶಾನ್ಯ ಪದವೀಧರರ ಕ್ಷೇತ್ರ ಚುನಾವಣೆ; ಬಳ್ಳಾರಿ ಜಿಲ್ಲೆಯಲ್ಲಿ 24,183 ಪದವೀಧರ ಮತದಾರರು

MLC Election North East Graduate Constituency Election 2024 total 24 183 graduate voters in the district

ಬಳ್ಳಾರಿ: ವಿಧಾನಪರಿಷತ್‌ನ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಗೆ (MLC Election) ಸಂಬಂಧ ಅಂತಿಮ ಮತದಾರರ ಪಟ್ಟಿ ಅನ್ವಯ ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 24,183 ಪದವೀಧರ ಮತದಾರರಿದ್ದಾರೆ ಎಂದು ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.

ಕ್ಷೇತ್ರವಾರು ಮತದಾರರ ವಿವರ

91-ಕಂಪ್ಲಿ, 92-ಸಿರುಗುಪ್ಪ, 93-ಬಳ್ಳಾರಿ ಗ್ರಾಮೀಣ, 94-ಬಳ್ಳಾರಿ ನಗರ, 95-ಸಂಡೂರು ವಿಧಾನಸಭಾ ಕ್ಷೇತ್ರ ಒಳಗೊಂಡಂತೆ 14,981 ಪುರುಷರು, 9,198 ಮಹಿಳೆಯರು ಮತ್ತು 4 ಜನ ಇತರೆ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 24,183 ಪದವೀಧರ ಮತದಾರರಿದ್ದಾರೆ.

ಇದನ್ನೂ ಓದಿ: Delhi Temperature: ದೆಹಲಿಯಲ್ಲಿ 52 ಡಿಗ್ರಿ ಸೆಲ್ಸಿಯಸ್‌ ತಾಪಮಾನ; ದೇಶದಲ್ಲೇ ಇದುವರೆಗಿನ ಗರಿಷ್ಠ ಟೆಂಪರೇಚರ್!

ಕಂಪ್ಲಿ ಕ್ಷೇತ್ರದಲ್ಲಿ 2,568 ಪುರುಷರು, 1,170 ಮಹಿಳೆಯರು ಸೇರಿ ಒಟ್ಟು 3,738 ಪದವೀಧರ ಮತದಾರರು. ಸಿರುಗುಪ್ಪ ಕ್ಷೇತ್ರದಲ್ಲಿ 2,522 ಪುರುಷರು, 921 ಮಹಿಳೆಯರು ಸೇರಿ ಒಟ್ಟು 3,443 ಪದವೀಧರ ಮತದಾರರು. ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ 3,098 ಪುರುಷರು, 2,030 ಮಹಿಳೆಯರು ಮತ್ತು 01 ಇತರೆ ಸೇರಿ ಒಟ್ಟು 5,129 ಪದವೀಧರ ಮತದಾರರಿದ್ದಾರೆ.

ಬಳ್ಳಾರಿ ನಗರ ಕ್ಷೇತ್ರದಲ್ಲಿ 4,552 ಪುರುಷರು, 3,681 ಮಹಿಳೆಯರು ಮತ್ತು 02 ಇತರೆ ಸೇರಿ ಒಟ್ಟು 8,235 ಪದವೀಧರ ಮತದಾರರು. ಸಂಡೂರು ಕ್ಷೇತ್ರದಲ್ಲಿ 2,241 ಪುರುಷರು, 1,396 ಮಹಿಳೆಯರು ಮತ್ತು 01 ಇತರೆ ಸೇರಿ ಒಟ್ಟು 3,638 ಪದವೀಧರ ಮತದಾರರಿದ್ದಾರೆ.

24 ಮತಗಟ್ಟೆ ಕೇಂದ್ರಗಳು

ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ ಸಂಬಂಧಿಸಿದಂತೆ, ಜಿಲ್ಲೆಯಲ್ಲಿ ಒಟ್ಟು 24 ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಕಂಪ್ಲಿ ಕ್ಷೇತ್ರ
ಕಂಪ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಕಂಪ್ಲಿ ಪಟ್ಟಣದ ಪುರಸಭೆ ಕಚೇರಿಯಲ್ಲಿ 02 ಮತಗಟ್ಟೆ ಕೇಂದ್ರಗಳು, ಕುರುಗೋಡು ಪಟ್ಟಣದ ಅಂಗನವಾಡಿ ಕೇಂದ್ರ ಮತ್ತು ಕೋಳೂರು ಗ್ರಾಮದ ಗ್ರಾಮ ಪಂಚಾಯಿತಿ ಕಚೇರಿ ಸೇರಿ ಒಟ್ಟು 04 ಮತಗಟ್ಟೆ ಕೇಂದ್ರಗಳು.

ಸಿರುಗುಪ್ಪ ಕ್ಷೇತ್ರ
ಸಿರುಗುಪ್ಪ ಕ್ಷೇತ್ರ ವ್ಯಾಪ್ತಿಯಲ್ಲಿ ಹಚ್ಚೋಳ್ಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ, ಸಿರುಗುಪ್ಪ ಪಟ್ಟಣದ ಸರ್ಕಾರಿ ಪ್ರೌಢಶಾಲೆ, ತೆಕ್ಕಲಕೋಟೆಯ ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಕರೂರು ಗ್ರಾಮದ ಸರ್ಕಾರಿ ಪ್ರೌಢಶಾಲೆ ಸೇರಿ 04 ಮತಗಟ್ಟೆ ಕೇಂದ್ರಗಳು.

ಬಳ್ಳಾರಿ ಗ್ರಾಮೀಣ ಕ್ಷೇತ್ರ
ಬಳ್ಳಾರಿ ಗ್ರಾಮೀಣ ಕ್ಷೇತ್ರ ವ್ಯಾಪ್ತಿಯಲ್ಲಿ ಮೋಕಾದ ಗ್ರಾಮ ಪಂಚಾಯಿತಿ ಕಚೇರಿ, ಬಳ್ಳಾರಿಯ ಕೌಲ್‍ಬಜಾರ್‌ನ ಸೆಂಟ್ ಜೋಸೆಫ್ ಪ್ರೌಢಶಾಲೆಯ 4ನೇ ತರಗತಿ ಕೊಠಡಿ, 5 ನೇ ತರಗತಿ ಕೊಠಡಿ ಹಾಗೂ 6ನೇ ತರಗತಿ ಕೊಠಡಿ ಮತ್ತು ರೂಪನಗುಡಿ ಗ್ರಾಮ ಪಂಚಾಯಿತಿ ಕಚೇರಿ ಸೇರಿ 05 ಮತಗಟ್ಟೆ ಕೇಂದ್ರಗಳು.

ಬಳ್ಳಾರಿ ನಗರ ಕ್ಷೇತ್ರ
ಬಳ್ಳಾರಿ ನಗರ ಕ್ಷೇತ್ರದಲ್ಲಿ ಬಳ್ಳಾರಿ ನಗರದ ಅಂಬಲಿಬಾಗ್‍ನ ಅಂಚೆ ಕಚೇರಿ ಹತ್ತಿರದ ಸರ್ಕಾರಿ ಬಾಲಕೀಯರ ಕಾಲೇಜಿನ ಕೊಠಡಿ ಸಂಖ್ಯೆ 42, ಕೊಠಡಿ ಸಂಖ್ಯೆ 43, ಕೊಠಡಿ ಸಂಖ್ಯೆ 44, ಎಸ್.ಎನ್.ಪೇಟೆ ಮುಖ್ಯ ರಸ್ತೆಯ ಎಸ್‍ಎಸ್‍ಎ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೊಠಡಿ ಸಂಖ್ಯೆ 01, ಕೊಠಡಿ ಸಂಖ್ಯೆ 02, ಗಾಂಧಿನಗರದ ಬಾಲಭಾರತಿ ಇಂಗ್ಲೀಷ್ ಮಾಧ್ಯಮ ಶಾಲೆಯ ಕೊಠಡಿ ಸಂಖ್ಯೆ 01, ಕೊಠಡಿ ಸಂಖ್ಯೆ 02 ಸೇರಿ ಒಟ್ಟು 07 ಮತಗಟ್ಟೆ ಕೇಂದ್ರಗಳು.

ಸಂಡೂರು ಕ್ಷೇತ್ರ
ಸಂಡೂರು ಕ್ಷೇತ್ರ ವ್ಯಾಪ್ತಿಯಲ್ಲಿ ತೋರಣಗಲ್ಲು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ಸಂಖ್ಯೆ 01, ಕೊಠಡಿ ಸಂಖ್ಯೆ 02, ಸಂಡೂರು ಪಟ್ಟಣದ ತಾಲ್ಲೂಕು ಕಚೇರಿ ಮತ್ತು ಚೋರನೂರು ಹೋಬಳಿಯ ನಾಡಕಚೇರಿ ಕಾರ್ಯಾಲಯ ಸೇರಿ ಒಟ್ಟು 04 ಮತಗಟ್ಟೆ ಕೇಂದ್ರಗಳು.‌

ಇದನ್ನೂ ಓದಿ:Tamarind Fruit Benefits: ಜೀರ್ಣಶಕ್ತಿ ಹೆಚ್ಚಿಸಿ ತೂಕ ಇಳಿಸಲು ಹುಣಸೇ ಹಣ್ಣು ಸುಲಭದ ಉಪಾಯ!

ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆಗೆ ಜೂನ್ 03 ರಂದು ಮತದಾನ ನಡೆಯಲಿದ್ದು, ಈಗಾಗಲೇ ನೋಂದಾಯಿಸಿಕೊಂಡಿರುವ ಎಲ್ಲಾ ಅರ್ಹ ಮತದಾರರು ಅಂದು ತಪ್ಪದೇ ಮತಗಟ್ಟೆ ಕೇಂದ್ರಗಳಿಗೆ ತೆರಳಿ ಮತದಾನ ಮಾಡಬೇಕು ಎಂದು ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version