Site icon Vistara News

Beluru Temple : ಬೇಲೂರು ಚನ್ನಕೇಶವ ದೇಗುಲ ಶೀಘ್ರವೇ ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಗೆ: ಬೊಮ್ಮಾಯಿ

Beluru temple

#image_title

ಬೇಲೂರು: ಬೇಲೂರು ಶ್ರೀ ಚೆನ್ನಕೇಶವ ದೇಗುಲ (Beluru Temple) ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿ ಅಧಿಕೃತ ಘೋಷಣೆಯಾದಲ್ಲಿ, ರಾಜ್ಯದ ಪ್ರವಾಸೋದ್ಯಮ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುವುದಲ್ಲದೆ ಬೇಲೂರು ಹಳೇಬೀಡು ಪ್ರದೇಶದ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅವರು ಮಂಗಳವಾರ ಶ್ರೀ ಚೆನ್ನಕೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳ ಜತೆ ಮಾತನಾಡಿದರು.

ಬೇಲೂರು ಶ್ರೀ ಚೆನ್ನಕೇಶವ ದೇಗುಲ ಕರ್ನಾಟಕದ ಹೆಮ್ಮೆಯಾಗಿದ್ದು, ಇಲ್ಲಿನ ಶಿಲ್ಪಕಲೆ ವಿಶ್ವದೆಲ್ಲೆಡೆ ಪ್ರಸಿದ್ಧಿ ಹೊಂದಿದೆ. ಬೇಲೂರು ಶ್ರೀ ಚೆನ್ನಕೇಶವ ದೇಗುಲವನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಸಂಬಂಧಪಟ್ಟ ಇತಿಹಾಸ, ದಾಖಲೆಗಳನ್ನು ಈಗಾಗಲೇ ಸರ್ಕಾರ ಸಲ್ಲಿಸಿದೆ. ಈಗಾಗಲೇ ಬಿಡುಗಡೆಯಾಗಿರುವ ತಾತ್ಕಾಲಿಕ ಪಟ್ಟಿಯಲ್ಲಿ ಬೇಲೂರು ಸೇರ್ಪಡೆಯಾಗಿದೆ. ಇನ್ನು ಅಂತಿಮ ಪಟ್ಟಿಗೆ ಸೇರ್ಪಡೆಯಾಗುವ ನಿರೀಕ್ಷೆ ಇದೆ ಎಂದು ಸಿಎಂ ಹೇಳಿದರು.

ʻʻಇನ್ನು ಕೆಲವೇ ತಿಂಗಳಲ್ಲಿ ಯುನೆಸ್ಕೊ ಪಟ್ಟಿಯಲ್ಲಿ ಸೇರುವ ಮೂಲಕ, ಈ ತಾಣದಲ್ಲಿ ದೊಡ್ಡ ಪ್ರಮಾಣದ ಪ್ರವಾಸೋದ್ಯಮ ಅಭಿವೃದ್ಧಿಯಾಗುವ ಜೊತೆಗೆ ಹೆಚ್ಚಿನ ಅನುದಾನ ದೊರೆಯಲಿದ್ದು, ದೇಶ ವಿದೇಶಗಳಿಂದ ಭೇಟಿ ನೀಡುವ ಪ್ರವಾಸಿಗರು ಹೆಚ್ಚಳವಾಗುವ ಸಾಧ್ಯತೆಯಿದೆʼʼ ಎಂದರು.

ʻʻಹಂಪಿ ಆದ ಮೇಲೆ ಯುನೆಸ್ಕೋ ಪಟ್ಟಿಗೆ ಸೇರುತ್ತಿರುವ ರಾಜ್ಯದ ಎರಡನೇ ತಾಣ ಬೇಲೂರು ಅದಾಗಲಿದೆ. ಭವಿಷ್ಯದ ದೃಷ್ಟಿಯಿಂದ ಬಹಳ ಮಹತ್ವವಾದದ್ದು. ಈ‌ ನಾಡಿನ ಬೆಳವಣಿಗೆಯಿಂದ, ಬೇಲೂರು, ಹಳೇಬೀಡು ಬೆಳವಣಿಗೆಯಿಂದ ಬಹಳ ದೊಡ್ಡಮಟ್ಟದಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಆಗುತ್ತದೆʼʼ ಎಂದು ಸಿಎಂ ಹೇಳಿದರು.

ʻʻಏಳನೇ ವೇತನ ಆಯೋಗದ ಅಂತಿಮ ವರದಿ ಶೀಘ್ರ ಪಡೆಯಬೇಕೆಂಬ ಸರ್ಕಾರಿ ನೌಕರರ ಬೇಡಿಕೆ ಬಗ್ಗೆ ಕೇಳಿದಾಗ, ನೋಡೋಣ ಅವರ ಹತ್ತಿರ ಮಾತನಾಡುತ್ತೇನೆ. ಒಂದು ಮಾತು ಹೇಳ್ತಿನಿ, ಸರ್ಕಾರಿ ನೌಕರರು ಎಲ್ಲರೂ ನಮ್ಮವರೇ. ನಾವು ಅವರು ಒಂದು ಭಾಗ ಇದ್ದ ಹಾಗೆ. ಅವರು ಸಭೆಯನ್ನು ಮಾಡಲಿ, ನನ್ನ ಹತ್ತಿರ ಬಂದ ಮೇಲೆ ನಾನು ಖಂಡಿತ ಮಾತನಾಡುತ್ತೀನಿ. ಮಾತಾಡಿ ಸಮಾಧಾನವನ್ನು ಮಾಡ್ತೀನಿʼʼ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಇದನ್ನೂ ಓದಿ : ಅಂಬಾರಿ ಉತ್ಸವ ಬಸ್ ಲೋಕಾರ್ಪಣೆ; ದುಡಿಯುವ, ಕಲಿಯುವ ಹೆಣ್ಣುಮಕ್ಕಳಿಗೆ ಏ.1ರಿಂದ ಸರ್ಕಾರಿ ಬಸ್ಸಲ್ಲಿ ಉಚಿತ ಪ್ರಯಾಣ: ಸಿಎಂ ಬೊಮ್ಮಾಯಿ

Exit mobile version