Site icon Vistara News

Bengaluru Air pollution : ಬೆಂಗಳೂರಿಗರ ಉಸಿರು ಸೇರುತ್ತಿರುವ ವಿಷ ಗಾಳಿ!

Bengaluru Air Quality, High pollution

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನೆಮ್ಮದಿಯ ಉಸಿರಾಟಕ್ಕೂ ಇನ್ನು ಮುಂದೆ ಕಷ್ಟವಾಗಲಿದೆ. ಕಾರಣ ಗಾಳಿಯ ಮಾನದಂಡಕ್ಕಿಂತ ಐದು ಪಟ್ಟು ವಿಷ ಗಾಳಿಯನ್ನು ಜನರು (Air Pollution) ಸೇವಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ನಗರದ ಹಲವು ಭಾಗಗಳಲ್ಲಿ ಗಣನೀಯ ಮಟ್ಟದಲ್ಲಿ ವಾಯು ಹದಗೆಡುತ್ತಿದೆ. ಹಾಗಾದರೆ ನಗರದಲ್ಲಿನ ಮಾಲಿನ್ಯ ಪ್ರಮಾಣ ಹೇಗಿದೆ? ಯಾವ ಏರಿಯಾದಲ್ಲಿ ವಾಯುಮಾಲಿನ್ಯ (Bengaluru News) ಹೆಚ್ಚಾಗಿದೆ ಎಂಬುದರ ವಿವರ ಇಲ್ಲಿದೆ.

ನಗರದಲ್ಲಿ ದಿಢೀರ್‌ ವಾಯು ಮಾಲಿನ್ಯದ ಪ್ರಮಾಣ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಉಸಿರಾಡಲು ಕಷ್ಟದ ಸ್ಥಿತಿ ಬರಬಹುದೆಂಬ ಆತಂಕವನ್ನು ಹಲವು ವರದಿಗಳು ಎಚ್ಚರಿಸಿವೆ. ನಗರದಲ್ಲಿ ಸರಾಸರಿ 29.01 ಎಂದರೆ ಸಾಮಾನ್ಯ ಗಾಳಿಯ ಸೂಚ್ಯಂಕಕ್ಕಿಂತ ಐದು ಪಟ್ಟು ಅತ್ಯಂತ ಕೆಟ್ಟ ವಾಯು ಗುಣಮಟ್ಟ ಸೂಚ್ಯಂಕ ದಾಖಲಾಗಿದೆ. ನಿತ್ಯ ಇದೇ ಕಲುಷಿತ ಗಾಳಿಯನ್ನು ಸೇವಿಸುತ್ತಿರುವವವರು ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ.

ಇದೀಗ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಅಲರ್ಟ್ ಆಗಿದ್ದು, ನಗರದಲ್ಲಿ ಮಾಲಿನ್ಯ ಪ್ರಮಾಣವನ್ನು ಕಡಿಮೆ ಮಾಡಲು ಹಲವು ಕ್ಯಾಂಪನ್‌ಗಳನ್ನು ಮಾಡಲು ಮುಂದಾಗಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾಗಿರುವ ಶಾಂತತಿಮ್ಮಯ್ಯ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Basavanagudi Name : ಬಸವನಗುಡಿ ಹೆಸ್ರು ಬದಲಾಗುತ್ತಾ? ಶುರುವಾಯ್ತು ಮರು ನಾಮಕರಣಕ್ಕೆ ವಿರೋಧ

ವಿಷ ಗಾಳಿ ಯಾವ ಏರಿಯಾದಲ್ಲಿ ಜಾಸ್ತಿ

ವಾಹನಗಳ ದಟ್ಟಣೆ, ರಸ್ತೆಯ ಧೂಳು, ನಿರ್ಮಾಣ ಹಂತದ ಕಟ್ಟಡಗಳ ಧೂಳಿನಿಂದ ನಗರದ ಕೆಲವು ಪ್ರದೇಶಗಳಲ್ಲಿ ಅತಿಯಾದ ಕೆಟ್ಟ ಮಾಲಿನ್ಯ ದಾಖಲಾಗುತ್ತಿದೆ. ಎಲೆಕ್ಟ್ರಾನಿಕ್ ಸಿಟಿ, ಜಯನಗರ, ಹೆಬ್ಬಾಳದಲ್ಲಿ ಅತಿ ಕೆಟ್ಟಗಾಳಿ ದಾಖಲಾಗುತ್ತಿದೆ. ನಗರದಲ್ಲಿ 14 ಕಡೆ ಮಾಲಿನ್ಯ ಪ್ರಮಾಣ ಗುರುತಿಸುವ ಮಾಪಕಗಳನ್ನು ಅಳವಡಿಸಿದೆ. ನಗರದ ಮಾಲಿನ್ಯ ಪ್ರಮಾಣ ಮಾಡಲು ಪಿಸಿಬಿ ಮುಂದಾಗಿದೆ. ಆದರೂ ಹಲವು ಭಾಗಗಳಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿದೆ.

1) ಎಚ್‌ಎಸ್‌ಆರ್ ಲೇಔಟ್
2) ಸಿಲ್ಕ್ ಬೋರ್ಡ್
3) ಆರ್.ವಿ ಇಂಜಿನಿಯರಿಂಗ್ ಕಾಲೇಜ್ ಕೆಂಗೇರಿ
4) ಕಸ್ತೂರಿ ನಗರ ಆರ್ ಟಿ ಓ
5) ಶಾಲಿನಿ ಗ್ರೌಂಡ್ ಜಯನಗರ

ಇತ್ತೀಚೆಗೆ ನಡೆದ ಸಾಲು ಅಗ್ನಿ ದುರಂತಗಳು, ಟ್ರಾಫಿಕ್ ಜಾಮ್, ಹೆಚ್ಚಾಗುತ್ತಿರುವ ಕಾರ್ಖಾನೆಗಳಿಂದಲೂ ಕೆಟ್ಟ ಗಾಳಿಯು ನಗರವನ್ನು ಆವರಿಸಿಕೊಳ್ಳುತ್ತಿದೆ. ಸದ್ಯ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಮಾಲಿನ್ಯ ತಡೆಗೆ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಮುಂದಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version