Site icon Vistara News

Bengaluru Airport: ಬಿಎಲ್‌ಆರ್ ಪಲ್ಸ್ ಆ್ಯಪ್ ಲಾಂಚ್ ಮಾಡಿದ ಬೆಂಗಳೂರು ಏರ್‌ಪೋರ್ಟ್! ಪ್ರಯಾಣಿಕರಿಗೆ ಏನು ಲಾಭ?

BLR Pulse App

ಬೆಂಗಳೂರು, ಕರ್ನಾಟಕ: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda international Airport) ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ಬೆಂಗಳೂರು ಅಂತಾರಾಷ್ಟ್ರೀಯ ಏರ್‌ಪೋರ್ಟ್ ಲಿ.(Bangalore International Airport Limited – BIAL) ಬಿಎಲ್ಆರ್ ಪಲ್ಸ್ (BLR Pulse) ಎಂಬ ಹೊಸ ಆ್ಯಪ್ ಲಾಂಚ್ ಮಾಡಿದೆ. ಈ ಆ್ಯಪ್ (Mobile App) ಮೂಲಕ ತನ್ನ ಪ್ರಯಾಣಿಕರಿಗೆ ಯಾವುದೇ ತಡೆ ರಹಿತ ಸೇವೆಯನ್ನು ಒದಗಿಸಲು ವಿಮಾನ ನಿಲ್ದಾಣವು ಮುಂದಾಗಿದೆ(Bengaluru Airport).

ಈ ಬಿಎಲ್ಆರ್ ಪಲ್ಸ್ ಆ್ಯಪ್ ಮೂಲಕ ಪ್ರಯಾಣಿಕರು ವಿಮಾನಗಳ ಹಾರಾಟದ ನೈಜ ಸಮಯದ ಅಪ್‌ಡೇಟ್ ಪ ಡೆದುಕೊಳ್ಳಬಹುದು ಇಲ್ಲವೇ ಆ ಬಗ್ಗೆ ವಿಚಾರಣೆ ನಡೆಸಬಹುದು. ವಿಮಾನ ನಿಲ್ದಾಣದ ಒಳಗೆ ರೆಸ್ಟೋರೆಂಟ್‌ಗಳಲ್ಲಿ ಟೇಬಲ್ ಕಾಯ್ದಿರಿಸಬಹುದು, ವೈಫೈ ಸಂಪರ್ಕಿಸಬಹುದು, ಚೆಕ್ ಇನ್ ಗೇಟ್‌ಗಳ ಮಾಹಿತಿಯನ್ನು ಸಂಗ್ರಹಿಸಬಹುದು ಮತ್ತು ವಿಳಂಬವಾಗುವ ವಿಮಾನಗಳನ್ನು ಸಹ ಟ್ರ್ಯಾಕ್ ಮಾಡಬಹುದಾಗಿದೆ. ಈ ಆ್ಯಪ್ ಮೂಲಕ ಟರ್ಮಿನಲ್‌ಗಳ ಒಳಗಿನ ಎಫ್ ಆ್ಯಂಡ್ ಬಿ ಔಟ್‌ಲೆಟ್‌ಗಳಲ್ಲಿ ರಿಯಾಯಿತಿಗಳ ಬಗ್ಗೆ ಮಾಹಿತಿಯನ್ನೂ ಮಾಹಿತಿಯನ್ನು ತಿಳಿದುಕೊಳ್ಳಬಹುದು ಎಂದು ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ಟ್ವೀಟ್ ಮಾಡಿದ್ದಾರೆ.

ನಿಮ್ಮ ವೈಯಕ್ತಿಕಗೊಳಿಸಿದ ಟ್ರಾವೆಲ್ ಬಡಿ ಕೇವಲ ಟ್ಯಾಪ್ ದೂರದಲ್ಲಿದ್ದಾನೆ. ಬಿಎಲ್ಆರ್ ಪಲ್ಸ್ – #BLRAirport ಅನ್ನು ಅನುಭವಿಸುವ ಹೊಸ ಮಾರ್ಗವನ್ನು ಒದಗಿಸುವ ಅಪ್ಲಿಕೇಶನ್ ಇದಾಗಿದೆ. ಫ್ಲೈಟ್ ಮಾಹಿತಿಯಿಂದ ನಿಮ್ಮ ಪ್ರಯಾಣಕ್ಕೆ ಅಗತ್ಯವಿರುವ ಯಾವುದಾದರೂ ಸ್ಥಳಗಳನ್ನು ಸಂಗ್ರಹಿಸಲು ಸರತಿ ಕಾಯುವ ಸಮಯದವರೆಗೆ ಮಾಹಿತಿ ಈ ಪಲ್ಸ್‌ನಲ್ಲಿ ಲಭ್ಯವಿದೆ. ಬಹು ಗೇಟ್‌ಗಳ ಮೂಲಕ ನ್ಯಾವಿಗೇಟ್ ಮಾಡಲು ಮತ್ತು ಸಮಯಕ್ಕೆ ತಮ್ಮ ವಿಮಾನವನ್ನು ಹತ್ತಲು ಕೊನೆಯ ನಿಮಿಷದ ಫ್ಲೈಯರ್‌ಗಳಿಗೆ ಅಪ್ಲಿಕೇಶನ್ ಉತ್ತಮ ಸಹಾಯವಾಗಲಿದೆ ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ.

ಈ ಸುದ್ದಿಯನ್ನೂ ಓದಿ: Emergency Landing: ಮಹಿಳೆಗೆ ಹೃದಯ ಸಮಸ್ಯೆ; ಬೆಂಗಳೂರಿಂದ ದಿಲ್ಲಿಗೆ ಹೊರಟ ವಿಮಾನ ತುರ್ತು ಭೂಸ್ಪರ್ಶ

ಹೊಸ ಟರ್ಮಿಲ್‌ 2ರಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ಮೆಟಾವರ್ಸ್ ಅನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಲಾಂಚ್ ಮಾಡಿದ್ದರು. ಈ ತ್ರಿಡಿ ಇಂಟರ್‌ಫೇಸ್ ಗ್ರಾಹಕರಿಗೆ ತಮ್ಮ ಫ್ಲೈಟ್‌ಗಳಿಗೆ ಚೆಕ್ ಇನ್, ಟರ್ಮಿನಲ್ ಮ್ತತು ಶಾಪ್‌ಗಳ ನಾವಿಗೇಟ್ ಸೇರಿದಂತೆ ಇನ್ನಿತರ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿತ್ತು. ಕಳೆದ ವರ್ಷ ಜೂನ್ ತಿಂಗಳಲ್ಲಿ ಕೆಂಪೇಗೌಡ ಇಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಒಟ್ಟು 10 ರೋಬೋಟ್‌ಗಳನ್ನು ನಿಯೋಜನೆ ಮಾಡಲಾಗಿತ್ತು. ಈ ರೋಪೋಟ್‌ಗಳು ಕೃತಕ ಬುದ್ಧಿಮತ್ತೆಯ ಆಧಾರದ ಮೇಲೆ ಕೆಲಸ ಮಾಡುತ್ತವೆ. ವಿನಂತಿಯ ಮೇರೆಗೆ ಪ್ರಯಾಣಿಕರಿಗೆ ಎಸ್ಕಾರ್ಟ್ ಕೂಡ ಮಾಡಬಲ್ಲವು ಈ ರೋಬೋಟ್‌ಗಳು. ಈಗ ಬಿಎಲ್ಆರ್ ಪಲ್ಸ್ ಆ್ಯಪ್ ಮೂಲಕ ವಿಮಾನ ನಿಲ್ದಾಣವು ತನ್ನ ಪ್ರಯಾಣಿಕರ ಸೇವೆಯ ಅನುಭವವನ್ನು ಮತ್ತಷ್ಟು ಹೆಚ್ಚಿಸಿದೆ.

ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

Exit mobile version