Site icon Vistara News

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಭದ್ರತಾ ತಪಾಸಣೆಗಾಗಿ ಇನ್ನು ಮೊಬೈಲ್, ಲ್ಯಾಪ್‌ಟ್ಯಾಪ್‌ ಟ್ರೇನಲ್ಲಿ ಇಡಬೇಕಿಲ್ಲ!

Bangalore airport

ಬೆಂಗಳೂರು: ಯಾವುದೇ ವಿಮಾನ ನಿಲ್ದಾಣಕ್ಕೆ ಹೋದಾಗ ಭದ್ರತಾ ತಪಾಸಣೆ ವೇಳೆ ನಿಮ್ಮ, ಮೊಬೈಲ್ ಫೋನ್‌ಗಳು(Mobile Phones), ಲ್ಯಾಪ್‌ಟ್ಯಾಪ್‌ಗಳಂಥ (Laptops) ವೈಯಕ್ತಿಕ ಎಲೆಕ್ಟ್ರಾನಿಕ್ ಸಾಧನಗಳನ್ನು (electric devices) ಪ್ರತ್ಯೇಕ ಟ್ರೇನಲ್ಲಿ ತೆಗೆದು ಇಡಬೇಕಾಗುತ್ತದೆ(gadgets in tray system). ಆದರೆ, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇನ್ನು ಮುಂದೆ ಈ ರೀತಿಯ ಪ್ರಕ್ರಿಯೆಯನ್ನು ಪೂರೈಸಬೇಕಾಗಿಲ್ಲ. ಗ್ಯಾಜೆಟ್ ಇನ್ ಟ್ರೇ ಸೆಕ್ಯೂರಿಟಿ ವ್ಯವಸ್ಥೆಯನ್ನು ತೆಗೆದು ಹಾಕುತ್ತಿದೆ. ಈ ರೀತಿಯ ಕ್ರಮ ಕೈಗೊಂಡ ದೇಶದ ಮೊದಲ ವಿಮಾನ ನಿಲ್ದಾಣ (Bengaluru Airport) ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (BIAL), ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಯ ನಿರ್ವಾಹಕರು, ಮುಂದಿನ ಕೆಲವು ವಾರಗಳಲ್ಲಿ T2(ಟರ್ಮಿನಲ್ 2)ನಲ್ಲಿ ಸಿಟಿಎಕ್ಸ್ (CTX – ಕಂಪ್ಯೂಟರ್ ಟೊಮೊಗ್ರಫಿ ಎಕ್ಸ್-ರೇ) ಯಂತ್ರದ ಪ್ರಾಯೋಗಿಕ ಚಾಲನೆಯನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು. ಮೊದಲಿಗೆ, ಹೊಸ ವ್ಯವಸ್ಥೆಯು ದೇಶೀಯ ಪ್ರಯಾಣಿಕರಿಗೆ ಮಾತ್ರ ಮೀಸಲಾಗಿದ್ದು, ಮುಂದಿನ ತಿಂಗಳಿಂದಲೇ ಈ ಕಾರ್ಯರೂಪಕ್ಕೆ ಬರಲಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು, ಸಿಟಿಎಕ್ಸ್ ಯಂತ್ರದ ಪ್ರಯೋಗವನ್ನು ಆರಂಭಿಸುತ್ತಿರುವ ದೇಶದ ಮೊದಲ ಏರ್‌ಪೋರ್ಟ್‌ ಆಗಿದೆ. ಈ ವ್ಯವಸ್ಥೆಯು ಸ್ವಯಂಚಾಲಿತ ಟ್ರೇ ಮರುಪಡೆಯುವಿಕೆ ವ್ಯವಸ್ಥೆ ಮತ್ತು ಪೂರ್ಣ ದೇಹ ಸ್ಕ್ಯಾನರ್‌ಗೊಂದಿಗೆ ಸಂಯೋಜಿಸಲ್ಪಟ್ಟಿದೆ. ಟರ್ಮಿನಲ್ ‌2ರಲ್ಲಿ ಪೂರ್ಣ ದೇಹ ಸ್ಕ್ಯಾನರ್‌ಗಳನ್ನು ಅಳವಡಿಸಲಾಗಿದೆ.

ಆಪರೇಟರ್‍‌ಗಳು ಸ್ಕ್ಯಾನಿಂಗ್ ವ್ಯೂ ಅನ್ನು ಬ್ಯಾಗುಗಳ ಮೇಲೆ ರೊಟೇಟ್ ಮಾಡುತ್ತಾರೆ ಮತ್ತು ಬ್ಯಾಗುಗಳನ್ನು ಭೌತಿಕವಾಗಿ ಪರೀಕ್ಷಿಸುತ್ತಾರೆ. ಈ ಹೊಸ ಭದ್ರತಾ ತಪಾಸಣೆ ವೇಳೆ ಒಬ್ಬ ವ್ಯಕ್ತಿಗೆ ಬೇಕಾಗುವ ಅಗತ್ಯವಿರುವ ಟ್ರೇಗ‌ಳ ಸಂಖ್ಯೆಯನ್ನು ಕಡಿಮೆಗೊಳಿಸುತ್ತದೆ.

ಇದರಿಂದ ಏನಾಗುತ್ತದೆ ಎಂದರೆ, ಪ್ರಯಾಣಿಕರು ತಮ್ಮ ಲ್ಯಾಪ್‌ಟ್ಯಾಪ್ ಮತ್ತು ಮೊಬೈಲ್‌ ಫೋನ್‌ಗಳಂಥ ಎಳೆಕ್ಟ್ರಿಕ್ ಸಾಧನಗಳನ್ನು ಬ್ಯಾಗಿನಿಂದ ಹೊರ ತೆಗೆಯಬೇಕಾಗುವುದಿಲ್ಲ. ದ್ರವ ಪದಾರ್ಥಗಳು, ಜೆಲ್ಸ್ ಇತ್ಯಾದಿ ಲಿಕ್ವಿಡ್ ಸಕ್ರಿಯ ಪದಾರ್ಥಗಳನ್ನು ಬ್ಯಾಗಿನಲ್ಲಿ ಇಡಬಹುದು. ಹೊಸ ಸ್ಕ್ರೀನಿಂಗ್ ವ್ಯವಸ್ಥೆಯು ಬ್ಯಾಗ್‌ಗಳಿಂದಲೇ ಸ್ಕ್ಯಾನ್ ಮಾಡುತ್ತದೆ. ಇದರಿಂದ ಚೆಕ್‌ಪಾಯಿಂಟ್‌ಗಲ್ಲಿ ಸಾಕಷ್ಟು ಸಮಯ ಉಳಿತಾಯವೂ ಇದರಿಂದಾಗಲಿದೆ. ಸಾಮಾನು ಸರಂಜಾಮುಗಳಿಂದ ಕಡಿಮೆ ವಸ್ತುಗಳನ್ನು ತೆಗೆದುಹಾಕುವುದು ಎಂದರೆ ಕಡಿಮೆ ಟ್ರೇಗಳು, ಸಂಪರ್ಕ ಬಿಂದುಗಳನ್ನು ಕಡಿಮೆ ಮಾಡುತ್ತದೆ.

ದೆಹಲಿ ವಿಮಾನ ನಿಲ್ದಾಣವು ಸಿಟಿಎಕ್ಸ್ ಪ್ರಯೋಗಗಳನ್ನು ನಡೆಸಿದ್ದರೂ, ಎಟಿಆರ್‌ಎಸ್ ಮತ್ತು ಫುಲ್-ಬಾಡಿ ಸ್ಕ್ಯಾನರ್‌ಗಳೊಂದಿಗೆ ಸಂಯೋಜಿಸಲ್ಪಟ್ಟ ಸಿಟಿಎಕ್ಸ್ ಯಂತ್ರಕ್ಕಾಗಿ ಇನ್ನೂ ಪ್ರಯಾಣಿಕರ ಪ್ರಯೋಗಗಳನ್ನು ನಡೆಸಬೇಕಿದೆ. ಹಾಗಾಗಿ, ಈ ಪ್ರಯೋಗಕ್ಕೆ ಮುಂದಾಗಿರುವ ಬೆಂಗಳೂರು ವಿಮಾನ ನಿಲ್ದಾಣವು, ಈ ವಿಷಯದಲ್ಲಿ ಮೊದಲ ಪ್ರಯತ್ನ ನಡೆಸಿದ ಎಂಬ ಹೆಗ್ಗಳಿಕೆ ಪಾತ್ರವಾಗುತ್ತಿದೆ.

ಈ ಸುದ್ದಿಯನ್ನೂ ಓದಿ: Vistara Airlines News: ಗೋವಾದಲ್ಲಿ ಇಳಿಯಬೇಕಿದ್ದ ಏರ್‌ ವಿಸ್ತಾರ ವಿಮಾನ ಮತ್ತೆ ಬೆಂಗಳೂರಿಗೆ ಬಂತು!

Exit mobile version