Site icon Vistara News

Bangalore Airport : ಬೆಂಗಳೂರು ವಿಮಾನ ನಿಲ್ದಾಣಕ್ಕೆ ವಿಶ್ವದ ಅತಿ ಸುಂದರ ಏರ್‌ಪೋರ್ಟ್ ಗರಿ

Bangalore airport awarded

ದೇವನಹಳ್ಳಿ (ಬೆಂಗಳೂರು ‌ಗ್ರಾಮಾಂತರ): ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Kempegowda International airport Bangalore) ವಿಶ್ವದ ಅತ್ಯಂತ ಸುಂದರ ವಿಮಾನ ನಿಲ್ದಾಣಗಳಲ್ಲಿ ಒಂದೆಂದು ಗುರುತಿಸಲ್ಪಟ್ಟಿದೆ ಮತ್ತು ‘ಇಂಟೀರಿಯರ್‌ 2023 ರ ವಿಶ್ವ ವಿಶೇಷ ಪ್ರಶಸ್ತಿ’ಯನ್ನು ಪಡೆದುಕೊಂಡಿದೆ. ಬೆಂಗಳೂರು ವಿಮಾನ ನಿಲ್ದಾಣದ (Bangalore Airport) ಟರ್ಮಿನಲ್‌ 2 (Terminal 2) ಯುನೆಸ್ಕೋದ 2023 ಪ್ರಿಕ್ಸ್ ವರ್ಸೇಲ್ಸ್‌ನಿಂದ (UNESCO’s 2023 Prix Versailles) ಈ ಪ್ರತಿಷ್ಠಿತ ಪುರಸ್ಕಾರವನ್ನು ಪಡೆದಿದೆ.

ಪ್ರಸಿದ್ಧ ಫ್ಯಾಷನ್ ಡಿಸೈನರ್ ಎಲೀ ಸಾಬ್ ಅವರ ಅಧ್ಯಕ್ಷತೆಯ ಪ್ರಿಕ್ಸ್ ವರ್ಸೈಲ್ಸ್ 2023ರ ವರ್ಲ್ಡ್ ಜಡ್ಜಲ್‌ ಪ್ಯಾನೆಲ್ ಪ್ರಶಸ್ತಿಯನ್ನು ಗೆಲ್ಲಲು ಟಿ2 ಅರ್ಹತೆ ಪಡೆದಿದೆ. ಇದು ಯುನೆಸ್ಕೋದಿಂದ ಅಂಗೀಕರಿಸಲ್ಪಟ್ಟ ಅಂತರಾಷ್ಟ್ರೀಯವಾಗಿ ಮೆಚ್ಚುಗೆ ಪಡೆದ ವಿನ್ಯಾಸ ಮತ್ತು ವಾಸ್ತುಶಿಲ್ಪ ಪ್ರಶಸ್ತಿಯಾಗಿದೆ. ಈ ಗೌರವಾನ್ವಿತ ಮನ್ನಣೆ ಪಡೆದ ಏಕೈಕ ಭಾರತೀಯ ವಿಮಾನ ನಿಲ್ದಾಣ ಬೆಂಗಳೂರು.

Bangalore airport awarded

ಜಾಗತಿಕ ಮಟ್ಟದಲ್ಲಿ ಅಸಾಧಾರಣ ವಿನ್ಯಾಸ ಮತ್ತು ವಾಸ್ತುಶಿಲ್ಪವನ್ನು ಹೊಂದಿರುವ ವಿಮಾನ ನಿಲ್ದಾಣಗಳ ಪೈಕಿ ಬೆಂಗಳೂರು ವಿಮಾನ ನಿಲ್ದಾಣ ಒಂದಾಗಿದೆ ಈ ಮೂಲಕ ಬೆಂಗಳೂರು ವಿಮಾನ ನಿಲ್ದಾಣ ಜಾಗತಿಕವಾಗಿ ಉನ್ನತ ವಿಮಾನ ನಿಲ್ದಾಣಗಳ ಪಟ್ಟಿಗೆ ಸೇರಿದೆ.

2015ರಲ್ಲಿ ಸ್ಥಾಪಿಸಲಾದ ಪ್ರಿಕ್ಸ್ ವರ್ಸೈಲ್ಸ್, ಸಾಂಸ್ಕೃತಿಕ ರಾಯಭಾರಿಯಾಗಿದ್ದು ನಾವೀನ್ಯತೆ, ಸೃಜನಶೀಲತೆ, ಸ್ಥಳೀಯ ಪರಂಪರೆ, ಪರಿಸರ ದಕ್ಷತೆ ಮತ್ತು ಸಾಮಾಜಿಕ ಸಂವಹನದ ಮೌಲ್ಯಗಳನ್ನು ಗುರುತಿಸಿ ಗೌರವಿಸುತ್ತದೆ.

ಅತಿ ಸುಂದರ ಟರ್ಮಿನಲ್‌ 2 ವಿಶೇಷತೆಗಳೇನು?

  1. ಬೆಂಗಳೂರು ವಿಮಾನ ನಿಲ್ದಾಣದ ನೂತನ ನಿರ್ಮಿತ ಟರ್ಮಿನಲ್‌ 2ವನ್ನು ಟರ್ಮಿನಲ್ ಇನ್ ಎ ಗಾರ್ಡನ್” ಎಂದೂ ಕರೆಯಲಾಗುತ್ತದೆ, ಇದನ್ನು ನವೆಂಬರ್ 11, 2022 ರಂದು ಉದ್ಘಾಟಿಸಲಾಯಿತು.
  2. 255,661 ಚದರ ಮೀಟರ್ ವಿಸ್ತೀರ್ಣದಲ್ಲಿ, ಟರ್ಮಿನಲ್ ಅನ್ನು ನಾಲ್ಕು ಅಡಿಪಾಯದ ಕಂಬಗಳ ಮೇಲೆ ನಿರ್ಮಿಸಲಾಗಿದೆ: ತಾಂತ್ರಿಕ ನಾಯಕತ್ವ, ಉದ್ಯಾನ ಟರ್ಮಿನಲ್, ಪರಿಸರದ ಉಸ್ತುವಾರಿ ಮತ್ತು ಕರ್ನಾಟಕದ ಶ್ರೀಮಂತ ಪರಂಪರೆ, ಸಂಸ್ಕೃತಿಯ ಆಚರಣೆಯನ್ನು ಈ ಟರ್ಮಿನಲ್‌ನಲ್ಲಿ ಪ್ರತಿಬಿಂಬಿಸಲಾಗಿದೆ.
  3. ಟರ್ಮಿನಲ್‌ ೨ ಸಂಪೂರ್ಣವಾಗಿ ಬಿದಿರಿನಲ್ಲಿ ಅಲಂಕೃತಗೊಂಡಿದ್ದು, ಒಳಾಂಗಣಗಳು ಕ್ಲಾಸಿಕ್ ಲುಕ್‌ ಹೊಂದಿವೆ.
  4. ಸಂಪೂರ್ಣ ಹಸಿರುಮಯ, ಅರ್ಥ್‌ವಾಲ್‌ ಹಾಗೂ ವಾಟರ್‌ಫಾಲ್ಸ್‌ನಿಂದ ತುಂಬಿರುವ ಟರ್ಮಿನಲ್, ಒಂದು ವಿಶಾಲವಾದ ಒಳಾಂಗಣ ಉದ್ಯಾನವನವನ್ನೇ ಹೊಂದಿದೆ.
  5. ಮೇಲ್ಭಾಗದಲ್ಲಿ ಗಂಟೆಯೊಳಗಿರುವ ಸಸಿಗಳು ಸಹ ಟರ್ಮಿನಲ್‌ನ ಅನನ್ಯ ಸೌಂದರ್ಯವನ್ನು ಹೆಚ್ಚಿಸುತ್ತದೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅಭಿನಂದನೆ, ಸಂಭ್ರಮ

ಹೆಮ್ಮೆಯ ಕ್ಷಣ ಎಂದ ಏರ್‌ಪೋರ್ಟ್‌ ಎಂಡಿ, ಸಿಇಒ ಹರಿ ಮರಾರ್‌

ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ ಎಂಡಿ ಮತ್ತು ಸಿಇಒ ಹರಿ ಮರಾರ್ ಅವರು ಪ್ರಶಸ್ತಿಯ ಸಂತಸ ಹಂಚಿಕೊಂಡು ಮಾತನಾಡಿ, “2023ರ ಪ್ರಿಕ್ಸ್ ವರ್ಸೈಲ್ಸ್ ಪ್ರಶಸ್ತಿಗೆ ಟರ್ಮಿನಲ್ 2 ನಾಮನಿರ್ದೇಶನವಾಗಿರುವುದು ಅತ್ಯಂತ ಹೆಮ್ಮೆಯ ಕ್ಷಣವಾಗಿದೆ, ಟರ್ಮಿನಲ್-2 ಅರ್ಹವಾದ ಮನ್ನಣೆ ಪಡೆಯುವುದನ್ನು ನೋಡಲು ಸಂತೋಷವೆನಿಸುತ್ತದೆ ಎಂದರು.

25 ಮಿಲಿಯನ್‌ ಪ್ರಯಾಣಿಕರ ನಿರ್ವಹಣೆಗೆ ಅವಕಾಶ

ಹಂತ 1 ರಲ್ಲಿ, ಟರ್ಮಿನಲ್‌ 2ನಲ್ಲಿ ವರ್ಷಕ್ಕೆ 25 ಮಿಲಿಯನ್ ಪ್ರಯಾಣಿಕರಿಗೆ (MPPA) ಅವಕಾಶ ಕಲ್ಪಿಸಲು ವಿನ್ಯಾಸಗೊಳಿಸಲಾಗಿದೆ.. ಟರ್ಮಿನಲ್‌ 2 ಕ್ಯುರೇಟೆಡ್ ಕಲೆ ಮತ್ತು ಅಲಂಕಾರದೊಂದಿಗೆ ಎಲ್ಲಾ ಪ್ರಯಾಣಿಕರಿಗೆ ಅತೀವ ಆನಂದವನ್ನು ನೀಡುತ್ತಿದೆ. ಇತ್ತೀಚೆಗೆ ಪ್ರಾರಂಭಿಸಲಾದ ಆರ್ಟ್ ಪ್ರೋಗ್ರಾಂನ ಮೂಲಕ ಟರ್ಮಿನಲ್ ಗೆ ಬರುವ ಪ್ರಯಾಣಿಕರು ಈ ಆರ್ಟ್‌ ಗ್ಯಾಲರಿಯಲ್ಲಿ ಸುಂದರ ಕಲೆಗಳನ್ನು ಕಣ್ತುಂಬಿಕೊಂಡು ತಮ್ಮ ಪ್ರಯಾಣವನ್ನು ಮರೆಯಲಾಗದ ಅನುಭವವಾಗಿ ಪರಿವರ್ತಿಸಿಕೊಳ್ಳಲಿದ್ದಾರೆ ಎಂದು ಮರಾರ್‌ ಹೇಳಿದರು.

Bangalore airport awarded

T2ನ ಸುಸ್ಥಿರ ವಿನ್ಯಾಸ, ಕಾರ್ಯಾಚರಣೆಯ ಆರಂಭದ ಮೊದಲು US ಗ್ರೀನ್ ಬಿಲ್ಡಿಂಗ್ ಕೌನ್ಸಿಲ್‌ನಿಂದ ಪ್ಲಾಟಿನಂ LEED ರೇಟಿಂಗ್‌ನೊಂದಿಗೆ ಪೂರ್ವ-ಪ್ರಮಾಣೀಕರಿಸಲ್ಪಟ್ಟ ವಿಶ್ವದ ಅತಿದೊಡ್ಡ ಟರ್ಮಿನಲ್ ಆಗಿದೆ, ಪರಿಸರದ ಜವಾಬ್ದಾರಿಗೆ ವಿಮಾನ ನಿಲ್ದಾಣದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಹೆಚ್ಚುವರಿಯಾಗಿ, ಇದು IGBC ಗ್ರೀನ್ ನ್ಯೂ ಬಿಲ್ಡಿಂಗ್ ರೇಟಿಂಗ್ ಸಿಸ್ಟಮ್ ಅಡಿಯಲ್ಲಿ ಪ್ರತಿಷ್ಠಿತ ಪ್ಲಾಟಿನಂ ಪ್ರಮಾಣೀಕರಣವನ್ನು ಸಹ ಗಳಿಸಿದೆ ಎಂದು ಮರಾರ್‌ ವಿವರಿಸಿದರು..

BLR ವಿಮಾನ ನಿಲ್ದಾಣದಲ್ಲಿ, ಪ್ರಯಾಣಿಕರಿಗೆ ಸಾಟಿಯಿಲ್ಲದ ಅನುಭವಗಳನ್ನು ಸತತವಾಗಿ ಒದಗಿಸಲು ಬಯಸುತ್ತೇವೆ. ಹೆಚ್ಚಿನ ವಿವರಗಳಿಗಾಗಿ Kempegowda International Airport Bengaluru | KIAB | BLR Airport (bengaluruairport.com). ವೆಬ್‌ಸೈಟ್‌ಗೆ ಭೇಟಿ ನೀಡಿ ಎಂದು ಅವರು ಮನವಿ ಮಾಡಿದ್ದಾರೆ.

Exit mobile version