Site icon Vistara News

Bengaluru Cantt railway | ವಿಶ್ವದರ್ಜೆಯ ನಿಲ್ದಾಣವಾಗಿ ಬದಲಾಗಲಿದೆ ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ಸ್ಟೇಷನ್!

Bengaluru Cantt railway

ಬೆಂಗಳೂರು: ನೈಋತ್ಯ ರೈಲ್ವೆ ವಲಯದ ಅತ್ಯಂತ ಹಳೆಯ ರೈಲು ನಿಲ್ದಾಣಗಳಲ್ಲಿ ಒಂದಾದ ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣವು(Bengaluru Cantt railway) ನವೀಕರಣಕ್ಕೆ ಒಳಗಾಗಲಿದೆ. ಹೆಚ್ಚುತ್ತಿರುವ ಪ್ರಯಾಣಿಕರ ಅಗತ್ಯಕ್ಕೆ ತಕ್ಕಂತೆ, ಮೊದಲ ಹಂತದಲ್ಲಿ ಸುಮಾರು 45 ಕೋಟಿ ರೂಪಾಯಿ ವೆಚ್ಚದಲ್ಲಿ ನಿಲ್ದಾಣವನ್ನು ಮರುರೂಪಿಸಲಾಗುತ್ತಿದೆ.

ನವೀಕೃತ ಕಂಟೋನ್ಮೆಂಟ್ ರೈಲು ನಿಲ್ದಾಣವು ಎರಡು ಐಲ್ಯಾಂಡ್ ಪ್ಲಾಟ್‌ಫಾರ್ಮ್‌ಗಳನ್ನು ಹೊಂದಲಿದ್ದು, ಇದಕ್ಕೆ ಹೆಚ್ಚುವರಿಯಾಗಿ ಮತ್ತೆ ನಾಲ್ಕು ಪ್ಲಾಟ್‌ಫಾರ್ಮ್‌ಗಳು ಇರಲಿವೆ. ಮೂರು ಹೊಸ ಮಾರ್ಗಗಳನ್ನು ಹಾಕಲಾಗುವುದು ಇದರಿಂದ ಹೆಚ್ಚುತ್ತಿರುವ ರೈಲುಗಳಿಗೆ ಉಪಯೋಗವಾಗಲಿದೆ. ಹಾಗೆಯೇ, ಇದರಿಂದಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಮೇಲಿನ ಒತ್ತಡ ಕಡಿಮೆಯಾಗಲಿದೆ.

ಮರುರೂಪಿಸಲಾದ ಯಾರ್ಡ್, ಬೆಂಗಳೂರು ಕಂಟೋನ್ಮೆಂಟ್ ಮತ್ತು ವೈಟ್‌ಫೀಲ್ಡ್ ನಡುವಿನ ಚತುಷ್ಪಥ ವಿಭಾಗದೊಂದಿಗೆ ಸಂಯೋಜಿಸಲಾಗುತ್ತದೆ. ತಡೆರಹಿತ ಸಮೂಹ ಸಾರಿಗೆಯ ಅನುಕೂಲಕ್ಕಾಗಿ ಯಾರ್ಡ್ ಅನ್ನು ಉಪನಗರ ರೈಲ್ವೆ ಜಾಲದೊಂದಿಗೆ ಬೆಸೆಯಲಾಗುತ್ತಿದೆ. ಹಾಗೆಯೇ, ಬೋರ್‌ಬ್ಯಾಂಕ್ ರೋಡ್‌ನಿಂದ ನೇತಾಜಿ ರೋಡ್‌ಗೆ ಕನೆಕ್ಟ್ ಮಾಡುವ ಫುಟ್ ಓವರ್ ಬ್ರಿಡ್ಜ್ ಕೂಡ ನಿರ್ಮಾಣ ಮಾಡಲಾಗತ್ತಿದೆ. ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣ ನವೀಕರಣ ಕೆಲಸವು 2023ರ ಫೆಬ್ರುವರಿಗೆ ಮುಕ್ತಾಯವಾಗಲಿದೆ.

ಇದನ್ನು ಓದಿ | Yeshwantpur railway station | ಯಶವಂತಪುರ ರೈಲು ನಿಲ್ದಾಣ ನವೀಕರಣ ಶುರು, ಹೇಗಿರಲಿದೆ ಹೊಸ ಸ್ಟೇಷನ್?

Exit mobile version