ಬೆಂಗಳೂರು: ಸೈಬರ್ ವಂಚನೆ (fraud case) ಪ್ರಕರಣದ ಸಂಬಂಧ ಕೇರಳಕ್ಕೆ ತೆರಳಿದ್ದ ಸೈಬರ್ ಕ್ರೈಂ ಪೊಲೀಸರು (Whitefield Cyber Crime Police) ಆರೋಪಿಗಳಿಂದ 3 ಲಕ್ಷ ರೂ. ಲಂಚಕ್ಕೆ ಬೇಡಿಕೆಯಿಟ್ಟ ಆರೋಪದಡಿ ಬಂಧಿತರಾಗಿದ್ದಾರೆ. ಸಿಇಎನ್ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಸೇರಿ ಮೂವರು ಬಂಧಿತರಾಗಿದ್ದಾರೆ.
ಅಂದಹಾಗೇ, ಸಾಫ್ಟ್‌ವೇರ್ ಎಂಜಿನಿಯರ್‌ರೊಬ್ಬರಿಗೆ ಉದ್ಯೋಗ ಕೊಡಿಸುವುದಾಗಿ ವಂಚನೆ ಆಗಿತ್ತು. ಹೀಗಾಗಿ ವಂಚನೆಗೊಳಗಾದ ಚಂದಕ್ ಶ್ರೀಕಾಂತ್ ಎಂಬುವವರು ದೂರು ಕೊಟ್ಟಿದ್ದರು. ಚಂದಕ್ ಶ್ರೀಕಾಂತ್‌ಗೆ ದುಷ್ಕರ್ಮಿಗಳು ಆನ್‌ಲೈನ್ ಮೂಲಕ 26 ಲಕ್ಷ ರೂ. ವಂಚನೆ ಮಾಡಿದ್ದರು.
ಇದನ್ನೂ ಓದಿ: Assault Case : ಬೇಲ್‌ಗಾಗಿ ಲಾಯರ್‌ರೇ ಕಿಡ್ನ್ಯಾಪ್; ಅರೆಬೆತ್ತಲೆಗೊಳಿಸಿ ರೌಡಿಸಂ
ಈ ಸಂಬಂಧ ಚಂದಕ್ ದೂರು ನೀಡಿದ್ದರು. ವೈಟ್ ಫೀಲ್ಡ್ ಸಿಇಎನ್ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದರು. ಮೊದಲಿಗೆ ಮಡಿಕೇರಿಯ ಐಸಾಕ್ ಎಂಬಾತನ ಬಗ್ಗೆ ಸುಳಿವು ಸಿಕ್ಕಿತ್ತು. ಅಲ್ಲಿ ಹೋಗಿ ಪರಿಶೀಲನೆ ನಡೆಸಿದಾಗ ಐಸಾಕ್ ಅಕೌಂಟ್‌ನಲ್ಲಿ 2 ಕೋಟಿ ಹಣ ವರ್ಗಾವಣೆ ಆಗಿರುವುದು ಪತ್ತೆ ಆಗಿತ್ತು.
ವೈಟ್ ಫೀಲ್ಡ್ ಸಿಇಎನ್ ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಇದರ ಜಾಡನ್ನು ಹಿಡಿದು ಕೇರಳಕ್ಕೆ ಹೊರಟಿದ್ದರು. ನೌಶಾದ್ ಎಂಬಾತನಿಂದ ಆನ್‌ಲೈನ್ ವಂಚನೆ ಬಗ್ಗೆ ಸಾಕ್ಷಿ ಸಿಕ್ಕಿತ್ತು. ಆರೋಪಿಯನ್ನು ವಶಕ್ಕೆ ಪಡೆಯಲು ಕೇರಳದ ಕೊಚ್ಚಿ ನಗರದ ಕಲ್ಲಂಚೇರಿಗೆ ತೆರಳಿದ್ದರು. ಈ ವೇಳೆ ಇನ್‌ಸ್ಪೆಕ್ಟರ್ ಶಿವಪ್ರಕಾಶ್ 3 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ನೌಶಾದ್ ಕಲ್ಲಂಚೇರಿ ಪೊಲೀಸರಿಗೆ ದೂರು ನೀಡಿದ್ದಾನೆ.
ಈ ದೂರಿನನ್ವಯ ಕಲ್ಲಂಚೇರಿ ಪೊಲೀಸರು ಇನ್‌ಸ್ಪೆಕ್ಟರ್ ಶಿವಪ್ರಕಾಶ್ ಸೇರಿದಂತೆ ಮೂವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರು ಪೊಲೀಸರು ವಂಚನೆ ಪ್ರಕರಣದ ತನಿಖೆಗೆ ಎಂದು ಬಂದಿರುವುದಾಗಿ ತಿಳಿಸಿದ್ದರೂ, ಕಲ್ಲಂಚೇರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜತೆಗೆ ಈ ಸಂಬಂಧ ನಿನ್ನೆ (ಆ.2) ಕಲ್ಲಂಚೇರಿ ಪೊಲೀಸರು ನಾಲ್ವರ ವಿರುದ್ಧ ಎಫ್‌ಐಆರ್ ದಾಖಲು ಮಾಡಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ