Site icon Vistara News

Bengaluru Cylinder Blast: ಬೆಂಗಳೂರಿನಲ್ಲಿ ಗ್ಯಾಸ್‌ ಸಿಲಿಂಡರ್‌ ಸ್ಫೋಟ; ಮಕ್ಕಳು ಸೇರಿ 10 ಜನರಿಗೆ ಗಂಭೀರ ಗಾಯ

Gas cylinder blast in Bengaluru, 10 people, including children, seriously injured

Gas cylinder blast in Bengaluru, 10 people, including children, seriously injured

ಬೆಂಗಳೂರು: ರಾಜಧಾನಿಯ ಕುವೆಂಪು ನಗರದ ಮರಿಯಪ್ಪನಪಾಳ್ಯದ ಅರಳಿಮರದ ಬಳಿಯ ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ (Bengaluru Cylinder Blast) ಸ್ಫೋಟಗೊಂಡಿದ್ದು, ಮಕ್ಕಳು ಸೇರಿದಂತೆ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸ್ಫೋಟದಿಂದಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ವಸ್ತುಗಳು

ಜಲೀಲ್ ಎನ್ನುವವರ ಮನೆಯ ಎರಡನೇ ಮಹಡಿಯಲ್ಲಿ ಆದಿಲ್ ಎಂಬುವವರು ವಾಸವಿದ್ದು, ಮನೆಯಲ್ಲಿ ಚಿಕ್ಕ ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸಮಾರಂಭ ನಿಮಿತ್ತ ಗುರುವಾರ ರಾತ್ರಿ ಪೂರ್ತಿ ತಿಂಡಿ-ತಿನಿಸುಗಳನ್ನು ಮಾಡಿಟ್ಟಿದ್ದರು. ಆದರೆ ಬೆಳಗ್ಗೆ ಸಿಲಿಂಡರ್ ಲೀಕ್ ಆಗಿದ್ದು, ತಿಂಡಿ ತಿನಿಸಿನ ಘಮದಿಂದಾಗಿ ಗ್ಯಾಸ್‌ ವಾಸನೆ ತಿಳಿದು ಬಂದಿಲ್ಲ. ಎಂದಿನಂತೆ ಬೆಳಗ್ಗೆ ಹಾಲು ಕಾಯಿಸಲು ಗ್ಯಾಸ್ ಹಚ್ಚಿದಾಗ ಸಿಲಿಂಡರ್ ಬ್ಲಾಸ್ಟ್ ಆಗಿದೆ.

ಇದನ್ನೂ ಓದಿ: ಲೋಕಾಯುಕ್ತ ಇರೋದೇ ಭ್ರಷ್ಟಾಚಾರ ತಡೆಯೋಕೆ; ಬಿಜೆಪಿ ಶಾಸಕನ ಪುತ್ರನ ಲಂಚ ಹಗರಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ

ಗ್ಯಾಸ್‌ ಸ್ಫೋಟದ ತೀವ್ರತೆಗೆ ಮನೆ ಗೋಡೆ ಕುಸಿತ

ಇನ್ನು ಮನೆಯಲ್ಲಿದ್ದ 6 ಮಕ್ಕಳಿಗೂ ಗಾಯವಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ. ಸಿಲಿಂಡರ್ ಲೀಕೇಜ್‌ ಅವಘಡದಿಂದಾಗಿ ಮನೆಯ ಗೋಡೆ ಕುಸಿತಗೊಂಡಿದ್ದು, ಹಲವೆಡೆ ಬಿರುಕು ಬಿಟ್ಟಿವೆ. ಸ್ಥಳಕ್ಕೆ ರಾಜಾಜಿನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜತೆಗೆ ಸ್ಥಳಕ್ಕೆ ಅಗ್ನಿಶಾಮಕದಳ ಸಿಬ್ಬಂದಿ ದೌಡಾಯಿಸಿದ್ದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಕಿಗಾಹುತಿಯಾದ ಚಪ್ಪಲಿಗಳು

ಆಕಸ್ಮಿಕ ಬೆಂಕಿ ಅವಘಡ ಚಪ್ಪಲಿ ಅಂಗಡಿ ಭಸ್ಮ

ಚಪ್ಪಲಿ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅವಘಡದಿಂದ ವಸ್ತುಗಳು ಭಸ್ಮವಾಗಿರುವ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ಬಾಬಾನಗರದಲ್ಲಿ ನಡೆದಿದೆ. ನಿಂಗಪ್ಪ ಯಲ್ಲಪ್ಪ ಹನುಮರಿ ಎಂಬುವರಿಗೆ ಸೇರಿದ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲದೇ, ಅಂಗಡಿಯಲ್ಲಿದ್ಧ ವಿವಿಧ ಬ್ರ್ಯಾಂಡ್ ಚಪ್ಪಲಿ ಬೆಂಕಿಗಾಹುತಿ ಆಗಿವೆ. ಸುಮಾರು 1.50 ಲಕ್ಷ ಮೌಲ್ಯದ ವಸ್ತುಗಳು ಹಾನಿಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಿಕೋಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version