Site icon Vistara News

Bengaluru in trouble| ನವೆಂಬರ್‌ ವರೆಗೂ ಮಳೆ, ಆಮೇಲೆ ಥರಗುಟ್ಟುವ ಚಳಿಗೆ ರೆಡಿ ಆಗಬೇಕು!

Bangalore chali

ಬೆಂಗಳೂರು: ಭಾರಿ ಮಳೆಯಿಂದ ತತ್ತರಿಸಿ ಕಂಗೆಟ್ಟಿರುವ ರಾಜಧಾನಿ ಬೆಂಗಳೂರಿಗೆ ವರುಣ ಸಂಕಟ ಈ ಬಾರಿ ನವೆಂಬರ್‌ವರೆಗೂ ಮುಂದುವರಿಯಲಿದೆ ಎಂದು ತಜ್ಞರು ತಿಳಿಸಿದ್ದಾರೆ. ಇದರ ಜತೆಗೆ ಇನ್ನೊಂದು ಕಳವಳಕಾರಿ ಅಂಶವೆಂದರೆ, ಈ ಬಾರಿ ಚಳಿಯೂ ಸ್ವಲ್ಪ ಜೋರಾಗಿಯೇ ಇರಲಿದೆ.

ಈ ಬಾರಿ ಮಳೆಗಾಲ ತಡವಾಗಿ ಮುಗಿಯುತ್ತದೆ. ಹಾಗಾಗಿ ತಕ್ಷಣಕ್ಕೆ ಚಳಿಗಾಲದ ಥಂಡಿ ಆವರಿಸಿಕೊಳ್ಳಲಿದೆ. ಅಂದರೆ ಒಂದು ರೀತಿಯ ಚಳಿ ವಾತಾವರಣ ನಿರಂತರವಾಗಿರಲಿದೆ. ಈಗಾಗಲೇ ಮಳೆಗಾಲದ ಸಮಸ್ಯೆಗಳಿಂದ ತತ್ತರಿಸಿರುವ ಬೆಂಗಳೂರಿಗೆ ಇದು ಸ್ವಲ್ಪ ಕೆಟ್ಟ ಸುದ್ದಿನೆ.

ಬೆಂಗಳೂರಿಗರು ಮಳೆಗಾಲ ಮುಗಿಯುತ್ತಿದ್ದಂತೆಯೇ ಚಳಿಗಾಲಕ್ಕೆ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ. ಮಳೆಗಾಲದಲ್ಲಿ ನಿರಂತರ ಉಷ್ಣಾಂಶ ಕಡಿಮೆ ಆಗುವುದರಿಂದ ಉಷ್ಣಾಂಶ ಕಡಿಮೆಯಾಗಿ ಚಳಿಯ ಪ್ರಮಾಣ ಹೆಚ್ಚಾಗಲಿದೆ ಎನ್ನುತ್ತಾರೆ ಹವಮಾನ ಬದಲಾವಣೆ ವಿಜ್ಞಾನಿ ರಾಜೇಗೌಡ ಅವರು.

ಈ ಬಾರಿ ಎಂಟು ಡಿಗ್ರಿ ಸೆಲ್ಶಿಯಸ್‌ ಸಾಧ್ಯತೆ
ಕಳೆದ ವರ್ಷ ಬೆಂಗಳೂರಿನ ನಾಗರಿಕರನ್ನು ಚಳಿ ಅಷ್ಟಾಗಿ ಬಾಧಿಸಲಿಲ್ಲ. ಕಳೆದ ವರ್ಷ ಚಳಿಯ ಪ್ರಮಾಣ ಶೆ.12 ಡಿಗ್ರಿ ಸೆಲ್ಸಿಯಸ್ ಇತ್ತು. ನಿಜವೆಂದರೆ ಕಳೆದ ಐದು ವರ್ಷಗಳಲ್ಲೂ ಬೆಂಗಳೂರಿಗೆ ಅಷ್ಟೊಂದು ಸಮಸ್ಯೆ ಇರಲಿಲ್ಲ. ಈ ವರ್ಷ ಉಷ್ಣಾಂಶ 8 ಡಿಗ್ರಿ ಸೆಲ್ಸಿಯಸ್ ಗೆ ಇಳಿಯುವ ಸಾಧ್ಯತೆ ಇದೆ ಎಂದು ಅಂದಾಜು ಮಾಡಲಾಗಿದೆ.

ಮಳೆಗಾಲದಲ್ಲಿ ನೀರು ಮನೆಯೊಳಗೆ ನುಗ್ಗುವ, ಸಂಚಾರ ಮತ್ತಿತರ ಸಮಸ್ಯೆಗಳನ್ನು ಸೃಷ್ಟಿಸಿದರೆ, ಚಳಿಗಾಲ ವಿಪರೀತ ಆರೋಗ್ಯ ಸಮಸ್ಯೆಗಳನ್ನು ಸೃಷ್ಟಿಸುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ಇದರ ಬಗ್ಗೆ ಹೆಚ್ಚು ಜಾಗೃತೆ ವಹಿಸಬೇಕಾಗುತ್ತದೆ. ಈಗಾಗಲೇ ಗಾಳಿಯ ವೇಗ ಜಾಸ್ತಿಯಾಗಿದ್ದು ಚಳಿಯ ಅನುಭವವಾಗುತ್ತಿದೆ.

ಇದನ್ನೂ ಓದಿ | Bangalore Rain| ಬೆಂಗಳೂರು ಬಿಟ್ಟು ಹೋಗಲ್ಲ, ಮಳೆ ಸಮಸ್ಯೆ ಪರಿಹಾರದ ಭರವಸೆ ಇದೆ ಎಂದ ಐಟಿ ಕಂಪನಿಗಳು

Exit mobile version