Site icon Vistara News

Ola Cab Compensation: ಓಲಾ ಕ್ಯಾಬ್‌ನಲ್ಲಿ ಎಸಿ ಇಲ್ಲದ್ದಕ್ಕೆ ದೂರು, ಬೆಂಗಳೂರು ವ್ಯಕ್ತಿಗೆ 15 ಸಾವಿರ ರೂ. ಪರಿಹಾರ

Ola Cab Compensation

ಬೆಂಗಳೂರು: ಓಲಾ ಕ್ಯಾಬ್‌ನಲ್ಲಿ ಎಸಿ ಸೇವೆ ಇಲ್ಲದ ಕಾರಣಕ್ಕೆ ಬೆಂಗಳೂರಿನ ಪ್ರಯಾಣಿಕರೊಬ್ಬರಿಗೆ 15 ಸಾವಿರ ರೂಪಾಯಿ ಪರಿಹಾರ (Ola Cab Compensation) ನೀಡಬೇಕು ಎಂದು ನಗರದ ಗ್ರಾಹಕ ನ್ಯಾಯಾಲಯವು ಆದೇಶ ನೀಡಿದೆ. ಜನವರಿ 18ರಂದು ಕೋರ್ಟ್‌ ಆದೇಶ ಹೊರಡಿಸಿದ್ದು, 60 ದಿನದೊಳಗೆ ಪರಿಹಾರದ ಮೊತ್ತ ನೀಡಬೇಕು ಎಂದು ಸೂಚಿಸಿದೆ.

2021ರ ಅಕ್ಟೋಬರ್‌ನಲ್ಲಿ ಬೆಳ್ಳಂದೂರು ನಿವಾಸಿ, ಉದ್ಯಮಿ ವಿಕಾಸ್‌ ಭೂಷಣ್‌ ಅವರು ಓಲಾ ಕ್ಯಾಬ್‌ ಬುಕ್‌ ಮಾಡಿ, ನಗರದಲ್ಲಿ 80 ಕಿ.ಮೀ ಸಂಚರಿಸಿದ್ದರು. ಸಂಚಾರದುದ್ದಕ್ಕೂ ಓಲಾ ಕ್ಯಾಬ್‌ನ ಎಸಿ ಕಾರ್ಯನಿರ್ವಹಿಸಿರಲಿಲ್ಲ. ಆದರೆ, ವಿಕಾಸ್‌ ಭೂಷಣ್‌ ಅವರು ಎಸಿ ವೆಚ್ಚ ಸೇರಿ ಒಟ್ಟು 1,837 ರೂ. ಪಾವತಿಸಿದ್ದರು. ತಮಗಾದ ಸೇವಾ ಅನನುಕೂಲತೆಯನ್ನು ಉಲ್ಲೇಖಿಸಿ ಓಲಾ ಸಂಸ್ಥಾಪಕ ಭವಿಷ್‌ ಅಗ್ರರ್ವಾಲ್‌ ಅವರಿಗೆ ಇ-ಮೇಲ್‌ ಮಾಡಿದ್ದರು. ಟ್ವಿಟರ್‌ನಲ್ಲಿಯೂ ಸಂಪರ್ಕಿಸಿದ್ದರು.

ಓಲಾ ಸಂಸ್ಥಾಪಕ ಭವಿಷ್‌ ಅಗರ್ವಾಲ್‌ ಅವರು ವಿಕಾಸ್‌ ಭೂಷಣ್‌ ಮನವಿಗೆ ಸ್ಪಂದಿಸದ ಕಾರಣ ಕೊನೆಗೆ ಅವರು ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಸೇವೆಯ ವ್ಯತ್ಯಯಕ್ಕಾಗಿ ವಿಕಾಸ್‌ ಭೂಷಣ್‌ ಅವರಿಗೆ 10 ಸಾವಿರ ರೂ. ಪರಿಹಾರ, 5 ಸಾವಿರ ರೂ. ಕೋರ್ಟ್‌ ವೆಚ್ಚ ಹಾಗೂ ಪ್ರಯಾಣದ ಶುಲ್ಕವಾದ 1,837 ರೂ.ಗೆ ಬಡ್ಡಿ ಸಮೇತ ಹಿಂತಿರುಗಿಸಬೇಕು ಎಂದು ಆದೇಶಿಸಿದೆ.

ಇದನ್ನೂ ಓದಿ: Ola auto service | ಸರ್ಕಾರ ನಿಗದಿಪಡಿಸಿದ ಆಟೋ ದರಕ್ಕೆ ಓಲಾ, ಉಬರ್‌ ಆಕ್ಷೇಪ: ಅಧಿಸೂಚನೆಗೆ ಕೋರ್ಟ್‌ ತಡೆ

Exit mobile version