ಬೆಂಗಳೂರು: ಇಲ್ಲಿನ ವಿವಿ ಪುರಂನ (VV puram) ನ್ಯೂ ತರುಗುಪೇಟೆಯಲ್ಲಿ ನೇಪಾಳಿ ಯುವಕನ ಹತ್ಯೆ (murder Case) ಮಾಡಿದ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಗೆ ಗಾಂಜಾ (Durgs) ನಶೆ ಕಾರಣವೆಂದು ತಿಳಿದುಬಂದಿದೆ. ಸತೀಶ್ ಅಲಿಯಾಸ್ ಕಳಿ ಹಾಗೂ ಶ್ರೀನಿವಾಸ್ ಅಲಿಯಾಸ್ ಚಿನು ಬಂಧಿತ ಆರೋಪಿಗಳಾಗಿದ್ದು, ರಮೇಶ್ ಕೊಲೆಯಾದವನು.
ರಮೇಶ್ ತನ್ನ ಮಾವ ರತನ್ ಎಂಬುವವರ ಬಳಿ ಮನೆ ಹಾಗೂ ತೋಟಗಳಿಗೆ ಹಾಗೂ ಬೃಹತ್ ಕಟ್ಟಡಗಳಿಗೆ ಗ್ರೀನ್ ಮೆಶ್ ಅಳವಡಿಸುವ ಕೆಲಸ ಮಾಡಿಕೊಂಡಿದ್ದ. ಕಳೆದ ಭಾನುವಾರ (ಮಾ.28ರಂದು) ಮೆಟೀರಿಯಲ್ ತರಲು ತನ್ನ ಸ್ನೇಹಿತ ಇಂದ್ರೇಶ್ ಜತೆಗೆ ಜೆ.ಸಿ ರೋಡ್‌ಗೆ ಬಂದಿದ್ದ. ಮಾರ್ಗ ಮಧ್ಯೆ ಇಬ್ಬರು ಜತೆಯಾಗಿ ಮದ್ಯಪಾನ ಮಾಡಲು ಬಾರ್‌ಗೆ ಹೋಗಿದ್ದರು.
ಈ ವೇಳೆ ಅಲ್ಲೇ ಇದ್ದ ಆರೋಪಿ ಸತೀಶ್ ಹಾಗೂ ಶ್ರೀನಿವಾಸ್ ಗಾಂಜಾ ಸೇವನೆ ಮಾಡುತ್ತಿದ್ದರು. ಇದನ್ನು ನೋಡಿದ ರಮೇಶ್ ಹಾಗೂ ಇಂದ್ರೇಶ್ ಗಾಂಜಾ ಪೆಡ್ಲರ್ ಎಂದುಕೊಂಡಿದ್ದರು. ಬಳಿಕ ಆರೋಪಿಗಳ ಹಿಂದೆ ಬಿದ್ದ ರಮೇಶ್ ಹಾಗೂ ಇದ್ರೇಶ್ 500 ರೂ. ಕೊಟ್ಟು ಗಾಂಜಾ ಕೊಡುವಂತೆ ಕೇಳಿದ್ದರು. ಮೊದಲೇ ಗಾಂಜಾ ನಶೆಯಲ್ಲಿದ್ದ ಆರೋಪಿಗಳು ಗಾಂಜಾ ಇಲ್ಲವೆಂದು ಹೇಳಿದ್ದಾರೆ. ಆದರೂ ಬಿಡದ ರಮೇಶ್ ಪದೇ ಪದೆ ಗಾಂಜಾ ನೀಡುವಂತೆ ಪೀಡಿಸಿ ಜಗಳ ಶುರುಮಾಡಿದ್ದ. ಸತೀಶ್ ಹಾಗೂ ಶ್ರೀನಿವಾಸ್‌ಗೆ ಇವರಿಬ್ಬರೂ ಸೇರಿ ಹಲ್ಲೆ ಮಾಡಿದ್ದಾರೆ.
ಸಿಟ್ಟಿಗೆದ್ದ ಸತೀಶ್ ಹಿಂದೆಯಿಂದ ಬಂದು ಬಿಯರ್ ಬಾಟಲಿಯಿಂದ ರಮೇಶ್ ಕುತ್ತಿಗೆಯನ್ನು ಇರಿದಿದ್ದಾನೆ. ಬಳಿಕ ಇಬ್ಬರೂ ಪರಾರಿ ಆಗಿದ್ದರು. ಈ ಗಲಾಟೆಯಲ್ಲಿ ಹೇಗೋ ಇಂದ್ರೇಶ್ ತಪ್ಪಿಸಿಕೊಂಡಿದ್ದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದ. ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ವಿವಿಪುರ ಪೊಲೀಸರು, ಸಿಸಿಟಿವಿ ಆಧರಿಸಿ ಪ್ರಕರಣವನ್ನು ಭೇದಿಸಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ತಮಿಳುನಾಡು ಮೂಲದವರಾಗಿದ್ದು, ನ್ಯೂ ತರುಗು ಪೇಟೆಯಲ್ಲಿ ಮೂಟೆ ಹೊರುವ ಕೆಲಸ ಮಾಡಿಕೊಂಡಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ.
ಕಾಂತಾರ ಚಿತ್ರದ ದೃಶ್ಯ ಕಳಿಸಿ ಕೊಲೆ ಬೆದರಿಕೆ! ದೂರು ದಾಖಲು
ಬೆಂಗಳೂರು: ʼಕಾಂತಾರʼ ಚಲನಚಿತ್ರದ ದೃಶ್ಯವೊಂದು ಕೊಲೆ ಬೆದರಿಕೆಗೆ ಬಳಕೆಯಾಗಿರುವ ವಿಲಕ್ಷಣ ಘಟನೆ ನಡೆದಿದೆ. ಜಮೀನು ವ್ಯಾಜ್ಯ ಸಂಬಂಧ ಹಿರಿಯ ನಾಗರಿಕರೊಬ್ಬರಿಗೆ ಹೀಗೆ ಕೊಲೆ ಬೆದರಿಕೆ ಹಾಕಲಾಗಿದೆ.
ಕುಣಿಗಲ್‌ನಲ್ಲಿ ನರಸಿಂಹಮೂರ್ತಿ ಎಂಬ ಹಿರಿಯ ನಾಗರಿಕರಿಗೆ ಶರತ್ ಕುಮಾರ್ ಎಂಬಾತ ಹೀಗೆ ಹತ್ಯೆ ಬೆದರಿಕೆ ಒಡ್ಡಿದ್ದಾನೆ. ಕುಣಿಗಲ್‌ನಲ್ಲಿ ಪತ್ನಿ ಹೆಸರಿನಲ್ಲಿ ನರಸಿಂಹ ಮೂರ್ತಿ ಎರಡು ಎಕರೆ ಜಮೀನು ಖರೀದಿ ಮಾಡಿದ್ದರು. ಈ ಜಮೀನಿನ ಕುರಿತು ಶರತ್ ಕುಮಾರ್ ಎಂಬಾತ ತಗಾದೆ ತೆಗೆದಿದ್ದ. ಜಮೀನಿಗೆ ಈತ ಅತಿಕ್ರಮ ಪ್ರವೇಶ ಮಾಡಿದ್ದಾನೆ ಎಂದು ಈ ಹಿಂದೆ ನರಸಿಂಹಮೂರ್ತಿ ದೂರು ನೀಡಿದ್ದರು. ಸದ್ಯ ಜಮೀನು ವ್ಯಾಜ್ಯ ನ್ಯಾಯಾಲಯದಲ್ಲಿದೆ.
ಇದನ್ನೂ ಓದಿ: SC-ST Reservation: ಒಳಮೀಸಲಾತಿ ವಿರೋಧಿಸಿ ವಿಜಯನಗರ, ಕಲಬುರಗಿಯಲ್ಲಿ ಬಂಜಾರರ ಪ್ರತಿಭಟನೆ; ಶೆಟ್ಟರ್, ಖೂಬಾ ಸಮರ್ಥನೆ
ಇದೇ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಶರತ್ ಕುಮಾರ್ ತನಗೆ ಕೊಲೆ ಬೆದರಿಕೆ ಹಾಕುತ್ತಿದ್ದಾನೆ. ವಾಟ್ಸ್ಯಾಪ್ ಮೂಲಕ ʼಕಾಂತಾರʼ ಚಿತ್ರದ ದೃಶ್ಯಗಳನ್ನು ಕಳಿಸಿ ಇದೇ ರೀತಿ ಸಾಯ್ತೀಯ ಎಂದು ಬೆದರಿಕೆ ಹಾಕಿದ್ದಾನೆ ಎಂದು ನರಸಿಂಹಮೂರ್ತಿ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ಎಫ್‌ಐಆರ್‌ನಲ್ಲಿ ಕೂಡ ಉಲ್ಲೇಖಿಸಿದ್ದಾರೆ. ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಕಿರುಕುಳ, ಕೊಲೆ ಬೆದರಿಕೆ ದೂರು ದಾಖಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.