ಬೆಂಗಳೂರು: ಇಲ್ಲಿನ ವಿವಿ ಪುರಂನ ನ್ಯೂ ತರಗುಪೇಟೆಯಲ್ಲಿ ನೇಪಾಳಿ ಯುವಕನೊಬ್ಬ ಕೊಲೆಯಾಗಿದ್ದಾನೆ. ರಮೇಶ್ ಹತ್ಯೆಯಾದವನು. ಹಂತಕರು ರಮೇಶ್‌ನ ಕುತ್ತಿಗೆ ಭಾಗಕ್ಕೆ ಹಲ್ಲೆ ಮಾಡಿದ್ದು, ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ವಿವಿಪುರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಹತ್ಯೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ರಮೇಶ್ ತನ್ನ ಸ್ನೇಹಿತ ಇಂದ್ರೇಶ್ ಜತೆಗೆ ಇದ್ದಾಗ ಗುಂಪೊಂದು ಗಲಾಟೆ ಮಾಡಿದೆ. ಗಲಾಟೆಯಲ್ಲಿ ಆರೋಪಿಗಳು ರಮೇಶ್‌ನ ಮೇಲೆ ತೀವ್ರ ಹಲ್ಲೆ ನಡೆಸಿದೆ. ಇತ್ತ ಗಲಾಟೆಯಲ್ಲಿ ಇಂದ್ರೇಶ್ ತಪ್ಪಿಸಿಕೊಂಡಿದ್ದು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಹಲ್ಲೆಗೊಳಾದ ರಮೇಶ್‌ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾನೆ. ರಮೇಶ್ ಹಾಗೂ ಇಂದ್ರೇಶ್ ಮೂಲತಃ ನೇಪಾಳದವರು ಎಂದು ತಿಳಿದು ಬಂದಿದೆ. ರಮೇಶ್ ತನ್ನ ಮಾವ ರತನ್ ಎಂಬುವವರ ಬಳಿ ತೋಟಗಳಿಗೆ ಮೆಶ್ ಅಳವಡಿಸುವ ಬಿಸಿನೆಸ್ ಕೆಲಸ ಮಾಡಿಕೊಂಡಿದ್ದ. ಭಾನುವಾರ ಮೆಟೀರಿಯಲ್ ತರಲು ಜೆ.ಸಿ ರೋಡ್‌ಗೆ ಬಂದಿದ್ದ. ಅಲ್ಲದೆ, ಮದ್ಯಪಾನ ಮಾಡಿ ತರಗುಪೇಟೆಗೆ ಸ್ನೇಹಿತ ಇಂದ್ರೇಶ್ ಜತೆ ಬಂದಿದ್ದ. ಈ ವೇಳೆ ಆರೋಪಿಗಳು ಅಟ್ಯಾಕ್ ಮಾಡಿ ಕುತ್ತಿಗೆಗೆ ಹೊಡೆದು ಹತ್ಯೆ ಮಾಡಿದ್ದಾರೆ.
ಸದ್ಯ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ. ಯಾವ ಕಾರಣಕ್ಕಾಗಿ ಕೊಲೆಯಾಗಿದೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಕುಡಿದು ಗಲಾಟೆ ಮಾಡಿಕೊಂಡಿದ್ದಾರಾ ಅಥವಾ ಹಳೇ ದ್ವೇಷವಿತ್ತಾ? ಏನಾದರೂ ಇದೆಯಾ ಎಂಬ ಆಯಾಮಾದಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮಗನನ್ನು ಚೂರಿಯಿಂದ ಇರಿದು ಕೊಂದ ಪಾಪಿ ತಂದೆ
ಕೋಲಾರ: ತಾಯಿಯ ಸಾವಿನ ಬಳಿಕ ಅಜ್ಜಿ ಮನೆಯಲ್ಲೇ ಉಳಿದು, ತನ್ನ ಜತೆ ಬರಲು ಒಪ್ಪದ ಎಂಟು ವರ್ಷದ ಮಗನನ್ನು ಪಾಪಿ ತಂದೆಯೊಬ್ಬ ಚೂರಿಯಿಂದ ಇರಿದು ಕೊಲೆ (Murder Case) ಮಾಡಿದ್ದಾನೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿಯಲ್ಲಿ ಈ ಘಟನೆ ನಡೆದಿದೆ.
ಎಂಟು ವರ್ಷದ ಬಾಲಕ ಭುವನ್ ತೇಜ್ ಅಪ್ಪನ ಕೈಯಿಂದಲೇ ಕೊಲೆಯಾದ ದುರ್ದೈವಿ ಮಗ. ಸುಬ್ರಮಣಿ ನಂಗಲಿ ಎಂಬಾತನೇ ಕೊಲೆಗಾರ ತಂದೆ. ಭುವನ್‌ತೇಜ್ ತನ್ನ ತಂದೆ ಮತ್ತು ತಾಯಿಯ ಜತೆ ಬೆಂಗಳೂರಿನಲ್ಲಿ ಇದ್ದ. ಈ ನಡುವೆ ಸುಬ್ರಹ್ಮಣ್ಯ ನಂಗಲಿಯ ಪತ್ನಿ ಮೃತಪಟ್ಟಿದ್ದರು. ಭುವನ್‌ತೇಜ್‌ಗೆ ಅಪ್ಪನ ಮೇಲೆ ಅಷ್ಟೊಂದು ಇಷ್ಟವಿರಲಿಲ್ಲ. ಹೀಗಾಗಿ ಅವನು ಅಮ್ಮನ ಸಾವಿನ ನಂತರ ಅಪ್ಪನ ಜತೆ ಇರಲು ಒಪ್ಪಿರಲಿಲ್ಲ. ಹೀಗಾಗಿ ಕೋಲಾರದ ನಂಗಲಿ ಗ್ರಾಮದ ಎಸ್‌ಬಿಐ ಬ್ಯಾಂಕ್ ಹಿಂಭಾಗದಲ್ಲಿರುವ ಮನೆಯಲ್ಲಿ ಅಜ್ಜಿ ಜತೆ ವಾಸವಿದ್ದ. ಈ ನಡುವೆ, ನಂಗಲಿ ಆಗಾಗ ಕೋಲಾರದ ಮನೆಗೆ ಹೋಗಿ ಮಗನನ್ನು ತನ್ನ ಜತೆ ಬರುವಂತೆ ಒತ್ತಾಯಿಸುತ್ತಿದ್ದ. ಆದರೆ ಭುವನ್ ತೇಜ್ ಒಪ್ಪುತ್ತಲೇ ಇರಲಿಲ್ಲ.
ಸೋಮವಾರವೂ ಸುಬ್ರಹ್ಮಣ್ಯ ನಂಗಲಿ ಕೋಲಾರದಲ್ಲಿರುವ ಮನೆಗೆ ಹೋಗಿದ್ದಾನೆ. ಆಗಲೂ ಭುವನ್ ತೇಜ್‌ನನ್ನು ತನ್ನ ಜತೆಗೆ ಬರುವಂತೆ ಕರೆದಿದ್ದಾನೆ. ಆದರೆ ಭುವನ್ ಒಪ್ಪಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ತಂದೆ ಮಗನಿಗೆ ಚೂರಿಯಿಂದ ಇರಿದಿದ್ದಾನೆ.
ಇದನ್ನೂ ಓದಿ: Fraud Case: ಮೇಕೆ ಮಾಂಸ ತಿಂದು ದುಡ್ಡು ಕೊಡದೇ ಮೋಸ ಮಾಡಿದ್ರಾ ನಲಪಾಡ್ ಗ್ಯಾಂಗ್?
ಭುವನ್‌ನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ಪ್ರಾಣ ಉಳಿಯಲಿಲ್ಲ. ಘಟನಾ ಸ್ಥಳಕ್ಕೆ ನಂಗಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆಗಾರ ತಂದೆ ಸುಬ್ರಮಣಿ ನಂಗಲಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.