ಬೆಂಗಳೂರು: ಬೆಂಗಳೂರು-ಮೈಸೂರು ನಡುವೆ ಹೊಸದಾಗಿ ನಿರ್ಮಾಣವಾಗಿರುವ ಎಕ್ಸ್‌ಪ್ರೆಸ್ ವೇ (Bangalore Mysore Expressway) 6 ಮೇನ್ ಮತ್ತು ಎರಡು ಬದಿಯಲ್ಲಿ 2 ಸರ್ವೀಸ್ ಲೇನ್‌ಗಳು ಇರಲಿವೆ ಎಂದು ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ.
ಟ್ವೀಟ್‌ನಲ್ಲಿ ಎಕ್ಸ್‌ಪ್ರೆಸ್ ವೇ ಇಮೇಜ್‌ಗಳನ್ನು ಷೇರ್ ಮಾಡಿಕೊಂಡಿರುವ ನಿತಿನ್ ಗಡ್ಕರಿ ಅವರು, 118 ಕಿ.ಮೀ. ಉದ್ದದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ 6 ಮೇನ್ ಲೇನ್ ಮತ್ತು 2 ಸರ್ವೀಸ್ ರಸ್ತೆಗಳು ಎರಡೂ ಬದಿಗೆ ಇರಲಿವೆ. ಭಾರತ್ ಮಾಲಾ ಪರಿಯೋಜನೆಯ ಭಾಗವಾಗಿ ಈ ಎಕ್ಸ್‌ಪ್ರೆಸ್‌ವೇಯನ್ನು 8478 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.ಎಕ್ಸ್‌ಪ್ರೆಸ್‌ವೇಯಿಂದಾಗಿ ಬೆಂಗಳೂರು ಮತ್ತು ಮೈಸೂರು ನಡುವಿನ ಪ್ರಯಾಣದ ಅವಧಿಯನ್ನು 3 ಗಂಟೆಯಿಂದ 75 ನಿಮಿಷಕ್ಕೆ ಇಳಿಸಲಿದೆ ಎಂದು ಅವರು ಹೇಳಿದ್ದಾರೆ.
ಇನ್ನೆರಡು ತಿಂಗಳಲ್ಲಿ ಕರ್ನಾಟಕ ವಿಧಾನಸಭೆಗೆ ಚುನಾವಣೆ ನಡೆಯಲಿದ್ದರಿಂದ ಕೇಂದ್ರ ಸರ್ಕಾರವು ಯೋಜನೆಯ ಶೀಘ್ರವೇ ಲೋಕಾರ್ಪಣೆ ಮಾಡಲಿದೆ. ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್‌ಪ್ರೆಸ್‌ವೇ ಚಾಲನೆ ನೀಡಲಿದ್ದಾರೆಂದು ಹೇಳಲಾಗುತ್ತಿದೆ. ಈಗಾಗಲೇ ಬಗ್ಗೆ ಸಿದ್ಧತೆ ಕೈಗೊಳ್ಳಲಾಗುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ: Bangalore–Mysore Expressway: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಸದ್ಯಕ್ಕೆ ಟೋಲ್ ಸಂಗ್ರಹ ಇಲ್ಲ
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ 10-ಲೇನ್ ಯೋಜನೆಯಾಗಿದ್ದು, ಎರಡು ಸ್ಟ್ರೆಚ್‌ಗಳಾಗಿ ವಿಂಗಡಿಸಲಾಗಿದೆ . ಮೊದಲನೆಯದು ಬೆಂಗಳೂರಿನಿಂದ ನಿಡಘಟ್ಟ ಮತ್ತು ಎರಡನೆಯದು ನಿಡಘಟ್ಟದಿಂದ ಮೈಸೂರು ತನಕ. ಮೊದಲ ಹಂತದಲ್ಲಿ, 52 ಕಿಮೀ ಗ್ರೀನ್‌ಫೀಲ್ಡ್ ಐದು ಬೈಪಾಸ್‌ಗಳನ್ನು ಒಳಗೊಂಡಿದೆ, ಇದು ಬೆಂಗಳೂರಿನ ಟ್ರಾಫಿಕ್ ಬ್ಲಾಕ್‌ಗಳನ್ನು ಕಡಿಮೆ ಮಾಡುತ್ತದೆ ಮತ್ತು ಎಲ್ಲಾ ಪ್ರಯಾಣಿಕರಿಗೆ ತೊಂದರೆ-ಮುಕ್ತ ಪ್ರಯಾಣವನ್ನು ಸೃಷ್ಟಿಸುತ್ತದೆ.