Site icon Vistara News

Bengaluru News: ಬೆಂಗಳೂರಿನಲ್ಲಿ 2ನೇ ರಾಷ್ಟ್ರೀಯ ಮಕ್ಕಳ ಪಾರ್ಶ್ವವಾಯುವಿನ ಶೃಂಗ 2024ಕ್ಕೆ ಚಾಲನೆ

2nd National Pediatric Stroke Conclave 2024 inauguration in Bengaluru

ಬೆಂಗಳೂರು: ನಗರದಲ್ಲಿ ಎರಡು ದಿನಗಳ 2ನೇ ರಾಷ್ಟ್ರೀಯ ಪೀಡಿಯಾಟ್ರಿಕ್ ಸ್ಟ್ರೋಕ್ ಕಾನ್ ಕ್ಲೇವ್ 2024 (ಮಕ್ಕಳ ಪಾರ್ಶ್ವವಾಯು ಶೃಂಗ 2024) ಸಮ್ಮೇಳನಕ್ಕೆ ಚಾಲನೆ ನೀಡಲಾಯಿತು. ಇಂಡಿಯನ್ ಸ್ಟ್ರೋಕ್ ಅಸೋಸಿಯೇಷನ್ (ಐ.ಎಸ್.ಎ) ಅಧ್ಯಕ್ಷ ಡಾ. ನಿರ್ಮಲ್ ಸೂರ್ಯ (Bengaluru News) ಉದ್ಘಾಟಿಸಿದರು.

ಮಕ್ಕಳ ಪಾರ್ಶ್ವವಾಯು ರೋಗತಡೆ, ಆರೈಕೆ ಮತ್ತು ಚಿಕಿತ್ಸೆಯ ಕ್ಷೇತ್ರಗಳ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪರಿಣಿತರು ಒಂದೇ ಸೂರಿನಡಿ ಸೇರುವ ಅಪೂರ್ವ ಸಂದರ್ಭಕ್ಕೆ ಈ ಸಮ್ಮೇಳನ ಸಾಕ್ಷಿಯಾಯಿತು.

ಜಾಗತಿಕವಾಗಿ ಮಕ್ಕಳ ಪಾರ್ಶ್ವವಾಯು ಮಕ್ಕಳಲ್ಲಿ ಮರಣಕ್ಕೆ ಆರನೇ ಮುಂಚೂಣಿಯ ಕಾರಣವಾಗಿದೆ. ಸುಮಾರು ಐವತ್ತರಿಂದ ಅರವತ್ತು ಶೇಕಡಾ ಮಕ್ಕಳ ಪಾರ್ಶ್ವವಾಯು ಪ್ರಕರಣಗಳಿಗೆ ಚಿಕಿತ್ಸೆ ನೀಡಲು ಮತ್ತು ತಡೆಯಲು ಸಾಧ್ಯ.

ಪ್ರತಿ ನಿಮಿಷ ಭಾರತದಲ್ಲಿ ಸುಮಾರು 52 ಶಿಶುಗಳು ಜನಿಸುತ್ತಿದ್ದು ಮಕ್ಕಳ ಪಾರ್ಶ್ವವಾಯುವಿನ ಸಾಮಾಜಿಕ-ಆರ್ಥಿಕ ಪರಿಣಾಮಗಳು ಅಪಾರವಾಗಿವೆ. ಭಾರತದಲ್ಲಿ ಪ್ರಕಟವಾದ ಕೆಲ ಅಧ್ಯಯನಗಳ ಪ್ರಕಾರ ಮಕ್ಕಳ ಪಾರ್ಶ್ವವಾಯು ಮಕ್ಕಳ ಆಸ್ಪತ್ರೆ ಸೇರ್ಪಡೆಯ ಶೇ.1ಕ್ಕಿಂತ ಕಡಿಮೆ ಇದೆ ಮತ್ತು ಎಲ್ಲ ಯುವ ಪಾರ್ಶ್ವವಾಯು ಪ್ರಕರಣಗಳ ಶೇಕಡಾ ಐದರಿಂದ ಹತ್ತರಷ್ಟು (40 ವರ್ಷಗಳ ವಯಸ್ಸಿಗಿಂತ ಕಿರಿಯರು) ಹೊಂದಿವೆ. ಈ ಸಂಖ್ಯೆಗಳು ಬರೀ ಅಂದಾಜು ಆಗಿದೆ ಮತ್ತು ವಾಸ್ತವ ಸಂಖ್ಯೆ ಇನ್ನೂ ಹೆಚ್ಚಾಗಿರುವ ಸಾಧ್ಯತೆ ಇದ್ದು ಸಾಕಷ್ಟು ಪ್ರಕರಣಗಳು ವರದಿಯಾಗುವುದಿಲ್ಲ ಮತ್ತು ಪತ್ತೆಯಾಗುವುದಿಲ್ಲ.

ಇದನ್ನೂ ಓದಿ: Press Day: ಸುಳ್ಳು ಸುದ್ದಿಗಳ ಮೇಲೆ ನಿಗಾ ಇಡಲು ಪ್ರತೀ ಜಿಲ್ಲೆಗಳಲ್ಲೂ ವಿಶೇಷ ಘಟಕ: ಸಿದ್ದರಾಮಯ್ಯ

ವಯಸ್ಕರಲ್ಲಿ ಹೆಚ್ಚು ರಕ್ತದೊತ್ತಡ, ಕರೊನರಿ ಆರ್ಟರಿ ರೋಗ, ಧೂಮಪಾನ, ಬೊಜ್ಜು, ಹೆಚ್ಚಿನ ಕೊಲೆಸ್ಟರಾಲ್ ಮತ್ತು ದುರ್ಬಲ ಜೀವನಶೈಲಿ ಇತ್ಯಾದಿ ರಿಸ್ಕ್ ಅಂಶಗಳಿರುತ್ತವೆ ಆದರೆ ಮಕ್ಕಳ ಪಾರ್ಶ್ವವಾಯುವಿಗೆ ಕಾರಣಗಳನ್ನು ಗುರುತಿಸುವುದು ಬಹಳ ಸಂಕೀರ್ಣ ಮತ್ತು ಹಲವು ಅಂಶಗಳನ್ನು ಹೊಂದಿದೆ.

ಸಮ್ಮೇಳನದಲ್ಲಿ ಉಪನ್ಯಾಸ ನೀಡುವ ತಜ್ಞರಲ್ಲಿ ಐ.ಎಸ್.ಎ ಅಧ್ಯಕ್ಷ ಡಾ.ನಿರ್ಮಲ್ ಸೂರ್ಯ, ಸಂಘಟನಾ ಅಧ್ಯಕ್ಷ ಡಾ.ವಿಕ್ರಮ್ ಹುಡೇದ್, ಡಾ.ಅರವಿಂದ್ ಶರ್ಮಾ, ಡಾ.ಮಿನಲ್ ಕೆಕಟ್ ಪುರೆ, ಡಾ.ವಿನಯನ್ ಕೆ.ಪಿ., ಡಾ.ಶೆಫಾಲಿ ಗುಲಾಟಿ ಮತ್ತು ಡಾ.ಪ್ರತಿಭಾ ಸಿಂಘಿ, ಡಾ.ಹೆಲ್ತರ್ ಫುಲ್ಲರ್ ಟನ್‌ ಮತ್ತು ಡಾ.ಮಜಾ ಸ್ಟೀನ್ಲಿನ್ ಅಂತಾರಾಷ್ಟ್ರೀಯ ತಜ್ಞರು ಪಾಲ್ಗೊಂಡಿದ್ದಾರೆ.

2ನೇ ನ್ಯಾಷನಲ್ ಪೀಡಿಯಾಟ್ರಿಕ್ ಕಾನ್ ಕ್ಲೇವ್ ಆರೋಗ್ಯ ಸೇವಾ ವೃತ್ತಿಪರರಿಗೆ ಮಕ್ಕಳ ಪಾರ್ಶ್ವವಾಯುವಿನ ರೋಗ ತಡೆ, ಆರೈಕೆ ಮತ್ತು ಚಿಕಿತ್ಸೆ ಕುರಿತು ಅವರ ಜ್ಞಾನ ಹಂಚಿಕೊಳ್ಳಲು, ಅರ್ಥಪೂರ್ಣ ಚರ್ಚೆಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸುತ್ತದೆ. ಈ ಸಮ್ಮೇಳನವು ದೇಶಾದ್ಯಂತ ಪೂರೈಸುವ ಮಕ್ಕಳ ಆರೈಕೆಯ ಗುಣಮಟ್ಟ ಸುಧಾರಿಸುವ ಮತ್ತು ಈ ಕ್ಷೇತ್ರದ ಪ್ರಮುಖ ಸಮಸ್ಯೆಗಳನ್ನು ನಿವಾರಿಸುವ ಗುರಿ ಹೊಂದಿದೆ. ಈ ಎರಡು ದಿನಗಳ ಸಮ್ಮೇಳನದಲ್ಲಿ ಪೀಡಿಯಾಟ್ರಿಕ್ ಸ್ಟ್ರೋಕ್ ನ ನ್ಯೂರೋಇಮೇಜಿಂಗ್, ಪೀಡಿಯಾಟ್ರಿಕ್ ವ್ಯಾಸ್ಕುಲೈಟಿಸ್ ಮತ್ತು ವ್ಯಾಸ್ಕುಲೊಪಥೀಸ್, ಕಾರ್ಡಿಯೊಎಂಬೊಲಿಕ್ ಸ್ಟ್ರೋಕ್, ಹೈಪರಕ್ಯೂಟ್ ಮ್ಯಾನೇಜ್ಮೆಂಟ್ ಆಫ್ ಪೀಡಿಯಾಟ್ರಿಕ್ ಸ್ಟ್ರೋಕ್, ನ್ಯೂರೋಇಂಟರ್ವೆನ್ಷನ್ಸ್ ಇನ್ ಪೀಡಿಯಾಟ್ರಿಕ್ ಸ್ಟ್ರೋಕ್ ಮತ್ತಿತರೆ ಒಳಗೊಂಡಿವೆ.

ಇದನ್ನೂ ಓದಿ: Kannada New Movie: ಪ್ರವೀಣ್ ತೇಜ್ ಅಭಿನಯದ ʼಜಿಗರ್ ಚಿತ್ರ ಜುಲೈ 5ರಂದು ಬಿಡುಗಡೆ

ಇಂಡಿಯನ್ ಸ್ಟ್ರೋಕ್ ಅಸೋಸಿಯೇಷನ್ (ಐ.ಎಸ್.ಎ) ನಿಯಮಿತವಾಗಿ ಮಕ್ಕಳ ಪಾರ್ಶ್ವವಾಯುವಿನ ಅರಿವು ಹೆಚ್ಚಿಸುವ, ರೋಗನಿರ್ಣಯ ಸುಧಾರಿಸುವ, ಮಕ್ಕಳ ಪಾರ್ಶ್ವವಾಯು ನಿರ್ವಹಿಸುವ ವೈದ್ಯಕೀಯ ಸಿಬ್ಬಂದಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಹಲವಾರು ಉಪಕ್ರಮಗಳನ್ನು ಕೈಗೊಳ್ಳುತ್ತಿದ್ದು ಸುವರ್ಣ ಘಳಿಗೆಯಲ್ಲಿ ಚಿಕಿತ್ಸೆ ನೀಡುವ ಕುರಿತು ಅರಿವನ್ನು ಮೂಡಿಸುತ್ತದೆ ಮತ್ತು ಬಾಧಿತ ಮಕ್ಕಳ ಅಂಗವಿಕಲತೆ ಮಿತಿಗೊಳಿಸಲು ಕಾರ್ಯತಂತ್ರಗಳನ್ನು ವಿನೂತನ ಮಕ್ಕಳ ಪಾರ್ಶ್ವವಾಯುವಿನ ರಾಷ್ಟ್ರೀಯ ಸಮ್ಮೇಳನ ಆಯೋಜಿಸುವ ಮೂಲಕ ಕಾರ್ಯಪ್ರವೃತ್ತವಾಗಿದೆ.

Exit mobile version