Site icon Vistara News

Bengaluru News: ರೈತರ ಪಾಲಿಗೆ ಕಾಂಗ್ರೆಸ್ ಸರ್ಕಾರ ಸತ್ತೇ ಹೋಗಿದೆ; ರೈತ ಮೋರ್ಚಾ ಆಕ್ರೋಶ

BJP Raitha Morcha State President Former MLA A S Patil Nadahalli latest Statement

ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರವು (State Congress Government) ರೈತರ ಪಾಲಿಗೆ ಸತ್ತು ಹೋಗಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ (Bengaluru News) ಟೀಕಿಸಿದರು.

ನಗರದ ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ ಸುಮಾರು ಒಂದು ವರ್ಷದಿಂದ ಬರಗಾಲದಿಂದ ತತ್ತರಿಸಿ ಹೋದ ರೈತರಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರವು ಸಾವಿರಾರು ಕೋಟಿ ರೂ. ಬರಗಾಲದ ಪರಿಹಾರ ಧನ ಕೊಟ್ಟಿದೆ. ಆದರೆ, ದೇವರು ಕೊಟ್ಟರೂ ಕೂಡ ಪೂಜಾರಿ ಕೊಡಲು ತಯಾರಿಲ್ಲ ಎಂಬಂತೆ ಕೇಂದ್ರ ಸರ್ಕಾರ, ನರೇಂದ್ರ ಮೋದಿಯವರು ಬರಗಾಲದ ಮೊತ್ತವನ್ನು ಕೊಟ್ಟಿದ್ದರೂ ಅದನ್ನು ಸುಮಾರು 2 ಲಕ್ಷಕ್ಕಿಂತ ಹೆಚ್ಚು ರೈತರ ಖಾತೆಗಳಿಗೆ ಇಂದಿಗೂ ನೀಡಿಲ್ಲ. ಇದು ರೈತರ ಪಾಲಿಗೆ ಸತ್ತು ಹೋದ ಸರ್ಕಾರದಂತಿದೆ ಎಂದು ಆರೋಪಿಸಿಸಿದರು.

ಇದನ್ನೂ ಓದಿ: KKR vs SRH Final 2024: ನಾಳೆ ಕೆಕೆಆರ್​-ಹೈದರಾಬಾದ್​ ಫೈನಲ್​ ಕಾದಾಟ; ಯಾರಿಗೆ ಒಲಿಯಲಿದೆ ಐಪಿಎಲ್​ ಕಿರೀಟ?

ಬರಗಾಲದಿಂದ ಬೆಂದಿರುವ ರೈತರಿಗೆ ಅತ್ಯಂತ ಕಡಿಮೆ ದರದಲ್ಲಿ ಬಿತ್ತನೆ ಬೀಜವನ್ನು ವಿತರಿಸುವ ಕೆಲಸವನ್ನು ಈ ಸರ್ಕಾರ ಮಾಡಬೇಕಿತ್ತು. ಆದರೆ ಕಾಂಗ್ರೆಸ್ ಸರ್ಕಾರವು ಬಿತ್ತನೆ ಬೀಜಕ್ಕೂ ಅತಿ ಹೆಚ್ಚು ದರ ವಿಧಿಸುತ್ತಿದೆ. ಇದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ ಅವರು, ಈಗ ಮುಂಗಾರು ಸಂದರ್ಭದಲ್ಲಿ ಬೆಳೆಯುವ ಹೆಸರು, ಶೇಂಗಾ, ಉದ್ದು, ಮೆಕ್ಕೆಜೋಳ ಮೊದಲಾದವುಗಳ ದರವನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಏರಿಸಿದ್ದಾರೆ ಎಂದು ಖಂಡಿಸಿದರು.

ಉದ್ದು ಬೀಜ ಪ್ರತಿ ಕೆಜಿಗೆ 43 ರೂ, ತೊಗರಿಗೆ 48 ರೂ., ಮೆಕ್ಕೆಜೋಳ ಬೀಜ 5 ಕೆಜಿ ಪೊಟ್ಟಣಕ್ಕೆ 24 ರೂ. ಹೆಚ್ಚಿಸಿದ್ದಾರೆ. ಸರ್ಕಾರ ಈ ಹಿಂದಿನ ಬಿತ್ತನೆ ಬೀಜದ ದರವನ್ನೇ ಮುಂದುವರಿಸಬೇಕು. ಬಿತ್ತನೆ ಬೀಜ, ಗೊಬ್ಬರ ಸಮರ್ಪಕವಾಗಿ ಎಲ್ಲ ರೈತರಿಗೆ ಸಿಗುವಂತೆ ನೋಡಿಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಕೊಬ್ಬರಿಯನ್ನು ಎಂಎಸ್‍ಪಿ ಅಡಿ ಖರೀದಿ ಮಾಡಲು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮುಂದಾಗಿದೆ. ಪ್ರತಿ ಕ್ವಿಂಟಲ್‍ಗೆ ಸುಮಾರು 12 ಸಾವಿರ ರೂ. ಕೊಟ್ಟು ಖರೀದಿ ಅವಕಾಶ ನೀಡಿದ್ದು, ಈ ಸರ್ಕಾರ ಚೀಲ ಇಲ್ಲ ಎಂಬ ನೆಪ ಹೇಳುತ್ತಿದೆ. ಇದು ಅತ್ಯಂತ ನಾಚಿಕೆಗೇಡು ಎಂದು ಹೇಳಿದರು.

ಈಗಾಗಲೇ ಖರೀದಿಸಿದ 35 ಸಾವಿರ ಟನ್ ಕೊಬ್ಬರಿಗೆ ಹಣವನ್ನೂ ನೀಡಿಲ್ಲ ಎಂದು ದೂರಿದ ಅವರು. ರೈತರು ಹಣ ಕೇಳಿದರೆ ಕೊಬ್ಬರಿ ತೆಗೆದುಕೊಂಡು ಹೋಗುವಂತೆ ಅಧಿಕಾರಿಗಳು ದರ್ಪದಿಂದ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಇದನ್ನೂ ಓದಿ: Actor Kiran Raj: ʻರಾನಿʼ ಸಿನಿಮಾ ಸಾಂಗ್‌ ಔಟ್‌; ಇದೇ ಭಾನುವಾರ ಕಿರಣ್ ರಾಜ್‌ ʻರೀಲ್ಸ್ with ಫ್ಯಾನ್ಸ್ʼ!

ಹಿಂದೆ ಹೈನುಗಾರರಿಗೆ ನಮ್ಮ ಸರ್ಕಾರ ಹಾಲು ಉತ್ಪಾದನೆಗೆ ಪ್ರೋತ್ಸಾಹಧನ ನೀಡುತ್ತಿತ್ತು. ಆದರೆ, ಈಗ ಹೈನುಗಾರಿಕೆಗೆ ಸಂಬಂಧಿಸಿ ಪ್ರತಿ ಲೀಟರ್‌ಗೆ 5 ರೂ. ಪ್ರೋತ್ಸಾಹಧನ ಸ್ಥಗಿತಗೊಂಡಿದೆ ಎಂದರಲ್ಲದೆ, ರೈತರಿಗೆ ಬಾಕಿ ಇರುವ 700 ರಿಂದ 800 ಕೋಟಿ ಸಹಾಯಧನವನ್ನು ಕೂಡಲೇ ಬಿಡುಗಡೆ ಮಾಡುವಂತೆ ಅವರು ಒತ್ತಾಯಿಸಿದರು.

Exit mobile version