ಬೆಂಗಳೂರು: ರಾಜಧಾನಿಯಲ್ಲಿ ಪುಂಡರ ದಾಂಧಲೆ ನಿಲ್ಲುವಂತೆ ಕಾಣುತ್ತಿಲ್ಲ. ಇಲ್ಲಿನ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಿರಂತರವಾಗಿ ಪುಡಿ ರೌಡಿಗಳ ಕಿರಿಕ್ ಹೆಚ್ಚಾಗಿದೆ. ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡುವುದು, ಅಂಗಡಿ ಮುಂಗಟ್ಟು ದ್ವಂಸ ಮಾಡುವುದು, ಮಾರಾಕಾಸ್ತ್ರ ಹಿಡಿದು ರೌಂಡ್ಸ್ ಹಾಕುವುದು ಮಾಡುತ್ತಿದ್ದಾರೆ. ಸದ್ಯ ಬೇಕರಿಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ದಾಂಧಲೆ ನಡೆಸಿದ್ದಾರೆ. ಮಾಸ್ಕ್ ಧರಿಸಿ ಎರಡ್ಮೂರು ಬೈಕ್‌ಗಳಲ್ಲಿ ಬಂದು ಪುಂಡರು ತುಂಗಾನಗರದ ಮಂಜುನಾಥ ಬೇಕರಿಗೆ ನುಗ್ಗಿದ್ದಾರೆ.
ಬಳಿಕ ಬೇಕರಿಯ ಶೋ ಕೇಸ್‌ನ ಗ್ಲಾಸ್‌ಗೆ ಕಲ್ಲು ಎತ್ತಿಹಾಕಿ ಪುಡಿ ಪುಡಿ ಮಾಡಿದ್ದಾರೆ. ಬೇಕರಿಯಲ್ಲಿ ತಿಂಡಿ ತಿನಿಸುಗಳನ್ನು ಚೆಲ್ಲಾಡಿ ಪರಾರಿ ಆಗಿದ್ದಾರೆ. ಖರ್ತನಾಕ್‌ಗಳು ಗಾಡಿ ನಂಬರ್ ಪ್ಲೇಟ್ ಕಾಣಬಾರದು ಎಂದು ಸಗಣಿ ಹಚ್ಚಿಕೊಂಡು ಬಂದು ಈ ಕೃತ್ಯ ಎಸಗಿದ್ದಾರೆ. ಪುಂಡರ ಕೃತ್ಯವೆಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸದ್ಯ ಈ ಸಂಬಂಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಾಕಾಗಿ ಈ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದಾರೆ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿರುವ ದೃಶ್ಯವನ್ನು ಪೊಲೀಸರು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Shivaji statue : ಶಿವಾಜಿ ಪ್ರತಿಮೆ ತೆರವಿಗೆ ಖಂಡನೆ; ಬಾಗಲಕೋಟೆಯಲ್ಲಿ ಸ್ವಯಂ ಘೋಷಿತ ಬಂದ್
ಈ ಏರಿಯಾಗೆ ನಮ್ಮಣ್ಣನೇ ಬಾಸ್!
ಏರಿಯಾದಲ್ಲಿ ಹವಾ ಇರಬೇಕೆಂದು ಪುಡಿರೌಡಿಯೊಬ್ಬ ಯುವಕನ ಮೇಲೆ ಮಾರಕಾಸ್ತ್ರದಿಂದ ದಾಳಿ ಮಾಡಿದ್ದಾನೆ. ಹಲ್ಲೆ ಮಾಡುತ್ತಿರುವುದನ್ನು ವಿಡಿಯೊ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದ್ದಾನೆ. ಬ್ಯಾಡರಹಳ್ಳಿ ಠಾಣೆ ರೌಡಿಶೀಟರ್ ಅಂದ್ರಹಳ್ಳಿ ಜಗ್ಗಿ ಸಹೋದರ ಅಭಿ ಎಂಬಾತ ಹಲ್ಲೆ ಮಾಡಿದ್ದಾನೆ.
ನಮ್ಮ ಅಣ್ಣ ಈ ಏರಿಯಾಗೆ ಬಾಸ್, ಅವರನ್ನು ಬಾಸ್ ಎಂದು ಹೇಳಬೇಕು. ಇಲ್ಲವಾದರೆ ಕೊಂದೇ ಬಿಡ್ತಿನಿ ಎಂದು ಲಾಂಗ್‌ನಿಂದ ಉಲ್ಟಾ ಮಾಡಿ ಯುವಕನೊಬ್ಬನಿಗೆ ಹಲ್ಲೆ ಮಾಡಿದ್ದಾನೆ. ಹಲ್ಲೆ ಮಾಡಿ ಬಳಿಕ ವಿಡಿಯೊವನ್ನು ಇನ್ಸ್ಟಾಗ್ರಾಮ್‌ನಲ್ಲಿ ಅಪ್ಲೋಡ್ ಮಾಡಿ ವಾರ್ನಿಂಗ್ ಮಾಡಿದ್ದಾನೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ