ಬೆಂಗಳೂರು: ಮೂರನೇ ಮಹಡಿಯಿಂದ ಜಿಗಿದು ವ್ಯಕ್ತಿಯೊಬ್ಬ ಆತ್ಮಹತ್ಯೆ (Self harming) ಮಾಡಿಕೊಂಡಿರುವ ಘಟನೆ ಆರ್.ಆರ್ ನಗರ (Bengaluru News) ವ್ಯಾಪ್ತಿಯಲ್ಲಿ ನಡೆದಿದೆ. ಮದನ್ ಮೃತ ದುರ್ದೈವಿ.
ಶಿವಮೊಗ್ಗ ಮೂಲದ ಮದನ್ ಅರಣ್ಯ ಇಲಾಖೆಯಲ್ಲಿ ಚಾಲಕ ಎಂದು ತಿಳಿದು ಬಂದಿದೆ. ಬೇರೊಂದು ಏರಿಯಾದಲ್ಲಿ ವಾಸವಿರುವ ಮದನ್, ಆರ್.ಆರ್ ನಗರಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಲ್ಲಿನ ಸ್ಥಳೀಯ ನಿವಾಸಿಗಳಿಗೆ ಆತ್ಮಹತ್ಯೆ ಮಾಡಿಕೊಂಡ ಮದನ್ ಯಾರು ಎಂಬುದೇ ತಿಳಿದಿಲ್ಲ. ಒಮ್ಮೆಲೆ ಕಟ್ಟಡದ ಮೇಲೆ ಹತ್ತಿ ರಾತ್ರಿ 9 ಗಂಟೆ ಸುಮಾರಿಗೆ ಮೇಲಿಂದ ಬಿದ್ದಿದ್ದಾನೆ.
ಘಟನ ಸ್ಥಳಕ್ಕೆ ಆರ್.ಆರ್ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
Ram Mandir: ಅಯೋಧ್ಯೆ ರಾಮಮಂದಿರ ಮೇಲೆ ಹಮಾಸ್ ಮಾದರಿ ದಾಳಿಗೆ ಪಾಕ್ ಉಗ್ರರ ಸ್ಕೆಚ್, ಬಿಗಿ ಭದ್ರತೆ
ವಿದ್ಯಾರ್ಥಿನಿ ಜತೆ ಮಾತನಾಡಿದ್ದಕ್ಕೆ ವಿದ್ಯಾರ್ಥಿಯ ಬೆರಳನ್ನೇ ಕತ್ತರಿಸಿದ!
ತನ್ನ ತರಗತಿಯ ವಿದ್ಯಾರ್ಥಿನಿಯ ಜತೆ ಮಾಡಿದ ಕಾರಣಕ್ಕೆ 12ನೇ ತರಗತಿಯ ವಿದ್ಯಾರ್ಥಿಯ ಮೇಲೆ ಹಲ್ಲೆ ಮಾಡಿ ಆತನ ಬೆರಳನ್ನೇ ಕತ್ತರಿಸಿರುವ ಅಮಾನುಷ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ದಕ್ಷಿಣ ದ್ವಾರಕದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಅದೇ ಶಾಲೆಯಲ್ಲಿ ಓದಿದ್ದ ಮತ್ತು ಈಗಾಗಲೇ ಪದವಿ ಪಡೆದಿದ್ದಾನೆ ಎಂದು ಪೊಲೀಸರು (Delhi Crime) ತಿಳಿಸಿದ್ದಾರೆ.
ಅಕ್ಟೋಬರ್ 21ರಂದು ಈ ಹಲ್ಲೆ ನಡೆದಿದೆ. ಆದರೆ ಸಂತ್ರಸ್ತ ವಿದ್ಯಾರ್ಥಿ ಈ ವಿಷಯವನ್ನು ಮನೆಯಲ್ಲಿ ಹೇಳಿರಲಿಲ್ಲ. ಆತ ಎಷ್ಟು ಭಯಭೀತನಾಗಿದ್ದನೆಂದರೆ ಮೋಟಾರ್ ಸೈಕಲ್ ಸರಪಳಿಯಿಂದ ತನ್ನ ಬೆರಳನ್ನು ತುಂಡಾಗಿದೆ ಎಂದು ಮನೆಯವರ ಬಳಿ ಹೇಳಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕೊನೆಗೆ ಶುಕ್ರವಾರ (ನವೆಂಬರ್ 10) ಬಾಲಕ ತನ್ನ ಹೆತ್ತವರಲ್ಲಿ ನಿಜಾಂಶವನ್ನು ಬಾಯಿ ಬಿಟ್ಟಿದ್ದಾನೆ. ಬಳಿಕ ಹೆತ್ತವರು ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾರೆ.
ಘಟನೆಯ ವಿವರ
ಶಾಲೆಯ ಹೊರಗೆ ಭೇಟಿಯಾಗಿದ್ದ ಆರೋಪಿ ತನ್ನನ್ನು ಪಾರ್ಕ್‌ಗೆ ಕರೆದುಕೊಂಡು ಹೋಗಿದ್ದ. ಟ್ಯೂಷನ್ ತರಗತಿಯ ವಿದ್ಯಾರ್ಥಿನಿಯ ಜತೆಗಿನ ಗೆಳೆತನಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆರೋಪಿ ಬಳಿಕ ಕಲ್ಲಿನಿಂದ ಜಜ್ಜಿ ತನ್ನ ಬೆರಳು ತುಂಡರಿಸಿದ ಎಂದು ಸಂತ್ರಸ್ತ ವಿದ್ಯಾರ್ಥಿ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಸದ್ಯ ಆತನ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಹಿಂದೆಯೂ ನಡೆದಿತ್ತು
ಇದೇ ರೀತಿಯ ಘಟನೆ ಈ ಹಿಂದೆ ಬೆಂಗಳೂರಿನಲ್ಲಿ ನಡೆದಿತ್ತು. ಆಗಸ್ಟ್‌ನಲ್ಲಿ ವಿವೇಕನಗರದಲ್ಲಿ ತಮ್ಮೊಂದಿಗೆ ಹೊರಗೆ ಬರಲು ನಿರಾಕರಿಸಿದ್ದಕ್ಕಾಗಿ ಐದು ಕಾಲೇಜು ವಿದ್ಯಾರ್ಥಿಗಳ ಗುಂಪು 20 ವರ್ಷದ ಸ್ನೇಹಿತನ ಮೇಲೆ ಹಲ್ಲೆ ನಡೆಸಿತ್ತು. ಓದಲು ಇರುವುದರಿಂದ ಅವರೊಂದಿಗೆ ಹೋಗಲು ನಿರಾಕರಿಸಿದ್ದ ವಿದ್ಯಾರ್ಥಿ ಮೇಲೆ ಕೋಪಗೊಂಡ ಯುವಕರು ಹಲ್ಲೆ ನಡೆಸಿದ್ದರು. ಅಲ್ಲದೆ ಮನೆಯವರೆಗೂ ಹಿಂಬಾಲಿಸಿ ಆತನ ಕುಟುಂಬದ ಮೇಲೂ ಹಲ್ಲೆ ನಡೆಸಿದ್ದರು. ಕುಟುಂಬ ಸದಸ್ಯರನ್ನು ರಕ್ಷಿಸಲು ನೆರೆ ಹೊರೆಯವರು ಮಧ್ಯಪ್ರವೇಶಿಸಬೇಕಾಯಿತು. ಕೊನೆಗೆ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಯುವಕರ ಗುಂಪನ್ನು ಬಂಧಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ