ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ (Bengaluru News) ಕತ್ತಲಾದರೆ ಸಾಕು ಮತ್ತಿನ ಲೋಕವೇ ಸೃಷ್ಟಿಯಾಗುತ್ತೆ. ಯುವಕ-ಯುವತಿಯರು ಪಬ್, ಕಬ್ಲ್ ಎಂದು ಮೋಜು ಮಸ್ತಿ ಮಾಡಲು ಬರುತ್ತಾರೆ. ಕುಡಿದ ಮತ್ತಿನಲ್ಲಿ ತೇಲಾಡುತ್ತಾ ಹೈಡ್ರಾಮವನ್ನೇ ಮಾಡುತ್ತಾರೆ. ತಡರಾತ್ರಿ ಕೋರಮಂಗಲದಲ್ಲಿ ಹುಡುಗಿಯರು ಅವಾಂತರವನ್ನೇ (Alcohol women) ಸೃಷ್ಟಿಸಿದ್ದರು.
ಕೋರಮಂಗಲದ ಡ್ರಂಕನ್ ಡ್ಯಾಡಿ ಎಂಬ ಪಬ್‌ನಲ್ಲಿ ಹುಡುಗಿಯರು ಕಂಠ ಪೂರ್ತಿ ಕುಡಿದಿದ್ದರು. ಬಳಿಕ ಕುಡಿದು ಟೈಟ್ ಆಗಿ ರಾತ್ರಿ 12: 30ರ ಸುಮಾರಿಗೆ ರಸ್ತೆಗಿಳಿದು ಹೈಡ್ರಾಮಾವನ್ನೇ ಮಾಡಿದ್ದಾರೆ. ಮೈಮೇಲೆ ಪ್ರಜ್ಞೆಯೇ ಇಲ್ಲದಷ್ಟು ಕುಡಿದು ರಸ್ತೆಯಲ್ಲಿ ಬಿದ್ದು ಒದ್ದಾಡಿದ್ದಾರೆ.
ಒಬ್ಬ ಯುವತಿಯಂತೂ ನಡುರಸ್ತೆಯಲ್ಲೇ ಮಲಗಿಕೊಂಡರೆ, ಮತ್ತೊಬ್ಬಳು ಕಾರಿನ ಮೇಲೆ ಕುಳಿತುಕೊಂಡು ಪೋಸ್ ನೀಡಿದ್ದಾಳೆ. ಮತ್ತೊಬ್ಬಳು ಎಲ್ಲೆಂದರಲ್ಲಿ ಬಿದ್ದು ಒದ್ದಾಡಿದ್ದಾಳೆ. ಕುಡಿದ ಮತ್ತಿನಲ್ಲಿ ತಾವು ಏನು ಮಾಡುತ್ತಿದ್ದೇವೆ ಎಂಬುದೇ ಅರಿವಿಲ್ಲದಂತೆ ಹುಚ್ಚಾಟವಾಡಿದ್ದಾರೆ.
ನಡುರಸ್ತೆಯಲ್ಲೇ ಹುಡುಗಿಯರ ಆಟೋಟಾಪದಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇತ್ತ ಇವರ ರಂಪಾಟವನ್ನೆಲ್ಲ ನೋಡುತ್ತಿದ್ದ ಜನರು ವಿಡಿಯೊ ಮಾಡಿಕೊಂಡಿದ್ದಾರೆ. ಕೆಲ ಸ್ಥಳೀಯರು ಮತ್ತು ಸಾರ್ವಜನಿಕರಿಗೆ ಹಲ್ಲೆ ಮಾಡಿದ ಆರೋಪವು ಕೇಳಿ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೋರಮಂಗಲ ಪೊಲೀಸರು ಭೇಟಿ ನೀಡಿ ಯುವತಿಯರಿಗೆ ವಾರ್ನ್ ಮಾಡಿ ಕಳುಹಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ