Site icon Vistara News

Bengaluru News: ಇದು ಎಷ್ಟು ಪರ್ಸೆಂಟ್ ಸರ್ಕಾರ? ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ

MLC Chalavadi Narayanaswamy latest statement

ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಾಂಗ್ರೆಸ್ ಸರ್ಕಾರ (Congress Government) ಕೊಟ್ಟ ಬೆಲೆ ಏನು ಎಂದು ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ (Bengaluru News) ಪ್ರಶ್ನಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಪಕ್ಷ, ವಿಪಕ್ಷದ ನಾಯಕರು ಒಂದು ವಿಚಾರದಲ್ಲಿ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಿದ ತಕ್ಷಣ ಎಚ್ಚೆತ್ತುಕೊಳ್ಳಬೇಕು, ಅದನ್ನು ಪರಿಹರಿಸಬೇಕು. ಆದರೆ ಈ ಸರ್ಕಾರ ಅತ್ತ ಗಮನ ಕೊಟ್ಟಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: KKR vs SRH Final 2024: ನಾಳೆ ಕೆಕೆಆರ್​-ಹೈದರಾಬಾದ್​ ಫೈನಲ್​ ಕಾದಾಟ; ಯಾರಿಗೆ ಒಲಿಯಲಿದೆ ಐಪಿಎಲ್​ ಕಿರೀಟ?

ಕಾನೂನು ಸುವ್ಯವಸ್ಥೆ ತೀವ್ರವಾಗಿ ಹದಗೆಟ್ಟ ಕುರಿತು ತಿಂಗಳುಗಟ್ಟಲೆ ಕಾಲ ಬಿಜೆಪಿ ತಿಳಿಸಿದ್ದರೂ ಈ ಮಾನಗೇಡಿ ಸರ್ಕಾರ ಎಚ್ಚೆತ್ತುಕೊಂಡಿಲ್ಲ, ಅದನ್ನು ಸರಿಪಡಿಸುವ ಕೆಲಸ ಮಾಡಿಲ್ಲ ಎಂದು ಟೀಕಿಸಿದರು.

ಅತ್ಯಾಚಾರ, ಲವ್ ಜಿಹಾದ್ ವಿಚಾರದಲ್ಲಿ ಸರ್ಕಾರ ಗಮನ ಕೊಡುತ್ತಿಲ್ಲ. ಕೊಲೆಗಳೂ ಹೆಚ್ಚಾಗಿವೆ. ನಿನ್ನೆ ಕಸ್ಟಡಿ ಸಾವು ಸಂಭವಿಸಿದೆ. ಯಾರಾದರೂ ಇವುಗಳ ಕುರಿತು ಪ್ರಶ್ನಿಸಿದರೆ ಎಲ್ರೀ ಹದಗೆಟ್ಟಿದೆ ಎಂದು ಉಡಾಫೆ ಮಾತನಾಡುತ್ತಾರೆ ಎಂದು ದೂರಿದರು.

ಗುಲ್ಬರ್ಗಕ್ಕೆ ಪಿಎಚ್‍ಡಿ ಮಾಡಲೆಂದು ಹೋಗಿದ್ದ ದಲಿತ ಸಾಹಿತಿ ಆನಂದ್ ಸಾವನ್ನಪ್ಪಿದ್ದು ಯಾಕೆ? ಇದರ ಬಗ್ಗೆ ಜಿಲ್ಲಾ ಸಚಿವರು, ಗೃಹ ಸಚಿವರು ಮತ್ತು ಮುಖ್ಯಮಂತ್ರಿಗಳು ತಲೆಕೆಡಿಸಿಕೊಂಡಿಲ್ಲ. ಏನಾದರೂ ಕೇಳಿದರೆ ಬೇರೆ ಸರ್ಕಾರ ಇದ್ದಾಗ ಮರ್ಡರ್ ಆಗಿಲ್ವ? ಎಂದು ಕೇಳುತ್ತಾರೆ. ಇದು ಉಡಾಫೆ ಉತ್ತರವಲ್ಲವೇ ಎಂದು ಕೇಳಿದರು.

ಇದನ್ನೂ ಓದಿ: Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

ನೀವು ಕೇವಲ ಲೂಟಿ ಮಾಡಲೆಂದು ಬಂದಿದ್ದೀರಾ? ಎಂದರಲ್ಲದೆ, ಇಡೀ ದೇಶದಲ್ಲಿ ನಡೆಯುವ ಚುನಾವಣೆಗೆ ಕರ್ನಾಟಕ ಎಟಿಎಂ ಆಗಿದೆ ಎಂದು ಆರೋಪಿಸಿದ ಅವರು, ಪಂಚರಾಜ್ಯ ಚುನಾವಣೆಗೆ ದುಡ್ಡು ಕೊಟ್ಟಿದ್ದಾಯ್ತು. ಈಗ ಸಂಸತ್ ಚುನಾವಣೆಗೂ ದುಡ್ಡು ಕೊಟ್ಟಿದ್ದಾಯ್ತು. ನಮ್ಮ ಮೇಲೆ 40 ಪರ್ಸೆಂಟ್ ಸರ್ಕಾರ ಎಂದು ಹೇಳಿದ ನೀವು, ಈಗ ನಿಮ್ಮದು ಎಷ್ಟು ಪರ್ಸೆಂಟ್ ಸರ್ಕಾರ ಎಂದು ಉತ್ತರ ಕೊಡಿ ಎಂದು ಆಗ್ರಹಿಸಿದರು.

Exit mobile version