Site icon Vistara News

Bengaluru News : ಪೆನ್ನು ಹಿಡಿಯೋ ಕೈಯಲ್ಲಿ ಸಿಗರೇಟ್‌! ಹುಡುಗಿಯರೂ ಸ್ಟ್ರಾಂಗ್‌ ಗುರು

School Students smoking In Public place

ಬೆಂಗಳೂರು: ಹಿಂದೊಮ್ಮೆ ಬೆಂಗಳೂರಲ್ಲಿ (Bengaluru News) 7 ವರ್ಷದ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಎಲೆಕ್ಟ್ರಾನಿಕ್ ಸಿಗರೇಟ್ ಪತ್ತೆಯಾಗಿತ್ತು. ಪೋಷಕರಿಗೆ ತಿಳಿಯದೇ ವಿದ್ಯಾರ್ಥಿಗಳು ಎಲೆಕ್ಟ್ರಾನಿಕ್ ಸಿಗರೇಟ್ ಸೇವಿಸುತ್ತಿದ್ದರು. ಇದೀಗ ರಾಜಾರೋಷವಾಗಿ ವಿದ್ಯಾರ್ಥಿಗಳು ಸಾರ್ವಜನಿಕ ಸ್ಥಳದಲ್ಲೇ ಸಿಗರೇಟ್‌ ಸೇದುತ್ತಿರುವುದು ಕಂಡು ಬಂದಿದೆ.

ಬೆಂಗಳೂರು ನಗರ ಪೊಲೀಸರು ಒಂದು ಕಡೆ ಶಾಲಾ-ಕಾಲೇಜುಗಳಿಗೆ ತೆರಳಿ ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಇದ್ಯಾವುದಕ್ಕೂ ಕ್ಯಾರೇ ಎನ್ನದೆ ಕೆಲ ವಿದ್ಯಾರ್ಥಿಗಳು ಮಾದಕ ವ್ಯಸನಿಗಳಾಗುತ್ತಿದ್ದಾರೆ. ಬುಕ್‌, ಪೆನ್‌ ಹಿಡಿಯಬೇಕಾದ ಕೈಗಳು ಸಿಗರೇಟು ತುಂಡಾನ್ನು ಹಿಡಿದು ಹೊಗೆ ಬಿಡುವಂತಾಗಿದೆ.

ವಿ.ವಿ ಪುರದ ಟೆಂಪಲ್ ಸ್ಟ್ರೀಟ್ ಬಳಿ ವಿದ್ಯಾರ್ಥಿಗಳು ಸ್ಕೂಲ್‌ ಯೂನಿಫಾರ್ಮ್‌ನಲ್ಲೇ ಬಂದು ಧೂಮಪಾನ ಮಾಡುತ್ತಿರುವುದು ಕಂಡು ಬಂದಿದೆ. ಅವ್ಯಾಹತವಾಗಿ ಸಿಗರೇಟ್ ಸೇದುತ್ತಾ ಚಟಕ್ಕೆ ಬಿದ್ದಿರುವ ವಿದ್ಯಾರ್ಥಿಗಳ ಫೋಟೊವನ್ನು ಸಾರ್ವಜನಿಕರು ತೆಗೆದು ಪೋಸ್ಟ್‌ ಮಾಡಿದ್ದಾರೆ.

ಇದನ್ನೂ ಓದಿ: Sadhguru | ಸ್ಕೂಲ್‌ ಬ್ಯಾಗ್‌ನಲ್ಲಿ ಮದ್ಯ, ಗರ್ಭನಿರೋಧಕ ಮಾತ್ರೆ! ಈ ಬಗ್ಗೆ ಸದ್ಗುರು ಹೇಳೋದೇನು?

ಜೈನ್ ಟೆಂಪಲ್ ಸ್ಟ್ರೀಟ್‌ನ ವಿ.ವಿ.ಪುರಂ, ಪೋಲಾರ್ ಬೇರ್ ಐಸ್ ಕ್ರೀಮ್ ಪಾರ್ಲರ್ ಹಿಂಭಾಗದಲ್ಲೇ ವಿದ್ಯಾರ್ಥಿಗಳು ಶಾಲೆಗೆ ಗೈರಾಗಿ ಚಿಕ್ಕ ವಯಸ್ಸಿನಲ್ಲಿಯೇ ಸಿಗರೇಟ್ ಚಟಕ್ಕೆ ಬಿದ್ದಿದ್ದಾರೆ. ಹೀಗಾಗಿ ಇದನ್ನು ತಡೆಯಲು ಪೊಲೀಸರು ಕಠಿಣ ಕ್ರಮವನ್ನು ಕೈಗೊಳ್ಳಬೇಕೆಂದು ಪೊಲೀಸ್ ಪೇಜ್‌ಗೆ ಫೋಟೊ ಪೋಸ್ಟ್ ಮಾಡಿ ಮನವಿ ಮಾಡಿದ್ದಾರೆ.

ಮೂವರು ಬಾಲಕಿಯರೊಂದಿಗೆ ಇಬ್ಬರು ಬಾಲಕರು ಸಾಥ್‌ ನೀಡಿದ್ದಾರೆ. ಶಾಲಾ ಬ್ಯಾಗ್‌ನ್ನು ಹೆಗಲಿಗೆ ಹಾಕಿಕೊಂಡು ಗೋಡೆ ಒರಗಿಕೊಂಡ ಐವರು ಸಾರ್ವಜನಿಕ ಸ್ಥಳದಲ್ಲೇ ಸಿಗರೇಟು ಸೇದುತ್ತಾ ನಿಂತಿದ್ದಾರೆ. ಹದಿಹರೆಯಕ್ಕೆ ಕಾಲಿಡುವ ಮುನ್ನವೇ ವಿದ್ಯಾರ್ಥಿಗಳು ಪ್ರೌಢವಯಸ್ಕರ ಚಟುವಟಿಕೆಗಳನ್ನು ನಡೆಸುತ್ತಿರುವ ಬಗ್ಗೆ ಈ ಹಿಂದೆ ಆತಂಕ ವ್ಯಕ್ತವಾಗಿತ್ತು. ಬ್ಯಾಗ್‌ ಚೆಕ್ಕಿಂಗ್‌ ವೇಳೆ ಕಾಂಡೋಮ್, ಗರ್ಭನಿರೋಧಕ ಮಾತ್ರೆಗಳು ಸಿಕ್ಕಿದುದು ಇದಕ್ಕೆ ಕಾರಣವಾಗಿತ್ತು. ಇದೀಗ ರಾಜಾರೋಷವಾಗಿ ಸಾರ್ವಜನಿಕ ಸ್ಥಳದಲ್ಲೇ ಧೂಮಪಾನ ಮಾಡುತ್ತಿದ್ದಾರೆ.

ಮಕ್ಕಳು ಸಿಗರೇಟ್ ಚಟ ಹಿಡಿಸಿಕೊಳ್ಳದಂತೆ ಕಠಿಣ ಕಾನೂನು ಬೇಕು ಎಂದು ಶಿಕ್ಷಕರು ಹಾಗೂ ಪೋಷಕರು ಆಗ್ರಹಿಸಿದ್ದಾರೆ. ಮಕ್ಕಳ ಕೈಗೆ ಸಿಗರೇಟ್ ಸಿಗದಂತೆ, ಮಕ್ಕಳ ಕೈಗೆ ಅಂಗಡಿಯವರು ಸಿಗರೇಟ್‌ ಕೊಡದಂತೆ ಕ್ರಮ ಕೈಗೊಳ್ಳಬೇಕು. ಶಿಕ್ಷಣ ಇಲಾಖೆ, ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲು ಮನವಿ ಮಾಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version