Site icon Vistara News

Bengaluru News | ಮಲಗಿದ್ದ ನಾಯಿ ಮೇಲೆ ಕಾರು ಹತ್ತಿಸಿದ ನಿರ್ದಯಿ; ಒದ್ದಾಡುತ್ತಲೇ ಪ್ರಾಣ ಬಿಟ್ಟ ಮೂಕಜೀವಿ

dog death

ಬೆಂಗಳೂರು: ಮೂಕಪ್ರಾಣಿಗಳ ಮೇಲೆ ದೌರ್ಜನ್ಯ ಹೆಚ್ಚಾಗುತ್ತಿದೆ. ರಾಜಧಾನಿ ಬೆಂಗಳೂರು (Bengaluru News ) ಮತ್ತೊಮ್ಮೆ ಅಮಾನವೀಯ ಘಟನೆಗೆ ಸಾಕ್ಷಿ ಆಗಿದೆ.

ರಸ್ತೆಯಲ್ಲಿ ಮಲಗಿರುವ ಶ್ವಾನ

ನಿರ್ದಯಿಯೊಬ್ಬ ಮನೆ ಮುಂದೆ ಮಲಗಿದ್ದ ನಾಯಿ ಮೇಲೆ ಕಾರು ಚಲಾಯಿಸಿಕೊಂಡು ಹೋಗಿದ್ದಾನೆ. ಉದ್ದೇಶ ಪೂರ್ವಕವಾಗಿಯೇ ನಾಯಿ ಮೇಲೆ ಕಾರು ಚಾಲನೆ ಮಾಡಲಾಗಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕಾರಿನಲ್ಲಿ ಬಂದ ನಿರ್ದಯಿ

ಕಾರು ಬರುವುದು ಅರಿವಿಗೆ ಬರುತ್ತಿದ್ದಂತೆ ಬೀದಿಯಲ್ಲಿ ಮಲಗಿದ್ದ ಶ್ವಾನ ಜಾಗ ಬಿಡಲು ಮುಂದಾಗಿದೆ. ಆದರೆ ನಾಯಿ ಏಳುವುದು ಕಾಣುತ್ತಿದ್ದಂತೆ ಕಾರಿನ ವೇಗ ಹೆಚ್ಚಿಸಿದ ದುಷ್ಕರ್ಮಿ ನಾಯಿ ಮೇಲೆ ಹರಿಸಿಕೊಂಡು ಹೋಗಿದ್ದಾನೆ. ಕಾರಿಗೆ ಸಿಕ್ಕು ಒದ್ದಾಡಿದ ನಾಯಿ ಕ್ಷಣ ಮಾತ್ರದಲ್ಲಿಯೇ ಪ್ರಾಣ ಬಿಟ್ಟಿದೆ.

ಮಲಗಿದ್ದ ಶ್ವಾನದ ಮೇಲೆ ಕಾರು ಚಲಾಯಿಸಿಕೊಂಡು ಹೋದ ಪಾಪಿ

ಮುತ್ತುರಾಯ ನಗರದ ಸಪ್ತಗಿರಿ ಲೇಔಟ್‌ ಜನವರಿ 7ರಂದು ಬೆಳಗ್ಗೆ 11.10ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ಈ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚೀರಾಡಿದ ಶ್ವಾನ

ಜಿ ಸುಬ್ರಹ್ಮಣ್ಯ ಎಂಬುವವರ ಹೆಸರಲ್ಲಿ ರಿಜಿಸ್ಟರ್ ಆಗಿರುವ KA 05 MP 5836 ಸಂಖ್ಯೆಯ ಮಾರುತಿ ಸ್ವಿಫ್ಟ್ ಕಾರು ಎಂದು ತಿಳಿದು ಬಂದಿದೆ.

ಒದ್ದಾಡುತ್ತಲೆ ಮೃತಪಟ್ಟ ಶ್ವಾನ
ಶ್ವಾನದ ಕೂಗಾಟ ಕೇಳಿ ಓಡಿ ಬಂದ ಸ್ಥಳೀಯರು

ಇತ್ತ ಈ ಕೃತ್ಯಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಮೂಕಜೀವಿಗಳ ಮೇಲೆ ಇಂತಹ ಕ್ರೌರ್ಯ ತೋರಿಸುವುದು ಸರಿಯಲ್ಲ ಎಂದಿದ್ದಾರೆ.

ಇದನ್ನೂ ಓದಿ | Fire Accident | ಕೊಟ್ಟಿಗೆಯಲ್ಲಿ ಅಗ್ನಿ ಅವಘಡ; ಬೆಂಕಿಯಲ್ಲಿ ಬೆಂದು ಎರಡು ಎತ್ತುಗಳ ದಾರುಣ ಸಾವು

Exit mobile version