ಬೆಂಗಳೂರು: ಇಲ್ಲಿನ ಕಮ್ಮನಹಳ್ಳಿಯ ಸೆಂಟ್ ಪಿಯೂಸ್ ಚರ್ಚ್ ಪಾದ್ರಿ ಲೈಂಗಿಕ ಕಿರುಕುಳ (Physical Abuse) ನೀಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಚರ್ಚ್ ಫಾದರ್ ಜಯಕರನ್ ಲೈಂಗಿಕ ಕಿರುಕುಳ ನೀಡಿ ಹಲ್ಲೆ ಮಾಡಿದ್ದಾರೆಂದು ಮಹಿಳೆ ಠಾಣೆ ಮೆಟ್ಟಿಲೇರಿದ್ದಾರೆ.
ಫಾದರ್ ಜಯಕರನ್ ಅನುಯಾಯಿಗಳಿಂದಲೂ ಬೆದರಿಕೆ ನೀಡುತ್ತಿದ್ದಾರೆ ಎನ್ನಲಾಗಿದೆ. ಇನ್ನು ಮಹಿಳೆ ಜತೆಗೆ ಆಕೆಯ ಪ್ರಿಯಕರಿನಿಗೂ ಬೆದರಿಕೆ ಹಾಕುತ್ತಿದ್ದಾರೆ. ಚರ್ಚ್‌ನ ಆಂತರಿಕ ಸಮಿತಿಗೂ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದಿದ್ದಾರೆ.
ಇದನ್ನೂ ಓದಿ: BESCOM Order : ಕರೆಂಟ್ ಕಂಬದಲ್ಲಿನ್ನು ಲೈನ್ ಹೊಡೆಯಂಗಿಲ್ಲ! ಅನಧಿಕೃತ ವೈರ್ ಕಟ್
ಪ್ರತಿದೂರು ಕೊಟ್ಟ ಚರ್ಚ್ ಫಾದರ್
ಚರ್ಚ್‌ನ ಹಣಕಾಸಿನ ವಿಚಾರಕ್ಕೆ ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಮಹಿಳೆ ಸೇರಿದಂತೆ 9 ಮಂದಿ ವಿರುದ್ಧ ಚರ್ಚ್ ಫಾದರ್ ಜಯಕರನ್ ಪ್ರತಿದೂರು ನೀಡಿದ್ದಾರೆ. ಚರ್ಚ್‌ನ ಫಾದರ್ ಆಗಿ ಅಧಿಕಾರ ವಹಿಸಿಕೊಳ್ಳದಂತೆ ಕಿರುಕುಳ ನೀಡಿದ್ದರು. ಮಹಿಳೆ ಸೇರಿ 9 ಮಂದಿ ಚರ್ಚ್‌ನ ಹಣ ದುರುಪಯೋಗ ಮಾಡಿಕೊಂಡಿದ್ದಾರೆ. ಹಣದ ಲೆಕ್ಕ ಕೇಳಿದ್ದಕ್ಕೆ ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಸಮಿತಿ ಮುಂದೆ ನನ್ನ ಮೇಲಿನ ಆರೋಪಗಳನ್ನು ಸಾಬೀತು ಮಾಡಿಲ್ಲ ಎಂದಿದ್ದಾರೆ.
ಕೊಲೆ ಬೆದರಿಕೆ ಹಾಕಿದ್ದ ಮಹಿಳೆ
ಮಹಿಳೆ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇದ್ದಳು, ಹೀಗಾಗಿ ಬುದ್ಧಿವಾದ ಹೇಳಿದ್ದೆ. ಆದರೆ ಅದೆ ತಪ್ಪಾಗಿದೆ. 2022ರ ಜೂನ್ ತಿಂಗಳಲ್ಲಿ ಅಧಿಕಾರ ವಹಿಸಿಕೊಂಡಿದ್ದೆ. ಈ ಚರ್ಚ್‌ನಿಂದ ವರ್ಗಾವಣೆ ಆಗಬೇಕೆಂದು ಕೊಲೆ ಬೆದರಿಕೆ ಹಾಕಿದ್ದರು. ನನ್ನ ಮೇಲೆ ಈ ರೀತಿ ಅಪಾದನೆ ಮಾಡಿ ಸೇಡು ತೀರಿಸಿಕೊಳ್ಳುತ್ತಿದ್ದಾರೆ ಎಂದು ಫಾದರ್ ಜಯಕರನ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರು ಪ್ರತಿದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ