Site icon Vistara News

Bengaluru Pothole : ಬೈಕ್‌ನಲ್ಲಿ ತೆರಳುತ್ತಿದ್ದಾಗ ಕುಸಿದ ರಸ್ತೆ; ಕಂದಕಕ್ಕೆ ಬಿದ್ದ ಸವಾರ ಆಸ್ಪತ್ರೆಗೆ ದಾಖಲು

ರಸ್ತೆ ಗುಂಡಿ ಶಿವಾಜಿನಗರ

ಬೆಂಗಳೂರು: ರಸ್ತೆಯ ಮಧ್ಯ ಭಾಗದಲ್ಲಿ ಏಕಾಏಕಿ ರಸ್ತೆ ಕುಸಿದಿರುವ (Bengaluru Pothole) ಘಟನೆ ಜಾನ್ಸನ್‌ ಮಾರ್ಕೆಟ್ ರಸ್ತೆಯಲ್ಲಿ ನಡೆದಿದೆ.

ಆಡುಗೋಡಿಯಿಂದ ಶಿವಾಜಿನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಕಂದಕಕ್ಕೆ ಸವಾರ ಬಿದ್ದು ಗಾಯಗೊಂಡಿದ್ದಾರೆ. ಕೂಡಲೇ ಸ್ಥಳೀಯರು ಗಾಯಾಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ.

ಸುಮಾರು ಎರಡು ಅಡಿಗಳಷ್ಟು ಅಗಲವಾಗಿ ಗುಂಡಿ ಕುಸಿದು ಭಾರಿ ಅನಾಹುತವೊಂದು ತಪ್ಪಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಶೋಕ್‌ ನಗರ ಪೊಲೀಸರು ಭೇಟಿ ನೀಡಿದ್ದು, ರಸ್ತೆ ಮಾರ್ಗವನ್ನು ಬದಲಾವಣೆ ಮಾಡಿದ್ದಾರೆ.

ಸದಾ ವಾಹನಗಳಿಂದ ಕೂಡಿರುವ ರಸ್ತೆಯ ಮಧ್ಯಭಾಗದಲ್ಲಿ ಮಣ್ಣು ಸಡಿಲವಾಗಿದೆ. ಹೀಗಾಗಿ ರಸ್ತೆಯ ಎರಡು ಭಾಗಗಳ ವಾಹನ ಸಂಚಾರವನ್ನು ನಿರ್ಬಂಧ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ಗುಂಡಿ ಬಿದ್ದ ರಸ್ತೆಗೆ ಕಾಂಕ್ರೀಟ್‌ ಹಾಕಿದ ಮೆಟ್ರೋ ಸಿಬ್ಬಂದಿ
ಗುಂಡಿ ಬಿದ್ದ ರಸ್ತೆಗೆ ಮೆಟ್ರೋ ಸಿಬ್ಬಂದಿ ಕಾಂಕ್ರೀಟ್ ಹಾಕಿದ್ದು, ಯಾವುದೇ ಅನಾಹುತವಾಗದಂತೆ ಟ್ರಾಫಿಕ್ ಪೊಲೀಸರು ಎಚ್ಚರ ವಹಿಸಿದ್ದಾರೆ. ರಸ್ತೆಯ ಎರಡು ಬದಿಗಳಲ್ಲೂ ಕೂಡ ಬಹುಮಹಡಿಯ ವಾಣಿಜ್ಯ ಕಟ್ಟಡಗಳಿದ್ದು, ಏಕಾಏಕಿ ರಸ್ತೆಯ ‌ಮಧ್ಯ ಭಾಗದಲ್ಲಿ ಗುಂಡಿ ಬಿದ್ದು ಆತಂಕಕ್ಕೆ ಕಾರಣವಾಗಿತ್ತು. ಈ ಹಿಂದೆ ಕೂಡ ಟೌನ್‌ ಹಾಲ್ ಸಮೀಪ ರಸ್ತೆಯ ಮಧ್ಯಭಾಗದಲ್ಲಿ ಗುಂಡಿಬಿದ್ದಿತ್ತು.

ಇದನ್ನೂ ಓದಿ | Apartmentalisation | ಚಂಡೀಗಢದಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಾಣ, ಅವೈಜ್ಞಾನಿಕ ನಗರಕ್ಕೆ ಬೆಂಗಳೂರು ನಿದರ್ಶನ ಕೊಟ್ಟ ಸುಪ್ರೀಂ

Exit mobile version