Site icon Vistara News

Bengaluru Rain | ಕನಸಿನ ಮನೆಗಳು ನೀರಲ್ಲಿ ಮುಳುಗಡೆ; ಬೋಟ್‌ ಮೂಲಕ ಜನರ ರಕ್ಷಣೆ

rain

ಬೆಂಗಳೂರು: ಕೆಲವೇ ಗಂಟೆಗಳು ಸುರಿದ ಮಳೆಗೆ( Bengaluru Rain) ಕನಸಿನ ಮನೆಗಳು ನೀರಲ್ಲಿ ಮುಳುಗಡೆಯಾಗಿ ಜನರು ರಾತ್ರಿಯಿಡೀ ಜಾಗರಣೆ ಮಾಡುವಂತಾಯಿತು.

ವರುಣಾರ್ಭಟಕ್ಕೆ ರಾಜಧಾನಿಯ ಬಹುತೇಕ ಪ್ರದೇಶಗಳು ಮುಳುಗಡೆಯಾಗಿವೆ. ಅದರಲ್ಲೂ ಹೈಫೈ ಏರಿಯಾಗಳಲ್ಲಿ ಮಳೆಯ ಅವಾಂತರಕ್ಕೆ ಜನ ಬೆಚ್ಚಿಬಿದ್ದಿದ್ದಾರೆ.

ರಾಮಗೊಂಡನಹಳ್ಳಿಯಲ್ಲಿ ಟಿ ಝೆಡ್ ವಿಲ್ಲಾಗೆ ಮಳೆ ನೀರು ನುಗ್ಗಿದ್ದು, ಬೋಟ್​ಗಳ ಮೂಲಕ ಎನ್‌ಡಿಆರ್‌ಎಫ್‌ (NDRF) ತಂಡದವರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ವಿಲ್ಲಾದಲ್ಲಿ ರಾತ್ರಿಯಿಡೀ ಭಯದಲ್ಲೇ ಕಾಲಕಳೆದ ಜನರನ್ನು ಹೊರಗೆ ಕರೆತರಲಾಯಿತು.

ಬೋಟ್‌ ಮೂಲಕ ಜನರುನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿದ ಎನ್‌ಡಿಆರ್‌ಎಫ್‌ ತಂಡ

ಸೋಮವಾರ ರಾತ್ರಿ ಕಾರ್ಯಾಚರಣೆ ನಡೆಸಿದ ಎನ್‌ಡಿಆರ್‌ಎಫ್ ತಂಡ, ಶೀಗೆಹಳ್ಳಿ ಚೈತನ್ಯ ಅಪಾರ್ಟ್ ಮೆಂಟ್‌ನಲ್ಲಿನ ನಿವಾಸಿಗಳನ್ನು ರಕ್ಷಣೆ ಮಾಡಿದರು. ಮನೆಗಳು ನೀರಲ್ಲಿ ಮುಳುಗಡೆಯಾಗಿ, ಗೃಹೋಪಯೋಗಿ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾದವು. ಐಷಾರಾಮಿ ಕಾರುಗಳು ನೀರಲ್ಲಿ ಮುಳುಗಡೆಯಾಗಿದ್ದು, ಮಾಲೀಕರು ಭಾರಿ ನಷ್ಟ ಅನುಭವಿಸುವಂತಾಗಿದೆ.

ಇದನ್ನೂ ಓದಿ | Rain news | ಧಾರಾಕಾರ ಮಳೆಗೆ ಕುಸಿದ ಗೋಡೆ, ಒಂಟಿ ಮಹಿಳೆ ಮಲಗಿದಲ್ಲೇ ಮೃತ್ಯು

Exit mobile version