Site icon Vistara News

Bengaluru Rain | ವಿಲ್ಲಾದಲ್ಲಿ ಶ್ವಾನ ವಿಲವಿಲ, ಎನ್‌ಡಿಆರ್‌ಎಫ್ ತಂಡದಿಂದ ರಕ್ಷಣೆ

rain

ಬೆಂಗಳೂರು: ಬೆಂಗಳೂರಿನ ಹಲವು ಭಾಗಗಳು ಪ್ರವಾಹ ಪರಿಸ್ಥಿತಿ ಎದುರಿಸುತ್ತಿವೆ. ಜನರಷ್ಟೇ ಅಲ್ಲ ಮೂಕಜೀವಿಗಳೂ ಮೂಕರೋದನೆ ಅನುಭವಿಸುತ್ತಿವೆ.

ಸತತ ಮಳೆಯಿಂದ (Bengaluru Rain ) ರಾಜಕಾಲುವೆ ತುಂಬಿ ಬೆಂಗಳೂರಿನ ಪೂರ್ವ ಭಾಗವು ಸಂಪೂರ್ಣ ಜಲಾವೃತವಾಗಿದೆ. ಐಷಾರಾಮಿ ವಿಲ್ಲಾದಲ್ಲಿ ಸಿಲುಕಿದ್ದ ಶ್ವಾನವೊಂದನ್ನು ಎನ್‌ಡಿ‌ಆರ್‌ಎಫ್ ತಂಡ ರಕ್ಷಣೆ ಮಾಡಿದೆ.

ರಾಮಗೊಂಡನಹಳ್ಳಿ ಬಳಿ ಇರುವ ಟಿಝೆಡ್ ವಿಲ್ಲಾದಲ್ಲಿ ಭಯದಿಂದ ಓಡಾಡುತ್ತಿದ್ದ ಮ್ಯಾಕ್ಸಿ ಹೆಸರಿನ ಶ್ವಾನವನ್ನು ರಕ್ಷಿಸಿ ಮಾಲೀಕರಿಗೆ ಒಪ್ಪಿಸಲಾಗಿದೆ. ಸೋಮವಾರ ರಾತ್ರಿಯಿಡೀ ಮನೆಯಲ್ಲಿ ಸಿಲುಕಿಕೊಂಡಿದ್ದ ಮ್ಯಾಕ್ಸಿ, ಹೊರಗೆ ಬರಲು ಆಗದೆ ಪ್ರವಾಹದ ಪರಿಸ್ಥಿತಿಗೆ ಸಿಲುಕಿ ಕಂಗಾಲಾಗಿತ್ತು.

ಮಂಗಳವಾರ ಮ್ಯಾಕ್ಸಿ ಮಾಲೀಕರು ಮಾಹಿತಿ ನೀಡಿದ ಬೆನ್ನಲ್ಲೇ ಬೋಟ್‌ ಮೂಲಕ ವಿಲ್ಲಾಗೆ ತೆರಳಿ ಶ್ವಾನವನ್ನು ರಕ್ಷಣೆ ಮಾಡಲಾಯಿತು. ರಾತ್ರಿಯಿಡೀ ಪ್ರವಾಹದಲ್ಲಿ ಸಿಲುಕಿ ಕಂಗಾಲಾಗಿದ್ದ ಮ್ಯಾಕ್ಸಿ ಕೊನೆಗೂ ಮಾಲೀಕರ ಮಡಿಲ ಸೇರಿದೆ.

ಮಾಲೀಕರ ಮಡಿಲು ಸೇರಿದ ಮ್ಯಾಕ್ಸಿ ಶ್ವಾನ

ತಮ್ಮ ನೆಚ್ಚಿನ ಶ್ವಾನವನ್ನು ಕಂಡ ಮಾಲೀಕರು ಅಪ್ಪಿ ಮುದ್ದಾಡಿದರು. ನೀರಿನಲ್ಲಿ ನೆನೆದು ಒದ್ದೆಯಾಗಿದ್ದ ಮ್ಯಾಕ್ಸಿಗೆ ಮಾಲೀಕರು ಟವೆಲ್‌ನಿಂದ ಒರೆಸಿ ಬೆಚ್ಚಗೆ ಮಾಡಿದರು.

ಇದನ್ನೂ ಓದಿ | Rain News | ಜಲದಿಗ್ಭಂಧನದಲ್ಲಿದ್ದ 12 ದಿನದ ಹಸುಗೂಸು- ಬಾಣಂತಿಯ ರಕ್ಷಣೆ

Exit mobile version