Site icon Vistara News

Drowned In lake : ಕೆರೆಯಲ್ಲಿ ಮೀನು ಹಿಡಿಯಲು ಹೋಗಿ‌ ನೀರುಪಾಲಾದ ವ್ಯಕ್ತಿ

Drowned in lake

ದೊಡ್ಡಬಳ್ಳಾಪುರ: ಮೀನು ಹಿಡಿಯಲು ಹೋದ ವ್ಯಕ್ತಿ‌ ನೀರು ಪಾಲಾಗಿದ್ದಾರೆ. ಪ್ರಕಾಶ್ (45) ಮೃತ ದುರ್ದೈವಿ. ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರ ಹೊರವಲಯದ ಪಾಲನಜೋಗಹಳ್ಳಿ‌ ಕೆರೆಯಲ್ಲಿ (Drowned In lake ) ಘಟನೆ ನಡೆದಿದೆ.

ನಿನ್ನೆ ಭಾನುವಾರ ಪ್ರಕಾಶ್‌ ಸ್ನೇಹಿತ ಜತೆಗೆ ಮೀನು ಹಿಡಿಯಲು ಪಾಲನಜೋಗಹಳ್ಳಿ ಕೆರೆಗೆ ಬಂದಿದ್ದರು. ಈ ವೇಳೆ ಒಂದು ಮೀನು ಸಿಕ್ಕಿದಾಗ, ಮತ್ತೊಂದು ಮೀನು ಹಿಡಿಯಲು ಕೆರೆಯ ಅರ್ಧಭಾಗಕ್ಕೆ ಹೋಗಿದ್ದಾ‌ರೆ. ಆದರೆ ವಾಪಸ್‌ ಬರಲು ಆಗದೆ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿತ್ತು. ಆದರೆ ಕತ್ತಲಾದ ಕಾರಣ ಕಾರ್ಯಾಚರಣೆ ನಿಲ್ಲಿಸಿತ್ತು. ಸೋಮವಾರ ಬೆಳಗ್ಗೆಯಿಂದ ಪುನಃ ಕಾರ್ಯಾಚರಣೆಗಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹವನ್ನು ಕೆರೆಯಿಂದ ಹೊರತೆಗೆದಿದ್ದಾರೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Neha Murder Case: ನೇಹಾ ಹಿರೇಮಠ ಸಾವಿಗೆ ನ್ಯಾಯ ಸಿಗಲಿ ಎಂದ ದೊಡ್ಮನೆ ಸೊಸೆ

ಓಮ್ನಿಗೆ ಬ್ಯಾಲೆನೊ ಡಿಕ್ಕಿ, ಬಾಲಕಿ ಸಾವು, 7 ಮಂದಿಗೆ ಗಾಯ, ಸುಟ್ಟುಹೋದ ಓಮ್ನಿ

ಬೆಂಗಳೂರು: ಮಾದಾವರ ಟೋಲ್‌ಗೇಟ್ ಬಳಿ ಮಾರುತಿ ಒಮ್ನಿ (Maruti Omni) ವಾಹನಕ್ಕೆ ಬ್ಯಾಲೆನೋ ಕಾರು (Baleno) ಹಿಂದಿನಿಂದ ಬಂದು ಡಿಕ್ಕಿಯಾದ (Road Accident) ಪರಿಣಾಮ ಬಾಲಕಿಯೊಬ್ಬಳು (girl death) ಮೃತಪಟ್ಟಿದ್ದು, ಇನ್ನೂ ನಾಲ್ವರಿಗೆ ಗಂಭೀರ ಗಾಯಗಳಾಗಿವೆ.

ತುಮಕೂರು ರಸ್ತೆ ಹೈವೇಯಲ್ಲಿ 10 ಗಂಟೆ ರಾತ್ರಿಯಲ್ಲಿ ಘಟನೆ ನಡೆದಿದೆ. ಓಮ್ನಿಯಲ್ಲಿದ್ದವರು ಅಬ್ಬಿಗೆರೆ, ದಾಸಾನುಪುರದ ಸಂಬಂಧಿಕರ ಮನೆಯಿಂದ ಬರುತ್ತಿದ್ದಾಗ ದುರಂತ ಘಟಿಸಿದೆ. ಒಟ್ಟು ಎಂಟು ಜನ ಮಾರುತಿ ಓಮ್ನಿ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಬ್ಯಾಲೆನೋ ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಬ್ಯಾಲೆನೋ ಕಾರು ಹಿಂದಿನಿಂದ ಬಂದು ಡಿಕ್ಕಿ ಹೊಡೆದ ರಭಸಕ್ಕೆ ಓಮ್ನಿ ಮೂರು ಪಲ್ಟಿಯಾಗಿದೆ. ಪಲ್ಟಿಯಾಗುತ್ತಿದ್ದಂತೆ ಓಮ್ನಿ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ.

ಎಂಟು ಜನರಲ್ಲಿ 14 ವರ್ಷದ ಬಾಲಕಿ ದಿವ್ಯ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ನಾಲ್ಕು ಜನರ ಸ್ಥಿತಿ ಗಂಭೀರವಾಗಿದ್ದು, ಸದ್ಯ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನುಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬ್ಯಾಲೆನೋ ಕಾರಿನಲ್ಲಿದ್ದ ಮೂರು ಜನರಲ್ಲಿ ಒಬ್ಬರಿಗೆ ಗಂಭೀರ ಗಾಯವಾಗಿದೆ ಎಂದು ಶಂಕಿಸಲಾಗಿದ್ದು, ಮೂವರೂ ಸ್ಥಳದಿಂದ ನಾಪತ್ತೆಯಾಗಿದ್ದಾರೆ. ಸ್ಥಳದಲ್ಲಿ ಕ್ರೇನ್ ಮೂಲಕ ಸುಟ್ಟ ಕಾರನ್ನು ತೆರವು ಮಾಡಲಾಯಿತು.

ಓಮ್ನಿ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ಎಂಟು ಜನರಲ್ಲಿ ಮಾಯಾಂಕ್, ಮಂಜುಳ, ಸುನಿತಾ, ತರುಣ್, ಮಹೇಶ್, ನಮನ್, ಶಾಂತಿಲಾಲ್ ಗಾಯಾಳುಗಳು. ದಿವ್ಯಾ (14) ಮೃತ ಬಾಲಕಿ. ಎಲ್ಲರೂ ದಾಸನಪುರ ನಿವಾಸಿಗಳು. ನಮನ್, ಸುನಿತಾ, ಮಾಯಾಂಕ್ ಸ್ಥಿತಿ ಗಂಭೀರವಾಗಿದೆ. ಓಮ್ನಿಯ ಪೆಟ್ರೋಲ್ ಟ್ಯಾಂಕ್‌ನಿಂದ ಪೆಟ್ರೋಲ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಗಾಯಾಳುಗಳಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಬ್ಯಾಲೆನೋ ಕಾರಿನಲ್ಲಿದ್ದ ಮೂರು ಜನ‌ರಿಗಾಗಿ ಪೊಲೀಸರಿಂದ ತೀವ್ರ ಹುಡುಕಾಟ ನಡೆದಿದೆ. ಮೂವರಲ್ಲಿ ಒಬ್ಬ ವ್ಯಕ್ತಿಗೆ ಗಂಭೀರ ಗಾಯವಾಗಿರುವ ಶಂಕೆ ಇದೆ. ಘಟನೆ ನಡೆಯುತ್ತಿದ್ದಂತೆ ಇವರು ಸ್ಥಳದಿಂದ ನಾಪತ್ತೆಯಾಗಿದ್ದಾರೆ. ಇವರನ್ನು ಪರಿಶೀಲನೆ ನಡೆಸಬೇಕಿದೆ ಎಂದು ಬೆಂಗಳೂರು ಗ್ರಾಮಾಂತರ ಎಸ್ ಪಿ ಮಲ್ಲಿಕಾರ್ಜುನ ಬಾಲಾದಂಡಿ ಹೇಳಿಕೆ ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version