Site icon Vistara News

Drowned in Pond : ದೊಡ್ಡಬಳ್ಳಾಪುರದಲ್ಲಿ ಕೃಷಿ ಹೊಂಡಕ್ಕೆ ಬಿದ್ದು ವ್ಯಕ್ತಿ ಸಾವು

drowned in pond

ದೊಡ್ಡಬಳ್ಳಾಪುರ: ಕಾಲು ಜಾರಿ ಕೃಷಿ ಹೊಂಡಕ್ಕೆ (Drowned in Pond) ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ನಾರಸಿಂಹನಹಳ್ಳಿ ಗ್ರಾಮದ ತೋಟದಲ್ಲಿ ಘಟನೆ (Bengaluru Rural) ನಡೆದಿದೆ. ಉಜ್ಜನಿ ಹೊಸಹಳ್ಳಿ ಗ್ರಾಮದ ಸುನೀಲ್ (30) ಮೃತ ದುರ್ದೈವಿ.

ಸುನೀಲ್‌ 2 ತಿಂಗಳ ಹಿಂದಷ್ಟೇ ತೋಟದ ಕೆಲಸಕ್ಕೆ ಸೇರಿಕೊಂಡಿದ್ದ. ತೋಟದಲ್ಲೇ ವಾಸವಿದ್ದ ಸುನೀಲ್‌ ಬಿಹಾರ ಮೂಲದ ಕಾರ್ಮಿಕರ ಜತೆ ಹೋಳಿ ಆಚರಿಸಿದ್ದ. ಹೋಳಿ ಹಬ್ಬ ಆಚರಿಸಿ‌ ಹೊಂಡದಲ್ಲಿ ಕೈ ಕಾಲು ತೊಳೆಯಲು ಹೋದಾಗ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಬಿದ್ದ ರಭಸಕ್ಕೆ ಮುಖಕ್ಕೆ ತೀವ್ರವಾಗಿ ಗಾಯವಾಗಿರುವ ಗುರುತು ಇದೆ.

ಕಾರ್ಮಿಕರು ಕೃಷಿ ಹೊಂಡದ ಬಳಿ ಬಂದಾಗ ಸುನೀಲ್ ಮೃತದೇಹ ಪತ್ತೆಯಾಗಿದೆ. ಮೃತದೇಹ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಈ ಸಂಬಂಧ ತನಿಖೆಯನ್ನು ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ‌ ದೊಡ್ಡಬಳ್ಳಾಪುರ ತಾಲೂಕಿನ ನಾರಸಿಂಹನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Theft Case : ಬ್ಯಾಂಕ್‌ ಕೆಲಸ ಬಿಟ್ಟು ಕಳ್ಳತನಕ್ಕೆ ಇಳಿದಳು; ಕಿಲಾಡಿ ಕಳ್ಳಿ ಖಾಕಿಗೆ ಲಾಕ್‌ ಆಗಿದ್ದೇಗೆ?

ನದಿಯಲ್ಲಿ ಈಜಲು ಹೋಗಿ ಕೊಚ್ಚಿ ಹೋದ ಯುವಕ

ಗದಗ: ಅದ್ಧೂರಿಯಾಗಿ ಹೋಳಿ ಹಬ್ಬ (Holli Fest) ಆಚರಿಸಿ ನಂತರ ಸ್ನಾನ‌ ಮಾಡಲೆಂದು ನದಿಗೆ ತೆರಳಿದ ಯುವಕ‌ ನೀರಿನಲ್ಲಿ ಮುಳುಗಿ (Drowned In River) ಮೃತಪಟ್ಟಿದ್ದಾನೆ. ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದ ಬ್ಯಾರೇಜ್‌ನಲ್ಲಿ ಘಟನೆ (Gadaga News) ನಡೆದಿದೆ. ಯುವರಾಜ ವಿಶ್ವನಾಥ ಕೊಂಪಿ (23) ಮೃತ ದುರ್ದೈವಿ.

ವಿಜಯನಗರ ಜಿಲ್ಲೆ ಹಿರೇಹಡಗಲಿ‌ ಗ್ರಾಮದ ನಿವಾಸಿಯಾದ ಯುವರಾಜ ಹೋಳಿ ಹಬ್ಬ ಮುಗಿಸಿಕೊಂಡು ಸ್ನೇಹಿತರೊಟ್ಟಿಗೆ ಸ್ನಾನಕ್ಕೆಂದು ನದಿಗೆ ಬಂದಿದ್ದ. ಶಿಂಗಟಾಲೂರು ಏತ ‌ನೀರಾವರಿಯ ಬ್ಯಾರೇಜ್‌ನಲ್ಲಿ ಈಜಲು ತೆರಳಿದಾಗ, ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾನೆ.

ಮುಂಡರಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತದೇಹವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version