ಆನೇಕಲ್: ತೋಟದಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಕಾಡಾನೆ ದಾಳಿ (Elephant attack) ಮಾಡಿದೆ. ಪರಿಣಾಮ ಇಬ್ಬರು ಮಹಿಳೆಯರ ಜತೆಗೆ ಮೂರು ಹಸುಗಳು ಮೃತಪಟ್ಟಿವೆ. ರಾಜ್ಯ ಗಡಿಭಾಗ ತಮಿಳುನಾಡಿನ ಅಣ್ಣಿಯಾಳ ಬಳಿ ಕಾಡಾನೆ ದಾಳಿ ನಡೆಸಿದೆ.
ಅಣ್ಣಿಯಾಳ ಗ್ರಾಮದ ಅನಂತ್, ವಸಂತಮ್ಮ ಹಾಗೂ ದಾಸರಿ ಪಲ್ಲಿಯ ವೆಂಕಟೇಶ್- ಅಶ್ವರ್ಥಮ್ಮ ದಂಪತಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ತೋಟಕ್ಕೆ ನುಗ್ಗಿದ ಆನೆಯು ಅಶ್ವರ್ಥಮ್ಮ ಹಾಗೂ ವಸಂತಮ್ಮ ಮೇಲೆ ದಾಳಿ ಮಾಡಿದೆ. ಆನೆಯಿಂದ ತಪ್ಪಿಸಕೊಳ್ಳಲು ಆಗದೇ ಮೃತಪಟ್ಟಿದ್ದಾರೆ.
ಹೊಸೂರಿನಲ್ಲಿ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಗುಮ್ಮಳಾಪುರ, ಅಣ್ಣಿಯಾಳು, ತಳಿ ಸುತ್ತಮುತ್ತ ಕಾಡಾನೆಯ ದಾಂಧಲೆ ಹೆಚ್ಚಾಗಿದೆ. ಗ್ರಾಮಕ್ಕೆ ಬಂದ ಆನೆಯನ್ನು ವಾಪಸ್ ಕಾಡಿಗೆ ಓಡಿಸಲು ಗ್ರಾಮಸ್ಥರೇ ಮುಂದಾಗಿದ್ದಾರೆ.
ಮೈಸೂರಲ್ಲಿ ಬೋನಿಗೆ ಬಿದ್ದ ಚಿರತೆ
ಮೈಸೂರು: ಮೈಸೂರಿನ ರಾಮನಹುಂಡಿಯಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆಯೊಂದು ಬಿದ್ದಿದೆ. 2 ವರ್ಷದ ಹೆಣ್ಣು ಚಿರತೆ ಸೆರೆಯಾಗಿದೆ. ಜಯಪುರ, ರಾಮನಹುಂಡಿ ಸೇರಿದಂತೆ ವಿವಿಧ ಗ್ರಾಮಗಳ ಸುತ್ತಮುತ್ತ ಚಿರತೆಗಳು ಕಾಣಿಸಿಕೊಳ್ಳುತ್ತಿದ್ದವು. ಹೀಗಾಗಿ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಅರಣ್ಯ ಇಲಾಖೆಯು ಚಿರತೆ ಸೆರೆಗೆ ಬೋನಿರಿಸಿತ್ತು. ತಡರಾತ್ರಿ ಆಹಾರ ಅರಸಿ ಬಂದ ಚಿರತೆಯೂ ಕಡೆಗೂ ಬೋನಿಗೆ ಬಿದ್ದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಸುರಕ್ಷಿತ ಸ್ಥಳಕ್ಕೆ ಚಿರತೆ ರವಾನಿಸಿದ್ದಾರೆ. ಚಿರತೆ ಸೆರೆಯಿಂದ ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ