Site icon Vistara News

Murder Case : ಬಾಡಿಗೆ ಹಣ ಪಡೆಯಲು ಕಿರಿಕ್‌; ಬೆಡ್‌ ರೂಮ್‌ನಲ್ಲೇ ಪತ್ನಿ ಕೊಂದಿದ್ದ ಹಂತಕ ಅರೆಸ್ಟ್‌

Murder Case

ಆನೇಕಲ್: ಚಾಕುವಿನಿಂದ ಇರಿದು ಪತ್ನಿಯನ್ನು ಕೊಂದಿದ್ದ (Murder Case) ಪಾಪಿ ಪತಿಯೊಬ್ಬ ಅರೆಸ್ಟ್ ಆಗಿದ್ದಾನೆ. ಗಂಗಿರೆಡ್ಡಿ ಬಂಧಿತ ಆರೋಪಿ ಆಗಿದ್ದಾನೆ. ಮನೆ ಬಾಡಿಗೆ ಹಣ ಪಡೆಯುವ ವಿಚಾರಕ್ಕೆ ನಡೆದ ಗಲಾಟೆಯು ಕೊಲೆಯಲ್ಲಿ ಅಂತ್ಯವಾಗಿತ್ತು. ಬೆಂಗಳೂರಿನ ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸೋಂಪುರದಲ್ಲಿ ಕಳೆದ 3ರಂದು ಹತ್ಯೆ ನಡೆದಿತ್ತು.

ಇತ್ತೀಚೆಗೆ ಗಂಗಿರೆಡ್ಡಿ ಬಾಡಿಗೆ ಹಣ ಪಡೆದು ಆ ಹಣದಿಂದ ಕುಡಿದು ಮಜಾ ಮಾಡುತ್ತಿದ್ದ. ಹೀಗಾಗಿ ಸುಜಾತ ಮನೆ ಬಾಡಿಗೆ ಹಣವನ್ನು ಗಂಗಿರೆಡ್ಡಿಗೆ ನೀಡದೆ ತಾನೇ ಪಡೆಯುತ್ತಿದ್ದಳು. ಇತ್ತ ತರಕಾರಿ ಅಂಗಡಿ ಇಟ್ಟುಕೊಂಡಿದ್ದ ಸುಜಾತ ಮೇಲೆ ಗಂಗಿರೆಡ್ಡಿ ಶೀಲ ಶಂಕಿಸಿದ್ದ. ಇಬ್ಬರ ನಡುವೆ ದಿನನಿತ್ಯ ಗಲಾಟೆ ನಡೆಯುತ್ತಿತ್ತು.

ಕಳೆದ 3ರಂದು ಇಬ್ಬರ ನಡುವೆ ಗಲಾಟೆ ನಡೆದು ವಿಕೋಪಕ್ಕೆ ತಿರುಗಿತ್ತು. ಇದೇ ವೇಳೆ ಮನೆಯಲ್ಲಿದ್ದ ಚಾಕುವಿನಿಂದ ಇರಿದು ಸುಜಾತಳನ್ನು ಕೊಂದು ಪರಾರಿ ಆಗಿದ್ದ. ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದ ಸರ್ಜಾಪುರ ಪೊಲೀಸರು, ಪರಾರಿಯಾಗಿದ್ದ ಆರೋಪಿ ಗಂಗಿರೆಡ್ಡಿಯನ್ನು ಬಂಧಿಸಿದ್ದಾರೆ.

ಸುಮ್ಮನಹಳ್ಳಿಯಲ್ಲಿ ಅಪರಿಚಿತ ಶವ ಪತ್ತೆ

ಬೆಂಗಳೂರಿನ ಸುಮ್ಮನಹಳ್ಳಿಯ ರಾಜಾಕಾಲುವೆ ಬಳಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ವ್ಯಕ್ತಿಯನ್ನು ಹತ್ಯೆ ನಡೆಸಿ ರಾಜಕಾಲುವೆ ಪಕ್ಕ ಬಿಸಾಡಿ ಹೋಗಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಕಾಮಾಕ್ಷಿಪಾಳ್ಯ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಕೈಗೊಂಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version