Site icon Vistara News

Road Accident : ರಸ್ತೆ ಬದಿಯಲ್ಲಿ ನಿಂತಿದ್ದ ಮಗುವನ್ನು ಬಲಿ ಪಡೆದ ಟ್ರ್ಯಾಕ್ಟರ್‌; ಅಜ್ಜಿ ಜತೆ ಇದ್ದಾಗಲೇ ದುರಂತ

three year old boy dead in Accident

ದೊಡ್ಡಬಳ್ಳಾಪುರ: ಬೆಂಗಳೂರು ಮತ್ತು ಹೊರವಲಯದಲ್ಲಿ ಅಪಘಾತಗಳು (Road accident) ಒಂದೇ ಸಮನೆ ಹೆಚ್ಚುತ್ತಿವೆ, ಜೀವ ಬಲಿಯೂ ಜಾಸ್ತಿಯಾಗುತ್ತಿದೆ ಎಂಬ ಆಪಾದನೆಗಳ ನಡುವೆಯೇ ದೊಡ್ಡ ಬಳ್ಳಾಪುರದಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಪುಟ್ಟ ಮಗುವೊಂದನ್ನು (Child dead) ಟ್ರ್ಯಾಕ್ಟರ್‌ ಬಲಿ ಪಡೆದಿದೆ.

ದೊಡ್ಡಬಳ್ಳಾಪುರದ ಡಿಕ್ರಾಸ್ ರಸ್ತೆಯ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಘಟನೆಯಲ್ಲಿ ಮೃತಪಟ್ಟ ಮಗುವಿನ ಹೆಸರು ದರ್ಶನ್‌. ಕೇವಲ ಮೂರು ವರ್ಷ. ತೀವ್ರವಾಗಿ ಗಾಯಗೊಂಡ ಮಗು ಮತ್ತು ಅಜ್ಜಿ ಇಬ್ಬರನ್ನೂ ಸಮೀಪದ ದೊಡ್ಡಬಳ್ಳಾಪುರದ ಸರ್ಕಾರಿ ಆಸ್ಪತ್ರೆಗೆ ಒಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ಅಜ್ಜಿ ಕಮಲೇಶ್‌ ದೇವಿ ಅವರಿಗೂ ಗಂಭೀರ ಗಾಯಗಳಾಗಿವೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದಲ್ಲಿ ನಡೆದಿರುವ ಘಟನೆಯ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Road Accident : ಚಿಕ್ಕೋಡಿ ಬಳಿ ಭೀಕರ ಅಪಘಾತ; ಕಾರು- ಸ್ಕೂಟರ್‌ ಡಿಕ್ಕಿಯಾಗಿ ಅಣ್ಣ-ತಂಗಿ ಸ್ಥಳದಲ್ಲೇ ದುರ್ಮರಣ

ರಾಜಧಾನಿಯಲ್ಲಿ ಭಯಾನಕ ಘಟನೆ; ತಾಯಿ, 8 ವರ್ಷದ ಮಗನ ಬರ್ಬರ ಹತ್ಯೆ

ಬೆಂಗಳೂರು: ರಾಜಧಾನಿಯಲ್ಲಿ ಬೆಚ್ಚಿಬೀಳಿಸುವ ಭಯಾನಕ (Bangalore news) ಘಟನೆಯೊಂದು ನಡೆದಿದೆ. ತಾಯಿ ಮತ್ತು 8 ವರ್ಷದ ಮಗನನ್ನು ಕೊಲೆ (Murder case) ಮಾಡಲಾಗಿದೆ. ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ತಾಯಿ ಮತ್ತು ಮಗನ ಹಂತಕರು (Mother and son murdered) ಯಾರು ಎಂದು ಪತ್ತೆ ಹಚ್ಚಲು ಪೊಲೀಸರು ತಂಡವನ್ನು ರಚಿಸಿದ್ದಾರೆ.

ಬಾಗಲಗುಂಟೆಯ ರವೀಂದ್ರ ನಗರದಲ್ಲಿ ವಾಸವಾಗಿರುವ ನವನೀತ (35) ಎಂಬ ಮಹಿಳೆ ಹಾಗೂ ಅವರ ಎಂಟು ವರ್ಷದ ಮಗ ಸುಜನ್‌ನನ್ನು ಕೊಲ್ಲಲಾಗಿದೆ. ಮಂಗಳವಾರ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಬುಧವಾರ ಬೆಳಗ್ಗೆ ಹೊರ ಜಗತ್ತಿಗೆ ಬಯಲಾಯಿತು.

ತಾಯಿ ನವನೀತ ಅವರನ್ನು ಚೂರಿಯಿಂದ ಇರಿದು ಕೊಲೆ ಮಾಡಲಾಗಿದ್ದರೆ, ಎಂಟು ವರ್ಷದ ಮಗನನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ. ಇಬ್ಬರ ಶವ ಕೂಡಾ ಬೆಡ್‌ ಮೇಲೆ ಬಿದ್ದಿದೆ. ಈ ಕೊಲೆಯನ್ನು ಮಾಡಿದ್ದು ಯಾರು ಎನ್ನುವುದು ನಿಗೂಢವಾಗಿದ್ದು, ಅದನ್ನು ಪತ್ತೆ ಹಚ್ಚಲು ಡಿಸಿಪಿ ಶಿವಪ್ರಕಾಶ್ ದೇವರಾಜ ಅವರು ವಿಶೇಷ ತಂಡವನ್ನು ರಚಿಸಿದ್ದಾರೆ.

ಪತಿಯಿಂದ ದೂರವಾಗಿದ್ದ ಮಹಿಳೆ

ನವನೀತ ಅವರು ಆಂಧ್ರ ಪ್ರದೇಶ ಮೂಲದವರೆಂದು ಹೇಳಲಾಗಿದೆ. ಕಳೆದ ಮೂರು ವರ್ಷಗಳಿಂದ ರವೀಂದ್ರ ನಗರದಲ್ಲಿ ವಾಸವಿದ್ದರು. ಆದರೆ, ಅಕ್ಕಪಕ್ಕದವರ ಜತೆಗೆ ಹೆಚ್ಚೇನೂ ಸಂಪರ್ಕ ಇರಲಿಲ್ಲ ಎನ್ನಲಾಗಿದೆ.

ಅವರು ಕೌಟುಂಬಿಕವಾಗಿ ಸಮಸ್ಯೆಯನ್ನು ಎದುರಿಸುತ್ತಿದ್ದರು ಎನ್ನಲಾಗಿದ್ದು, ಎರಡು ವರ್ಷಗಳಿಂದ ಪತಿಯಿಂದ ದೂರವಾಗಿ ವಾಸಿಸುತ್ತಿದ್ದಾರೆ. ಅವರು ಏನು ಕೆಲಸ ಮಾಡುತ್ತಿದ್ದರು ಎನ್ನುವುದರ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ.

Exit mobile version