Site icon Vistara News

Road Accident : ಲಾರಿ-ಬಸ್‌ ಮುಖಾಮುಖಿ ಡಿಕ್ಕಿ; ಚಾಲಕನ ತಲೆಯೇ ಪೀಸ್‌ ಪೀಸ್‌

The car collided head on with the lorry Drivers death

ಆನೇಕಲ್‌: ಟಿಪ್ಪರ್ ಲಾರಿ ಮತ್ತು ಬಸ್ ನಡುವೆ ಮುಖಾಮುಖಿ (Road Accident )ಡಿಕ್ಕಿಯಾಗಿದೆ. ಡಿಕ್ಕಿ ರಭಸಕ್ಕೆ ಬಸ್‌ ಚಾಲಕನ ತಲೆಯೇ ಪೀಸ್‌ ಪೀಸ್‌ ಆಗಿದೆ. ಅಪಘಾತದಲ್ಲಿ ಸುಮಾರು 15 ಮಂದಿ ಗಂಭೀರ ಗಾಯಗೊಂಡಿದ್ದಾರೆ.

ರಾಜ್ಯ ಗಡಿಭಾಗ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಅನಸೊನೈ ಗ್ರಾಮದ ಬಳಿ ಅಪಘಾತ ನಡೆದಿದೆ. ಟಾಟಾ ಇಂಡಸ್ಟ್ರಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನೌಕರರು ಕೆಲಸ ಮುಗಿಸಿ ಕಂಪೆನಿ ಬಸ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ದುರ್ಘಟನೆ ನಡೆದಿದೆ. ಡಿಕ್ಕಿ ರಭಸಕ್ಕೆ ಬಸ್ ಮತ್ತು ಲಾರಿಯು ನಜ್ಜುಗುಜ್ಜಾಗಿದೆ.

ಬಸ್‌ನಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಸ್ಥಳೀಯರು ರಕ್ಷಿಸಿದ್ದು, ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕೆ ಕೆಲಮಂಗಲಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ವಾಹನಗಳನ್ನು ಸ್ಥಳಾಂತರ ಮಾಡಿದ್ದಾರೆ.

ಇದನ್ನೂ ಓದಿ: Human Skulls found : ತೋಟದ ಮನೆಯಲ್ಲಿ 30ಕ್ಕೂ ಅಧಿಕ ಮಾನವ ತಲೆಬುರುಡೆ ; ಏನಿದರ ರಹಸ್ಯ?

ಕಾರಿನ ಮೇಲೆ ಕಬ್ಬು ತುಂಬಿದ ಲಾರಿ ಪಲ್ಟಿ; ಮೂವರು ಸ್ಥಳದಲ್ಲೇ ಸಾವು

ಚಾಮರಾಜನಗರ: ಕಬ್ಬಿನ ಲಾರಿಯೊಂದು ಮೂವರ ಪ್ರಾಣವನ್ನೇ ತೆಗೆದಿದೆ. ದಿಂಬಂ 27ನೇ ತಿರುವಿನಲ್ಲಿ ಕಾರಿನ ಮೇಲೆ ಕಬ್ಬು ತುಂಬಿದ ಲಾರಿ ಪಲ್ಟಿಯಾಗಿದೆ. ಪರಿಣಾಮ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಾಳವಾಡಿಯಿಂದ ಸತ್ಯಮಂಗಲದ ಕಡೆ ತೆರಳುತ್ತಿದ್ದ ಕಬ್ಬು ತುಂಬಿದ ಲಾರಿಯು ನಿಯಂತ್ರಣ ತಪ್ಪಿ ಕಾರಿನ ಮೇಲೆ ಪಲ್ಟಿ ಹೊಡೆದಿದೆ. ಲಾರಿಯಡಿ ಸಿಲುಕಿದ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ. ಅಪಘಾತದಿಂದಾಗಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಸನೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಕಾರಲ್ಲಿದ್ದ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹಗಳನ್ನು ಸತ್ಯಮಂಗಲ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಅಫಘಾತದಲ್ಲಿ ಮೃತಪಟ್ಟವರ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ. ಆಸನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version