Site icon Vistara News

ವಿಶ್ವ ಯೋಗ ದಿನಾಚರಣೆ ಯಶಸ್ವಿಗೊಳಿಸೋಣ: ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ

ವಿಶ್ವ ಯೋಗ ದಿನಾಚರಣೆ

ಆನೇಕಲ್: ಸ್ವಸ್ಥ ಜೀವನ ಹಾಗೂ ಆರೋಗ್ಯಕರ ಚಿಂತನೆಗಾಗಿ ಎಲ್ಲರೂ ಯೋಗಾಭ್ಯಾಸ ಮಾಡುವ ಅಗತ್ಯವಿದೆ. ಯೋಗವು ಆರೋಗ್ಯಕರ ಜೀವನದ ಸೋಪಾನ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು ಹೇಳಿದ್ದಾರೆ.

ಆನೇಕಲ್ಲಿನಲ್ಲಿ ಆಧ್ಯಾತ್ಮಿಕ ಚಿಂತಕ ಕೆ.ವಿ ಲಕ್ಷ್ಮೀನಾರಾಯಣ ಆಚಾರ್ಯ ಅವರು ಆಯೋಜಿಸಿದ್ದ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಯೋಗ ದಿನದಂದು ಮೈಸೂರಿನಲ್ಲಿ ನಡೆಯುವ ಬೃಹತ್‌ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಿ, ಯೋಗಕ್ಕೆ ಪ್ರೇರಣೆ ನೀಡುತ್ತಿದ್ದಾರೆ. ಯೋಗಕ್ಕೆ ಮಾನ್ಯತೆ ದೇಶದಲ್ಲಿ ಹಾಗೂ ಪ್ರಪಂಚದಲ್ಲಿ ಹೆಚ್ಚಾಗುತ್ತಿದೆ. ನಿತ್ಯ ಜೀವನದಲ್ಲಿ ಯೋಗದ ಅವಶ್ಯಕತೆಯು ಹೆಚ್ಚಾಗಿದೆ ಎಂದರು.

ಇಂದು ಜಗತ್ತಿನೆಲ್ಲೆಡೆ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ಬದಲಾಗಿದೆ. ಇದು ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈಗ ಎಲ್ಲರಿಗೂ ಯೋಗದ ಅವಶ್ಯಕತೆ ಇದೆ. ದೇಹ ಸ್ವಸ್ಥವಾಗಿ ಆರೋಗ್ಯ ಪರಿಪೂರ್ಣವಾಗಿರಬೇಕು. ಈ ನಿಟ್ಟಿನಲ್ಲಿ ನಾವೆಲ್ಲರೂ ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.

ಇದನ್ನೂ ಓದಿ: ಅರಮನೆ ಅಂಗಳದಲ್ಲಿ ಯೋಗ ದಿನ ಪೂರ್ವಾಭ್ಯಾಸ; ಭರ್ಜರಿ ಸಿದ್ಧತೆ

Exit mobile version