ಬೆಂಗಳೂರು ಗ್ರಾಮಾಂತರ: ಗ್ರಾಮೀಣ ಭಾಗಗಳ ನಿರ್ಜನ ಪ್ರದೇಶದಲ್ಲಿ ಡ್ರಾಪ್ ಕೇಳುವ ನೆಪವೊಡ್ಡಿ ಹಣ, ಮೊಬೈಲ್ ದೋಚುತ್ತಿದ್ದ ಖದೀಮರನ್ನು (Crime News) ಪೊಲೀಸರು ಬಂಧಿಸಿದ್ದಾರೆ. ಗ್ರಾಮೀಣ ಭಾಗದ ನಿರ್ಜನ ಪ್ರದೇಶದಲ್ಲಿ ಅಪ್ರಾಪ್ತರನ್ನು ಬಿಟ್ಟು ಡ್ರಾಪ್ ಕೇಳಿಸಿ, ನಂತರ ದಾಳಿ ನಡೆಸಿ, ಹಣ, ಮೊಬೈಲ್ ದೋಚುತ್ತಿದ್ದರು. ಇವರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆಯಲ್ಲಿ ವೆಂಕಟೇಶ್ ಬಾಬು ಅವರು ಮೆಡಿಕಲ್ ಹೊಂದಿದ್ದು, ಇತ್ತೀಚೆಗಷ್ಟೇ ದೊಡ್ಡಬಳ್ಳಾಪುರ ನಗರಕ್ಕೆ ಬೈಕ್‌ನಲ್ಲಿ ತೆರಳುವಾಗ ಚಿಕ್ಕ ಹುಡುಗನೊಬ್ಬ ಡ್ರಾಪ್ ಕೇಳಿದ್ದಾನೆ. ಬಾಲಕನನ್ನು ಬೈಕ್‌ನಲ್ಲಿ ಕರೆದುಕೊಂಡು ಹೋಗುವಾಗ ಲಾಂಗು, ಮಚ್ಚಿನಿಂದ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಮೊಬೈಲ್, ಚಿನ್ನಾಭರಣ, ಹಣ ದೋಚಿ ಪರಾರಿಯಾಗಿದ್ದಾರೆ.
ಇದೇ ರೀತಿಯ ಹಲವು ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಪ್ರೇಮ್‌ಕುಮಾರ್ ಹಾಗೂ ಅಭಿಷೇಕ್ ಎಂಬುವರನ್ನು ಬಂಧಿಸಿದ್ದಾರೆ. ಹಾಗೆಯೇ, ಎರಡು ಚೈನ್, ಮೊಬೈಲ್ ಹಾಗೂ ಬುಲೆಟ್ ಬೈಕ್ ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ | Mobile robbery | ರಾತ್ರಿ ದರೋಡೆ ಮಾಡುತ್ತಿದ್ದ ಐವರ ಗ್ಯಾಂಗ್ ಸೆರೆ, ಹೈದ್ರಾಬಾದ್, ಚೆನ್ನೈಗೆ ಮೊಬೈಲ್ ರವಾನೆ