Site icon Vistara News

Bengaluru Suicide Case: ಬೆಂಗಳೂರಿನಲ್ಲಿ 4 ಅಂತಸ್ತಿನ ಅಪಾರ್ಟ್‌ಮೆಂಟ್‌ ಮೇಲಿಂದ ಜಿಗಿದು ಗಗನಸಖಿ ಆತ್ಮಹತ್ಯೆ; ಪ್ರೀತಿ ಕಾರಣವೇ?

bengaluru suicide case air hostess commits suicide by jumping off 4 storey apartment in bengaluru s love the cause

bengaluru suicide case air hostess commits suicide by jumping off 4 storey apartment in bengaluru s love the cause

ಬೆಂಗಳೂರು: ಕೋರಮಂಗಲ (Kormangala) 8ನೇ ಬ್ಲಾಕ್‌ನಲ್ಲಿರುವ ರೇಣುಕಾ ರೆಸಿಡೆನ್ಸಿಯ 4ನೇ ಮಹಡಿಯಿಂದ ಬಿದ್ದು ಯುವತಿಯೊಬ್ಬಳು ಆತ್ಮಹತ್ಯೆ (Bengaluru Suicide Case) ಮಾಡಿಕೊಂಡಿದ್ದಾಳೆ. ಅರ್ಚನಾ ಧೀಮನ್ (28) ಮೃತ ದುರ್ದೈವಿ.

ಶುಕ್ರವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದ್ದು, ಸ್ಥಳಕ್ಕೆ ಕೋರಮಂಗಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೇಂಟ್ ಜಾನ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತ ಅರ್ಚನಾ ಹಿಮಾಚಲ ಪ್ರದೇಶ ಮೂಲದವಳಾಗಿದ್ದು, ಪ್ರತಿಷ್ಠಿತ ಏರ್‌ಲೈನ್ಸ್‌ನಲ್ಲಿ ಗಗನಸಖಿ (Air hostess) ಆಗಿ ಕೆಲಸ ಮಾಡಿಕೊಂಡಿದ್ದಳು ಎಂದು ತಿಳಿದು ಬಂದಿದೆ.

ಅರ್ಚನಾ ದುಬೈನಿಂದ ಬೆಂಗಳೂರಿಗೆ ತನ್ನ ಗೆಳಯ ಆದೇಶ್‌ನನ್ನು ಭೇಟಿ ಮಾಡಲು ಬಂದಿದ್ದಳು. ಕೇರಳ ಮೂಲದ ಆದೇಶ್, ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲವು ವರ್ಷಗಳಿಂದ ಈ ಇಬ್ಬರು ಪ್ರೀತಿಸುತ್ತಿದ್ದ ಬಗ್ಗೆ ಮಾಹಿತಿ ಇದೆ.

ಇದನ್ನೂ ಓದಿ: R Dhruvanarayan: ಧ್ರುವನಾರಾಯಣ್‌ ನಿಧನ ಹಿನ್ನೆಲೆ, ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆ ರದ್ದು, ನಾಯಕರ ಸಂತಾಪ

ಶುಕ್ರವಾರ ಬೆಂಗಳೂರಿಗೆ ಗೆಳೆಯನನ್ನು ಭೇಟಿ ಮಾಡಲು ಅರ್ಚನಾ ಧೀಮನ್ ಬಂದಿದ್ದು, ತಡರಾತ್ರಿ ಇಬ್ಬರ ನಡುವೆ ಏನಾಗಿದೆ ಎಂಬ ಬಗ್ಗೆ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಗೆಳಯನ ಭೇಟಿಗಾಗಿ ಬಂದವಳು ಆತ್ಮಹತ್ಯೆ ಮಾಡಿಕೊಂಡಿದ್ದು ಯಾಕೆ? ಗೆಳೆಯನ ಕೈವಾಡ ಇದೆಯಾ ಎಂಬುದರ ಕುರಿತಾಗಿಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸದ್ಯ ಕೋರಮಂಗಲ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.‌

ಬೆಂಗಳೂರು ಗ್ರಾಮಾಂತರ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version