Site icon Vistara News

Bengaluru Theft Case: ಮನೆ ಮಾಲೀಕನಿಗೆ ಊಟದಲ್ಲಿ ಅಮಲು ಔಷಧಿ ಬೆರೆಸಿ ಚಿನ್ನಾಭರಣ ಕಳ್ಳತನ; ನೇಪಾಳಿ ಗ್ಯಾಂಗ್‌ ಅರೆಸ್ಟ್‌

Bengaluru Theft Case

Bengaluru Theft Case

ಬೆಂಗಳೂರು: ಇಲ್ಲಿನ ಜೆ.ಪಿ.ನಗರ ವ್ಯಾಪ್ತಿಯಲ್ಲಿ ನೇಪಾಳಿ ಗ್ಯಾಂಗ್‌ವೊಂದು ಮನೆ ಮಾಲೀಕನಿಗೆ ಅಮಲು ಔಷಧಿ ಬೆರೆಸಿ ಬಳಿಕ (Bengaluru Theft Case) ಮನೆಯನ್ನೇ ಲೂಟಿ ಮಾಡಿದ ಘಟನೆ ನಡೆದಿತ್ತು. ಇದೀಗ ಕದ್ದು ಪರಾರಿ ಆಗಿದ್ದ ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದು ಜೈಲಿಗೆ ಅಟ್ಟಿದ್ದಾರೆ.

ಜೆ.ಪಿ.ನಗರ ವ್ಯಾಪ್ತಿಯಲ್ಲಿ ವಾಸವಾಗಿದ್ದ ಬಿಲ್ಡರ್ ಕಿರಣ್ ಎಂಬುವರ ಮನೆಯಲ್ಲಿ ಕೆಲಸಕ್ಕಾಗಿ ಇದ್ದ ನೇಪಾಳಿ ಯುವಕರು 77 ಲಕ್ಷ ರೂಪಾಯಿ ನಗದು ಹಾಗೂ 1,127 ಗ್ರಾಂ ಚಿನ್ನಾಭರಣ ಕದ್ದು ಪರಾರಿ ಆಗಿದ್ದರು. ಕಳವು ಮಾಡಿ ಪರಾರಿಯಾಗಿದ್ದ 7 ಜನ ಆರೋಪಿಗಳನ್ನು ಜೆ.ಪಿ.ನಗರ ಪೊಲೀಸರು 24 ಗಂಟೆಯಲ್ಲೇ ಬಂಧಿಸಿದ್ದಾರೆ.

ಸುನೀಲ್ ಸಾಹಿ, ನೇತ್ರ ಶಾಹಿ, ಲಕ್ಷ್ಮಿ ಸೆಜುವಾನ್, ಅಂಜಲಿ, ಪ್ರಶಾಂತ್ ಶಾಹಿ ಹಾಗೂ ಅಭೇಶ್ ಶಾಹಿ, ಗೋರಖ್ ಶಾಹಿ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಲ್ಲಿ ಗೋರಖ್ ಶಾಹಿ ಪ್ರಮುಖ ಆರೋಪಿ ಆಗಿದ್ದಾನೆ. ಕದ್ದ ಮಾಲು ಜತೆಗೆ ಕೃತ್ಯಕ್ಕೆ ಬಳಸಿದ್ದ ಎರಡು ಪಿಸ್ತೂಲ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.‌

ಮನೆ ಕೆಲಸದೊಂದಿಗೆ ಮನೆಗಳ್ಳತನ ಮಾಡಿದ ದಂಪತಿ ಅರೆಸ್ಟ್‌

ಕೆಲಸಕ್ಕಿದ್ದ ಮನೆಯಲ್ಲಿ ಚಿನ್ನಾಭರಣ ದೋಚಿ ಪರಾರಿ ಆಗಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಜಯನಗರ ಠಾಣಾ ಪೊಲೀಸರು ಕಾರ್ಯಾಚರಣೆ ನಡೆಸಿ ದಂಪತಿ ಸೇರಿ ಇವರ ಕೃತ್ಯಕ್ಕೆ ಸಹಾಯ ಮಾಡಿದ ಐವರು ಆರೋಪಿಗಳನ್ನು ಜೈಲಿಗೆ ಅಟ್ಟಲಾಗಿದೆ.

ಇದನ್ನೂ ಓದಿ: R Dhruvanarayana: ಧ್ರುವನಾರಾಯಣ್‌ ನಿಧನ ಹಿನ್ನೆಲೆ, ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆ ರದ್ದು, ನಾಯಕರ ಸಂತಾಪ

ಬಿಕಾಸ್, ಹೇಮಂತ್, ಸುಷ್ಮಿತಾ, ರೋಷನ್ ಪದಂ ಹಾಗೂ ಪ್ರೇಮ್ ಬಂಧಿತ ಆರೋಪಿಗಳಾಗಿದ್ದಾರೆ. ಒಬೇದುಲ್ಲಾ ಖಾನ್ ಎಂಬಾತನ ಮನೆಯಲ್ಲಿ ಬಿಕಾಸ್ ಹಾಗೂ ಸುಷ್ಮಿತಾ ದಂಪತಿಯು ಕೆಲಸ ಮಾಡುತ್ತಿದ್ದರು. ಬಂಧಿತರಿಂದ 292 ಗ್ರಾಂ ಚಿನ್ನಾಭರಣ, 15 ಸಾವಿರ ರೂ. ನಗದು, 168 ಗ್ರಾಂ ಬೆಳ್ಳಿ ಹಾಗೂ ವಿವಿಧ ಬ್ರ್ಯಾಂಡ್‌ನ 18 ವಾಚ್‌ಗಳು ತಲಾ‌ ಒಂದು ಟ್ಯಾಬ್ ಹಾಗೂ ಮೊಬೈಲ್ ವಶಕ್ಕೆ ಪಡೆಯಲಾಗಿದೆ.

ರಾಜ್ಯದ ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version